ಪ್ರತಿದಿನ ನಡೆಯುವ ನೈಜ ಘಟನೆ ಆಧಾರಿತ ಕ್ರೈಂ ಸ್ಟೋರಿ, ಕ್ರೈಂ ಡೈರಿ, ಸಿಐಡಿ ಕರ್ನಾಟಕದ ಸಾಲಿಗೆ ಹೊಸದಾಗಿ ಸೇರ್ಪಡೆಯಾಗುತ್ತಿದೆ 'ಶಾಂತಂಪಾಪಂ'. ಕಲರ್ಸ್ ಸೂಪರ್ ವಾಹಿನಿಯಲ್ಲಿ ವಾರಾಂತ್ಯದಲ್ಲಿ ಪ್ರಸಾರವಾಗುತ್ತಿದ್ದ ಈ ಕ್ರೈಂ ಗೆ ಸಂಬಂಧಿಸಿದ ಧಾರಾವಾಹಿಯಲ್ಲಿ ನೈಜವಾಗಿ ನಡೆದ ಸನ್ನಿವೇಶಗಳನ್ನು ವೀಕ್ಷಕರ ಮುಂದೆ ತೋರಿಸಲಾಗುತ್ತಿತ್ತು. ಇದೀಗ ಮತ್ತೆ ಎರಡನೇ ಸೀಸನ್ ಆರಂಭವಾಗುತ್ತಿದೆ.
- " class="align-text-top noRightClick twitterSection" data="
">
ಇಂದಿನ ಕಾಲದಲ್ಲಿ ನಾವು ಅದೆಷ್ಟು ಜಾಗರೂಕರಾಗಿದ್ದರೂ ಅದು ಕಡಿಮೆಯೇ ಎಂಬ ಸಂದೇಶವನ್ನು 'ಶಾಂತಂ ಪಾಪಂ' ಧಾರಾವಾಹಿ ಮೂಲಕ ಹೇಳಲಾಗುತ್ತಿತ್ತು. ವಾರಾಂತ್ಯದಲ್ಲಿ ಪ್ರಸಾರವಾಗುತ್ತಿದ್ದ 'ಶಾಂತಂ ಪಾಪಂ' ಇದೀಗ ವಾರದ ಐದು ದಿನಗಳೂ ಪ್ರಸಾರವಾಗಲಿದೆ. ಪ್ರತಿದಿನವೂ ವಿಭಿನ್ನ ಕಥೆಯ ಮೂಲಕ 'ಶಾಂತಂ ಪಾಪಂ' ನಿಮ್ಮ ಮುಂದೆ ಬರಲಿದೆ. ನಿಮ್ಮ ನೆಚ್ಚಿನ ಕಲರ್ಸ್ ಸೂಪರ್ ವಾಹಿನಿಯಲ್ಲಿ ಇಂದಿನಿಂದ 'ಶಾಂತಂ ಪಾಪಂ' ಆರಂಭವಾಗಲಿದ್ದು, ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿ ರಾತ್ರಿ 8 ಗಂಟೆಗೆ ಈ ಕ್ರೈಂ ಧಾರಾವಾಹಿ ಪ್ರಸಾರವಾಗಲಿದೆ. ಅಪರಾಧಕ್ಕೆ ಸಂಬಂಧಿಸಿದ ಧಾರಾವಾಹಿಯಾದರೂ ಕೂಡಾ ಬಣ್ಣದ ಜಗತ್ತಿಗೆ ಇದು ಕೊಟ್ಟ ಕೊಡುಗೆ ಅಪಾರ.ಈ ಧಾರಾವಾಹಿ ಮೂಲಕ ಅದೆಷ್ಟೋ ಹೊಸ ಪ್ರತಿಭೆಗಳು ನಟನಾ ಜಗತ್ತಿಗೆ ಕಾಲಿಟ್ಟು ಆ ಮೂಲಕ ಬಣ್ಣದ ಯಾನ ಆರಂಭಿಸಿದ್ದಾರೆ. ಸಮಾಜಕ್ಕೆ ಉತ್ತಮ ಸಂದೇಶ ಸಾರುವ ಈ ಧಾರಾವಾಹಿಯನ್ನು ವಾರಾಂತ್ಯದಲ್ಲಿ ಮಾತ್ರ ನೋಡುತ್ತಿದ್ದವರಿಗೆ ಇದೀಗ ವಾರದ ಐದು ದಿನಗಳೂ ನೋಡುವ ಭಾಗ್ಯ ಸಿಕ್ಕಿದೆ.