ETV Bharat / sitara

ಲಾಕ್ ಡೌನ್​ ಟೈಂನಲ್ಲಿ ಶ್ವೇತಾ ಚೆಂಗಪ್ಪ ಏನ್ ಮಾಡ್ತಿದ್ದಾರೆ? - photo uploaded to instagram

ಮಗನ ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿರುವ ಶ್ವೇತಾ ಇನ್​ಸ್ಟಾಗ್ರಾಂನಲ್ಲಿ ಸಕ್ರಿಯರಾಗಿದ್ದು, ಹಳೆಯ ಫೊಟೋಗಳನ್ನು ಅಪ್​ಲೋಡ್ ಮಾಡುತ್ತಿದ್ದಾರೆ. ಇದೀಗ ಪ್ಯಾರಿಸ್​ನ ಡಿಸ್ನಿಲ್ಯಾಂಡ್​ಗೆ ತಮ್ಮ ಪತಿ ಕಿರಣ್ ಅವರೊಂದಿಗೆ ಭೇಟಿ ಕೊಟ್ಟಾಗಿನ ಫೊಟೋವನ್ನು ಅಪ್​ಲೋಡ್ ಮಾಡಿದ್ದಾರೆ.

shwetha chengappa
shwetha chengappa
author img

By

Published : May 16, 2020, 8:06 AM IST

ಕಳೆದ ವರ್ಷ ಗಂಡು ಮಗುವಿಗೆ ಜನ್ಮ ನೀಡಿರುವ ಕಿರುತೆರೆ ನಟಿ ಶ್ವೇತಾ ಚೆಂಗಪ್ಪ ಲಾಕ್ ಡೌನ್ ಸಮಯವನ್ನು ಮಗನೊಂದಿಗೆ ಕಳೆಯುತ್ತಿದ್ದಾರೆ.

ಕಾದಂಬರಿ, ಸುಮತಿ, ಅರುಂಧತಿ ಧಾರಾವಾಹಿಯಲ್ಲಿ ಅಭಿನಯಿಸಿರುವ ಶ್ವೇತಾ ಚೆಂಗಪ್ಪ ವೀಕ್ಷಕರಿಗೆ ಮತ್ತಷ್ಟು ಹತ್ತಿರವಾಗಿದ್ದು ಮಜಾ ಟಾಕೀಸ್ ರಾಣಿಯಾಗಿ ಬದಲಾದ ಬಳಿಕವೇ. ವಾರಾಂತ್ಯದಲ್ಲಿ ಮಜಾ ಟಾಕೀಸ್ ರಾಣಿಯಾಗಿ ಹಾಸ್ಯದ ಮೂಲಕ ಮನರಂಜನೆಯ ಮಹಾಪೂರ ಉಣಿಸುತ್ತಿದ್ದ ಶ್ವೇತಾ ಇದೀಗ ಮುದ್ದು ರಾಜಕುಮಾರ ಜಿಯಾನ್ ಅಯ್ಯಪ್ಪ ಅವರೊಂದಿಗೆ ಸಮಯ ಕಳೆಯುತ್ತಿದ್ದಾರೆ.

shwetha chengappa shares old photo
ಮಗನೊಂದಿಗೆ ಶ್ವೇತಾ ಚೆಂಗಪ್ಪ

ಮಗನ ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿರುವ ಶ್ವೇತಾ ಇನ್​ಸ್ಟಾಗ್ರಾಂನಲ್ಲಿ ಸಕ್ರಿಯರಾಗಿದ್ದು ಹಳೆಯ ಫೊಟೋಗಳನ್ನು ಅಪ್​ಲೋಡ್ ಮಾಡುತ್ತಿದ್ದಾರೆ. ಇದೀಗ ಪ್ಯಾರಿಸ್​ನ ಡಿಸ್ನಿಲ್ಯಾಂಡ್​ಗೆ ತಮ್ಮ ಪತಿ ಕಿರಣ್ ಅವರೊಂದಿಗೆ ಭೇಟಿ ಕೊಟ್ಟಾಗಿನ ಫೊಟೋವನ್ನು ಅಪ್​ಲೋಡ್ ಮಾಡಿರುವ ಶ್ವೇತಾ ಲಾಕ್ ಡೌನ್ ಸಮಯದಲ್ಲಿ ಒಂದಷ್ಟು ಹಳೆಯ ಫೊಟೋಗಳನ್ನು ಶೇರ್ ಮಾಡುತ್ತಿದ್ದಾರೆ.

ಈ ಫೊಟೋಗಳನ್ನು ನೋಡುವಾಗ ಕಳೆದು ಹೋದ ಸುಂದರ ಕ್ಷಣಗಳು ನೆನಪಾಗುತ್ತದೆ ಎಂದು ಬರೆದಿರುವ ಶ್ವೇತಾ ಡಿಸ್ನಿಲ್ಯಾಂಡ್​ಗೆ ಹೋದದ್ದು ನಾಲ್ಕು ವರ್ಷಗಳ ಹಿಂದೆ. 2016ರಲ್ಲಿ ಪ್ಯಾರಿಸ್​ಗೆ ಹೋದರೂ ನಿನ್ನೆ ಮೊನ್ನೆ ಹೋದಂತಿದೆ ಎಂದು ಬರೆದಿದ್ದಾರೆ.

shwetha chengappa shares old photo
ನಾಲ್ಕು ತಲೆಮಾರಿನ ಕುಟುಂಬದ ಫೊಟೋ

ಇದಕ್ಕಿಂತಲೂ ಮೊದಲು ಮದರ್ಸ್ ಡೇಯಂದು ನಾಲ್ಕು ತಲೆಮಾರಿನ ಕುಟುಂಬದ ಫೊಟೋ ಹಾಕಿದ್ದ ಶ್ವೇತಾ, ಸಾಕಷ್ಟು ಸುದ್ದಿಯಲ್ಲಿದ್ದರು. ಅಜ್ಜಿ ಜಾನಕಿ ಅವ್ಬಯ್ಯ, ಅಮ್ಮ ತಾರಾ ಚೆಂಗಪ್ಪ, ಶ್ವೇತಾ ಚೆಂಗಪ್ಪ, ಜಿಯಾನ್ ಅಯ್ಯಪ್ಪ ಜೊತೆಗಿನ ನಾಲ್ಕು ತಲೆಮಾರಿನ ಫೊಟೋ ವೀಕ್ಷಕರ ಮೆಚ್ಚುಗೆಗೂ ಪಾತ್ರವಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.