ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಫೋಟೋ ನೋಡಿ ರಕ್ಷ್ ಮತ್ತು ನಮ್ರತಾ ಮತ್ತೆ ಒಟ್ಟಿಗೆ ನಟಿಸುತ್ತಿದ್ದಾರಾ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಅದರಲ್ಲೂ ಈ ಇಬ್ಬರೂ ಕಲಾವಿದರ ಜೊತೆಗೆ ನಿರ್ದೇಶಕ ರಾಮ್ ಜೀ ಇರುವುದನ್ನು ನೋಡಿ ರಕ್ಷ್ ಮತ್ತು ನಮ್ರತಾ ನಟನೆಯ ಮತ್ತೊಂದು ಹೊಸ ಸೀರಿಯಲ್ ಬರಲಿದೆ ಎಂದು ಲೆಕ್ಕಚಾರ ಹಾಕುತ್ತಿದ್ದರೆ ನಿಮ್ಮ ಊಹೆ ತಪ್ಪು.
ನಿರ್ದೇಶಕರ ಜೊತೆ ಈ ಇಬ್ಬರ ಸೆಲ್ಫಿ ನೋಡಿದರೆ ಪ್ರತಿಯೊಬ್ಬರಿಗೂ ಹಾಗನಿಸುವುದು ಸಹಜ. ಏಕೆಂದರೆ, ಈ ಹಿಂದೆ ರಕ್ಷ್ ಮತ್ತು ನಮ್ರತಾ ರಾಮ್ ಜೀ ನಿರ್ದೇಶನದ ಖ್ಯಾತ ಧಾರಾವಾಹಿ ಪುಟ್ಟ ಗೌರಿ ಮದುವೆ ಸೀರಿಯಲ್ನಲ್ಲಿ ಒಟ್ಟಿಗೆ ನಟಿಸಿದ್ದರು. ಆದರೆ, ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಸದ್ಯ ಕನ್ನಡ ಧಾರಾವಾಹಿಗಳ ಚಿತ್ರೀಕರಣ ಹೈದರಾಬಾದ್ನಲ್ಲಿ ನಡೆಯುತ್ತಿದೆ. ಹಾಗಾಗಿ, ಇಲ್ಲಿ ಪ್ರತಿ ಧಾರಾವಾಹಿಗಳ ನಟ-ನಟಿಯರು ಎದುರಾಗುತ್ತಿದ್ದಾರೆ.
ಸದ್ಯ ಜೀ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಾಗಿಣಿ-2 ಧಾರಾವಾಹಿಯನ್ನು ರಾಮ್ ಜೀ ನಿರ್ದೇಶಿಸುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ನಾಯಕಿಯಾಗಿ ನಮ್ರತಾ ಗೌಡ ನಟಿಸುತ್ತಿದ್ದಾರೆ. ಇದೇ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ 'ಗಟ್ಟಿಮೇಳ' ನಾಯಕನಾಗಿ ರಕ್ಷ್ ನಟಿಸುತ್ತಿದ್ದಾರೆ. ಹೈದರಾಬಾದ್ನಲ್ಲಿ ಚಿತ್ರೀಕರಣದ ವೇಳೆ ರಕ್ಷ್, ನಮ್ರತಾ ಮತ್ತು ರಾಮ್ ಜೀ ಭೇಟಿಯಾಗಿದ್ದು, ಸದ್ಯ ಅವರು ಒಟ್ಟಿಗೆ ತೆಗೆದುಕೊಂಡ ಸೆಲ್ಫಿಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಈ ಫೋಟೋಗಳನ್ನು ನೋಡಿ ಹಲವರು ಇವರಿಬ್ಬರು ಒಟ್ಟಿಗೆ ನಟಿಸುತ್ತಿದ್ದಾರಾ ಎಂದು ಕನ್ಫ್ಯೂಸ್ ಆಗಿದ್ದರು.
ಕೆಲವು ದಿನಗಳ ಹಿಂದೆಯಷ್ಟೇ ಅಗ್ನಿ ಸಾಕ್ಷಿ ಧಾರಾವಾಹಿ ನಟಿಯರಾದ ಅನುಷಾ ರಾವ್, ಪ್ರಿಯಾಂಕಾ ಶಿವಣ್ಣ ಮತ್ತು ಇಶಿತಾ ವರ್ಷ ಒಟ್ಟಿಗೆ ಕಾಣಿಸಿಕೊಂಡ ಫೋಟೋಗಳು ಹೀಗೆಯೇ ವೈರಲ್ ಆಗಿದ್ದವು.
ಇದನ್ನೂ ಓದಿ: ಹೈದರಾಬಾದ್ನಲ್ಲಿ 'ಸರಸು' ಧಾರಾವಾಹಿ ಚಿತ್ರೀಕರಣ