ETV Bharat / sitara

'ಇವಳು ಸುಜಾತಾ' ಧಾರಾವಾಹಿಯ ಅತಿಥಿ ಪಾತ್ರದಲ್ಲಿ ಟಾಕಿಂಗ್ ಸ್ಟಾರ್​ - ಗಿರಿಜಾ ಲೋಕೇಶ್

'ಎಲ್ಲಿದ್ದೆ ಇಲ್ಲಿ ತನಕ' ಸಿನಿಮಾದಲ್ಲಿ ಬ್ಯುಸಿ ಇರುವ ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್​ ಇದೀಗ ತಾವೇ ನಿರ್ಮಾಣ ಮಾಡುತ್ತಿರುವ 'ಇವಳು ಸುಜಾತಾ' ಧಾರಾವಾಹಿಯಲ್ಲಿ ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ದಸರಾ ಹಬ್ಬದ ಪ್ರಯುಕ್ತ ಧಾರಾವಾಹಿ ಒಂದು ಗಂಟೆ ಕಾಲ ಮಹಾಸಂಚಿಕೆ ರೂಪದಲ್ಲಿ ಪ್ರಸಾರವಾಗಲಿದೆ.

ಟಾಕಿಂಗ್ ಸ್ಟಾರ್​
author img

By

Published : Oct 3, 2019, 7:50 PM IST

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಇವಳು ಸುಜಾತಾ' ಧಾರಾವಾಹಿಯಲ್ಲಿ ಟಾಕಿಂಗ್ ಸ್ಟಾರ್ ನಟಿಸಲಿದ್ದಾರೆ. ಮಜಾ ಟಾಕೀಸ್ ರೂವಾರಿ ಸೃಜನ್ ಲೋಕೇಶ್ ಟಾಕಿಂಗ್ ಸ್ಟಾರ್ ಎಂದೇ ಚಿರಪರಿಚಿತ. ವಾರಾಂತ್ಯದಲ್ಲಿ ಕಲರ್ಸ್ ಸೂಪರ್ ಚಾನೆಲ್ ಮಜಾ ಟಾಕೀಸ್ ಕಾರ್ಯಕ್ರಮದ ಮೂಲಕ ವೀಕ್ಷಕರಿಗೆ ಹಾಸ್ಯದ ರಸದೌತಣ ಉಣಬಡಿಸುತ್ತಿದ್ದ ಸೃಜನ್, ಕಾರ್ಯಕ್ರಮವನ್ನು ಮುಕ್ತಾಯ ಮಾಡಿದ್ದು ಎಲ್ಲರಿಗೂ ತಿಳಿದ ವಿಷಯ.

  • " class="align-text-top noRightClick twitterSection" data="">

ಸದ್ಯಕ್ಕೆ ಸೃಜನ್ ಹರಿಪ್ರಿಯಾ ಜೊತೆಗೆ ನಟಿಸುತ್ತಿರುವ 'ಎಲ್ಲಿದ್ದೆ ಇಲ್ಲಿ ತನಕ' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. 'ಇವಳು ಸುಜಾತಾ' ಧಾರಾವಾಹಿಯನ್ನು ಕೂಡಾ ಸೃಜನ್ ನಿರ್ಮಿಸುತ್ತಿದ್ದಾರೆ. ಇದೀಗ ಆ ಧಾರಾವಾಹಿಯಲ್ಲಿ ಕೂಡಾ ಅವರು ಬಣ್ಣ ಹಚ್ಚಲಿದ್ದಾರೆ. ಧಾರಾವಾಹಿಯ ಅತಿಥಿ ಪಾತ್ರದಲ್ಲಿ ಸೃಜನ್ ಲೋಕೇಶ್ ನಾಯಕ ಪಾರ್ಥನ ಮನೆಗೆ ಆಗಮಿಸಿದ್ದು ನವರಾತ್ರಿಯ ವಿಶೇಷ ಪೂಜೆಯಲ್ಲಿ ಭಾಗವಹಿಸಲಿದ್ದಾರೆ. ಮಾತ್ರವಲ್ಲ, ಸೃಜನ್ ಅವರ ಆಗಮನದಿಂದ ಕಥೆ ರೋಚಕ ತಿರುವು ಪಡೆಯಲಿದೆ. ದಸರಾ ಹಬ್ಬದ ಪ್ರಯುಕ್ತ 'ಇವಳು ಸುಜಾತಾ' ಧಾರಾವಾಹಿ ಒಂದು ಗಂಟೆ ಕಾಲ ಮಹಾಸಂಚಿಕೆ ಪ್ರಸಾರವಾಗಲಿದೆ. ನಾಗಕನ್ನಿಕೆ ಧಾರಾವಾಹಿ ಖ್ಯಾತಿಯ, ಬಿಗ್​​​​​​​​​​​​​​​​​​​​​​​​​ಬಾಸ್ ಸ್ಫರ್ಧಿ ಮೇಘಶ್ರೀ ಸುಜಾತಾ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ. ಮೇಘಶ್ರೀ ಜೊತೆಗೆ ಗಿರಿಜಾ ಲೋಕೇಶ್, ಅಪರ್ಣಾ, ಮಂಡ್ಯ ರಮೇಶ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.

Intro:Body:
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿ ಇವಳು ಸುಜಾತಾ ದಲ್ಲಿ ಟಾಕಿಂಗ್ ಸ್ಟಾರ್ ನಟಿಸಲಿದ್ದಾರೆ. ಮಜಾ ಟಾಕೀಸ್ ನ ರೂವಾರಿ ಸೃಜನ್ ಲೋಕೇಶ್ ಟಾಕಿಂಗ್ ಸ್ಟಾರ್ ಎಂದೇ ಚಿರಪರಿಚಿತ. ವಾರಾಂತ್ಯದಲ್ಲಿ ಕಲರ್ಸ್ ಸೂಪರ್ ಚಾನೆಲ್ ನ ಮಜಾ ಟಾಕೀಸ್ ಕಾರ್ಯಕ್ರಮದ ಮೂಲಕ ವೀಕ್ಷಕರಿಗೆ ಹಾಸ್ಯದ ರಸದೌತಣ ಉಣಬಡಿಸುತ್ತಿದ್ದ ಸೃಜನ್ ಮಜಾ ಟಾಕೀಸ್ ನ್ನು ಮುಕ್ತಾಯ ಮಾಡಿದ್ದು ನಮಗೆಲ್ಲಾ ತಿಳಿದೇ ಇದೆ‌.

ಮಾತ್ರವಲ್ಲ ಸದ್ಯ ಸೃಜನ್ ಅವರು ಎಲ್ಲಿದ್ದೆ ಇಲ್ಲಿ ತನಕ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಇವಳು ಸುಜಾತಾ ಧಾರಾವಾಹಿಯ ನಿರ್ಮಾಪಕ ಸೃಜನ್ ಇದೀಗ ಧಾರಾವಾಹಿಯಲ್ಲಿ ಬಣ್ಣ ಹಚ್ಚಲಿದ್ದಾರೆ. ಹೌದು, ಇವಳು ಸುಜಾತಾ ದಲ್ಲಿ ಅತಿಥಿ ಪಾತ್ರದಲ್ಲಿ ಸೃಜನ್ ಲೋಕೇಶ್ ಅವರು ನಾಯಕ ಪಾರ್ಥನ ಮನೆಗೆ ಆಗಮಿಸಿದ್ದು ನವರಾತ್ರಿಯ ವಿಶೇಷ ಪೂಜೆಯಲ್ಲಿ ಭಾಗವಹಿಸಲಿದ್ದಾರೆ. ಮಾತ್ರವಲ್ಲ ಸೃಜನ್ ಅವರ ಆಗಮನದಿಂದ ಕಥೆ ರೋಚಕ ತಿರುವು ಪಡೆಯಲಿದೆ.

https://www.facebook.com/102459466602897/posts/1369421609906670/

ದಸರಾ ಹಬ್ಬದ ಪ್ರಯುಕ್ತ ಇವಳು ಸುಜಾತಾ ಧಾರಾವಾಹಿ ಒಂದು ಗಂಟೆಯ ಮಹಾಸಂಚಿಕೆ ಪ್ರಸಾರವಾಗಲಿದೆ. ನಾಗಕನ್ನಿಕೆ, ಬಿಗ್ ಬಾಸ್ ಸ್ಫರ್ಧಿ ಮೇಘಶ್ರೀ ಸುಜಾತಾ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ. ಆ ಮೂಲಕ ಮತ್ತೊಮ್ಮೆ ವೀಕ್ಷಕರಿಗೆ ಹತ್ತಿರವಾಗ ಹೊರಟಿದ್ದಾರೆ. ಇನ್ನು ಮೇಘಶ್ರೀಯ ಜೊತೆಗೆ ಗಿರಿಜಾ ಲೋಕೇಶ್, ಅಪರ್ಣಾ, ಮಂಡ್ಯ ರಮೇಶ್ ಮುಖ್ಯಭೂಮಿಕೆಯಲ್ಲಿದ್ದಾರೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.