ETV Bharat / sitara

ಬಿಗ್ ಬಾಸ್ ಮನೆಯಿಂದ ಶುಭಾ ಪೂಂಜಾ ಎಲಿಮಿನೇಟ್!? - ಬಿಗ್ ಬಾಸ್ sisnf 8

ಶಮಂತ್ ಕೂಡ ಬಿಗ್ ಬಾಸ್ ಮನೆಯ ಲಕ್ಕಿಸ್ಟಾರ್ ಆಗಿದ್ದು, ಕೊನೆಯ ವಾರದವರೆಗೂ ಉಳಿದುಕೊಂಡಿದ್ದಾರೆ. ಪ್ರತಿದಿನ ಒಂದೊಂದು ಹಾಡು ಹಾಡುವ ಮೂಲಕ ವೋಟ್ ಗಳಿಸಿದ್ದಾರೆ. ಇನ್ನುಳಿದಂತೆ ಮನೆಯ ಏಳು ಸದಸ್ಯರಲ್ಲಿ ಟಾಪ್ ಫೈ ಹಂತಕ್ಕೆ ಯಾವ ಸದಸ್ಯರು ಹೆಜ್ಜೆ ಇಡಲಿದ್ದಾರೆ ಎಂಬುದು ಇನ್ನು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ..

ಶುಭಾ ಪೂಂಜಾ ಎಲಿಮಿನೇಟ್
ಶುಭಾ ಪೂಂಜಾ ಎಲಿಮಿನೇಟ್
author img

By

Published : Jul 31, 2021, 8:07 PM IST

ಬಿಗ್ ಬಾಸ್ ಫಿನಾಲೆಗೆ ಇನ್ನೊಂದು ವಾರ ಬಾಕಿ ಇರುವಂತೆ ನಟಿ ಶುಭಾ ಪೂಂಜಾ ಎಲಿಮಿನೇಟ್ ಆಗಿದ್ದಾರೆ ಎನ್ನಲಾಗಿದೆ. ನಟಿ ಶುಭಾ ಪೂಂಜಾ ಮನೆಯಲ್ಲಿ ಎಲ್ಲರೊಂದಿಗೆ ಬೆರೆತು ಮನರಂಜನೆ ನೀಡುತ್ತಿದ್ದರು. ಆದರೆ, ಟಾಸ್ಕ್‌ಗಳಲ್ಲಿ ಮಾತ್ರ ಹಿಂದುಳಿದಿದ್ದರು.

ಶುಭಾ ಪೂಂಜಾ
ಶುಭಾ ಪೂಂಜಾ

ವಿಭಿನ್ನ ಶೈಲಿಯಲ್ಲಿ ತಮ್ಮತನದಿಂದ ಮನೆಯಲ್ಲಿ ಎಲ್ಲರನ್ನೂ ರಂಜಿಸುತ್ತಿದ್ದ ಶುಭಾ, ಬಿಗ್ ಬಾಸ್ ಆರಂಭವಾದ ದಿನದಿಂದಲೂ ಪ್ರತಿವಾರ ನಾಮಿನೇಟ್ ಆಗುತ್ತಿದ್ದರು. ಶುಭಾ ಪೂಂಜಾ ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಇದ್ದಾರೆ. ಅಲ್ಲದೆ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಜೊತೆಗೆ ಬಿಗ್​​ಬಾಸ್​ ಮನೆಯಲ್ಲಿ ತಮ್ಮದೇ ಆದ ಶೈಲಿಯಲ್ಲಿ ಹೊರ ಜಗತ್ತಿಗೆ ಪರಿಚಯಿಸಿಕೊಂಡಿದ್ದಾರೆ.

ಶುಭಾ ಪೂಂಜಾ
ಶುಭಾ ಪೂಂಜಾ

ತಮ್ಮ ತುಂಟತನ ಹಾಗೂ ಮುಗ್ಧತೆಯಿಂದ ಎಲ್ಲರ ಮೆಚ್ಚುಗೆ ಗಳಿಸಿದ್ದರು. ಈ ವಾರ ಮನೆಯಲ್ಲಿ ಕ್ಯಾಪ್ಟನ್ ಆಗಿದ್ದ ದಿವ್ಯ ಉರುಡುಗ ಹೊರತುಪಡಿಸಿ ಉಳಿದ ಎಲ್ಲಾ ಸದಸ್ಯರು ನಾಮಿನೇಟ್ ಆಗಿದ್ದರು. ಅಲ್ಲದೇ, ಇದೀಗ ಪ್ರಶಾಂತ್ ಸಂಬರಗಿ ಕೂಡ ಫಿನಾಲೆಗೆ ಕೊನೆಯ ದಿನಗಳು ಉಳಿದಿರುವಂತೆ ತಮ್ಮ ಆಟ ಹಾಗೂ ಬುದ್ಧಿವಂತಿಕೆಯಿಂದ ವೀಕ್ಷಕರ ಮನ ಗೆಲ್ಲುತ್ತಿದ್ದಾರೆ.

ಇದನ್ನೂ ಓದಿ : ಬಿಗ್ ಬಾಸ್ ಸೀಸನ್ 8 ಗೆಲ್ಲೋದು ಇವರೇನಾ..?

ಹಾಗೆಯೇ, ಶಮಂತ್ ಕೂಡ ಬಿಗ್ ಬಾಸ್ ಮನೆಯ ಲಕ್ಕಿಸ್ಟಾರ್ ಆಗಿದ್ದು, ಕೊನೆಯ ವಾರದವರೆಗೂ ಉಳಿದುಕೊಂಡಿದ್ದಾರೆ. ಪ್ರತಿದಿನ ಒಂದೊಂದು ಹಾಡು ಹಾಡುವ ಮೂಲಕ ವೋಟ್ ಗಳಿಸಿದ್ದಾರೆ. ಇನ್ನುಳಿದಂತೆ ಮನೆಯ ಏಳು ಸದಸ್ಯರಲ್ಲಿ ಟಾಪ್ ಫೈ ಹಂತಕ್ಕೆ ಯಾವ ಸದಸ್ಯರು ಹೆಜ್ಜೆ ಇಡಲಿದ್ದಾರೆ ಎಂಬುದು ಇನ್ನು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.