ಬಿಗ್ಬಾಸ್ ಸೀಸನ್ ಏಳರಲ್ಲಿ 9ನೇ ವಾರ ಕಳೆದಿದ್ದು ಈ ವಾರ ಮನೆಯಲ್ಲಿ ಹಿರಿಯ ಸದಸ್ಯರಾಗಿದ್ದುಕೊಂಡು 62 ದಿನಗಳ ಕಾಲ ಉತ್ತಮ ಆಟವಾಡಿದ್ದ ರಾಜು ತಾಳಿಕೋಟೆಯವರು ಇಂದು ಮನೆಯಿಂದ ಹೊರ ಹೋಗಿದ್ದಾರೆ.
ಹೌದು, ರಂಗಭೂಮಿ ಕಲಾವಿದ ರಾಜು ತಾಳಿಕೋಟೆ ಮನೆಯಿಂದ ಹೊರಬಂದಿದ್ದಾರೆ. ಈ ವಾರ ಮನೆಯಿಂದ ಹೊರ ಹೋಗಲು ಒಟ್ಟು 7 ಮಂದಿ ನಾಮಿನೇಟ್ ಆಗಿದ್ದರು. ಕ್ಯಾಪ್ಟನ್ ಚಂದನಾ ಆಯ್ಕೆ ಪ್ರಕಾರ, ಕಿಶನ್ ನೇರವಾಗಿ ನಾಮಿನೇಟ್ ಆಗಿದ್ದರು.
ಕಳೆದ ವಾರ ಮನೆಯಿಂದ ಹೊರ ಬಂದ ರಕ್ಷಾ ಸೋಮಶೇಖರ್ ಚಂದನ್ ಆಚಾರ್ ಅವರನ್ನು ನೇರವಾಗಿ ನಾಮಿನೇಟ್ ಮಾಡಿದ್ದರು. ಉಳಿದಂತೆ ಶೈನ್, ವಾಸುಕಿ,ಚೈತ್ರಾ ಕೋಟೂರ್, ಭೂಮಿ ಶೆಟ್ಟಿ, ದೀಪಿಕಾ ಹಾಗೂ ರಾಜು ತಾಳಿಕೋಟೆ ಅವರು ನಾಮಿನೇಷನ್ ಪ್ರಕ್ರಿಯೆಯಲ್ಲಿ ಹೊರ ಹೋಗಲು ನಾಮಿನೇಟ್ ಆದರು.
ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ವಾರದ ಕುರಿತ ಮಾತುಕತೆಯಲ್ಲಿ ಮನೆಯ ಸದಸ್ಯರನ್ನು ಈ ವಾರದ ರಾಕ್ಷಸರು ಹಾಗೂ ಗಂಧರ್ವರ ಟಾಸ್ಕ್ ಬಗ್ಗೆ ಸುದೀಪ್ ಅವರು ಮಾತನಾಡಿಸಿದರು. ಒಬ್ಬೊಬ್ಬರಾಗಿ ಸೇಫ್ ಆದರು. ಕೊನೆಯಲ್ಲಿ ಚೈತ್ರಾ ಕೋಟೂರ್, ಚಂದನ್ ಆಚಾರ್ ಹಾಗೂ ರಾಜು ತಾಳಿಕೋಟೆ ಉಳಿದುಕೊಂಡಿದ್ದರು. ಉಳಿದ ಮೂವರಲ್ಲಿ ಈ ವಾರ ಮನೆಯಿಂದ ರಾಜು ತಾಳಿಕೋಟೆ ಹೊರ ಬಂದಿದ್ದಾರೆ.
ಇನ್ನುಳಿದಂತೆ ಶೈನ್, ವಾಸುಕಿ, ಭೂಮಿ ಶೆಟ್ಟಿ, ದೀಪಿಕಾ, ಚೈತ್ರಾ ಕೊಟ್ಟೂರು, ಚಂದನ್ ಆಚಾರ್, ಕಿಶನ್ ಸೇಫ್ ಆಗಿದ್ದು 10ನೇ ವಾರಕ್ಕೆ ಕಾಲಿಟ್ಟಿದ್ದಾರೆ. ಮನೆಯಿಂದ ಹೊರಬರಲಿರುವ ರಾಜು ತಾಳಿಕೋಟೆ ಸೂಪರ್ ಸಂಡೇ ವಿತ್ ಸುದೀಪ್ ಸಂಚಿಕೆಯಲ್ಲಿ ರಾಜು ಅವರನ್ನು ಮಾತನಾಡಿಸಲಿದ್ದಾರೆ.