ಗಣೇಶೋತ್ಸವ ಬಂತೆಂದರೆ ಸಾಕು ಕನ್ನಡ ವಾಹಿನಿಗಳು ವಿಶೇಷ ಮನರಂಜನೆ ನೀಡಲು ಸಜ್ಜಾಗಿ ನಿಂತಿರುತ್ತವೆ. ಜೊತೆಗೆ ವಿಭಿನ್ನ ಕಾರ್ಯಕ್ರಮಗಳ ಮೂಲಕ ಹಬ್ಬದ ಸಂಭ್ರಮ ಇಮ್ಮಡಿಗೊಳಿಸುತ್ತವೆ. ಪ್ರತಿ ಬಾರಿಯಂತೆ ಈ ಬಾರಿಯ ಗಣೇಶೋತ್ಸವಕ್ಕೆ ವಾಹಿನಿಗಳು ಭರಪೂರ ಮನರಂಜನೆಯನ್ನು ಹೊತ್ತು ತರಲು ಸಜ್ಜಾಗಿವೆ. ಈಗಾಗಲೇ ಝೀ ಕನ್ನಡ ವಾಹಿನಿ ಜನಪ್ರಿಯ ಮೆಗಾ ಧಾರಾವಾಹಿಗಳ ಮಹಾ ಸಂಗಮ ನಡೆಸಲು ತಯಾರಿ ನಡೆಸಿವೆ.
ಗಟ್ಟಿಮೇಳ ಹಾಗೂ ಜೊತೆ ಜೊತೆಯಲಿ ಸೀರಿಯಲ್ಗಳ ಸಂಗಮ ಈ ವಾರ ನಡೆಯಲಿದೆ. ಆಗಸ್ಟ್ 17 ರಿಂದ 22 ರವರೆಗೆ ರಾತ್ರಿ 8 ರಿಂದ 9 ರವರೆಗೆ ಜೊತೆ ಜೊತೆಯಲಿ ಹಾಗೂ ಗಟ್ಟಿಮೇಳ ಧಾರಾವಾಹಿಗಳ ಮಹಾಸಂಗಮವಾಗಲಿದೆ. ಜೊತೆ ಜೊತೆಯಲಿ ಧಾರಾವಾಹಿಯ ಆರ್ಯವರ್ಧನ್ ಹಾಗೂ ಗಟ್ಟಿಮೇಳ ಧಾರಾವಾಹಿಯ ವೇದಾಂತ್ ವಸಿಷ್ಠ ಇಬ್ಬರೂ ಬ್ಯುಸಿನೆಸ್ ಮ್ಯಾನ್ಗಳಾಗಿದ್ದು, ಈ ಪಾತ್ರದ ಮೂಲಕ ಕಿರುತೆರೆ ವೀಕ್ಷಕರನ್ನು ಸೆಳೆದಿದ್ದಾರೆ. ಇದೀಗ ಈ ಪಾತ್ರಗಳನ್ನು ಜೊತೆಯಾಗಿ ತೆರೆಯ ಮೇಲೆ ನೋಡಿ ಕಣ್ತುಂಬಿಕೊಳ್ಳುವ ಅವಕಾಶ ಪ್ರೇಕ್ಷಕರಿಗೆ ಒದಗಿ ಬರಲಿದೆ. ಒಂದು ಗಂಟೆ ಕಾಲ ವೀಕ್ಷಕರಿಗೆ ಮನರಂಜನೆಯ ರಸದೌತಣ ಸಿಗುವುದು ಗ್ಯಾರಂಟಿ.
- " class="align-text-top noRightClick twitterSection" data="
">