ಬೆಂಗಳೂರು: ಕೋವಿಡ್ ಎರಡನೆಯ ಅಲೆಯಲ್ಲಿ ಸಾಕಷ್ಟು ಆರೋಗ್ಯ ಕಾರ್ಯಕರ್ತರು, ಮುಖ್ಯವಾಗಿ ವೈದ್ಯರ ಮೇಲೆ ಹಲ್ಲೆಗಳಾದ ಉದಾಹರಣೆಗಳಿವೆ. ಈ ಘಟನೆಗಳಿಗೆ ಎಲ್ಲೆಡೆ ಖಂಡನೆ ವ್ಯಕ್ತವಾಗುತ್ತಿದೆ. ಇದೀಗ ಕಿರುತೆರೆಯ ನಟಿಯರಾದ ರೂಪಿಕಾ ಮತ್ತು ದೀಪಿಕಾ ಮಾತನಾಡಿದ್ದು ವೈದ್ಯರ ಮೇಲೆ ಹಲ್ಲೆ ನಡೆಸದೆ ಸಂಯಮ ಕಾಯ್ದುಕೊಳ್ಳುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಕಿರುತೆರೆಯ ನಟಿ ರೂಪಿಕಾ ವಿಡಿಯೋ ಮೂಲಕ ಮಾತನಾಡಿ, ವೈದ್ಯೋ ನಾರಾಯಣೋ ಹರಿ ಎಂದು ಹೇಳುತ್ತೇವೆ. ಹದಿನಾಲ್ಕು ತಿಂಗಳಿಗಿಂತ ಅಧಿಕ ಕಾಲ ತಮ್ಮ ಆರೋಗ್ಯದ ಬಗ್ಗೆ ಯೋಚಿಸದೆ ಕುಟುಂಬದಿಂದ ದೂರ ಇದ್ದುಕೊಂಡು ನಮಗೋಸ್ಕರ ಸೇವೆ ಸಲ್ಲಿಸುತ್ತಿರುವ ಎಲ್ಲಾ ಫ್ರಂಟ್ ಲೈನ್ ವಾರ್ರಿಯರ್ಸ್ ಹಾಗೂ ಡಾಕ್ಟರ್ಸ್ ಗ್ರೇಟ್, ಸಲ್ಯೂಟ್ ಮಾಡುತ್ತೇನೆ ಎಂದರು.
ವೈದ್ಯರ ಮೇಲೆ ಹಲ್ಲೆ ಪ್ರಕರಣಗಳನ್ನು ಯಾರೂ ಕೂಡ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಈ ಸಂದರ್ಭದಲ್ಲಿ ಎಲ್ಲರೂ ವೈದ್ಯರ ಜೊತೆ ನಿಲ್ಲಬೇಕು ಎಂದು ಅವರು ಕೇಳಿಕೊಂಡಿದ್ದಾರೆ.
ಇದನ್ನೂ ಓದಿ:'ನಯನತಾರಾ' ಧಾರಾವಾಹಿಯ ರಾಹುಲ್ ಪಾತ್ರಧಾರಿಯ ಬಗ್ಗೆ ನಿಮಗೆಷ್ಟು ಗೊತ್ತು?
'ಕುಲವಧು' ಖ್ಯಾತಿಯ ದೀಪಿಕಾ ಮಾತನಾಡಿ, ಕೋವಿಡ್ ಪರಿಸ್ಥಿತಿ ಅದರಲ್ಲೂ ಎರಡನೇ ಅಲೆ ತುಂಬಾ ಕೈಮೀರಿ ಹೋಗಿದೆ. ನಮ್ಮ ಫ್ರಂಟ್ ಲೈನ್ ವಾರಿಯರ್ಸ್ ಅವರದೇ ಆದ ರೀತಿಯಲ್ಲಿ ತುಂಬಾ ಕಷ್ಟಪಡುತ್ತಿದ್ದಾರೆ. ವೈದ್ಯರು ಮನೆಗೂ ಹೋಗದೆ ಕುಟುಂಬದವರನ್ನೂ ಕೂಡ ನೋಡದೆ ರೋಗಿಗಳಿಗೆ ಚಿಕಿತ್ಸೆಯನ್ನು ಕೊಡುತ್ತಿದ್ದಾರೆ. ಈ ಪರಿಸ್ಥಿತಿಯಲ್ಲಿ ವೈದ್ಯರ ಮೇಲೆ ಹಲ್ಲೆ ಮಾಡುವುದಕ್ಕೆ ಹೋಗಬೇಡಿ ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ತನ್ನ ನೆರಳಿಗೆ ಹಾಯ್ ಎಂದ ಯಶ್ ಮುದ್ದು ಮಗಳು ಐರಾ.... VIDEO