ETV Bharat / sitara

ಕಿರುತೆರೆಯಲ್ಲಿ ಪವರ್ ಸ್ಟಾರ್​​ ಹುಟ್ಟುಹಬ್ಬ ವಿಶೇಷ ಆಚರಣೆ - ಮಾರ್ಚ್ 17 ರಂದು ಪುನೀತ್ ರಾಜ್​​ಕುಮಾರ್ ಹುಟ್ಟುಹಬ್ಬ

ಕಲರ್ಸ್ ವಾಹಿನಿಯಲ್ಲಿ ಆರಂಭವಾಗಿರುವ ಹಾಡು ಕರ್ನಾಟಕ ರಿಯಾಲಿಟಿ ಶೋನಲ್ಲಿ ಅಪ್ಪು ಬರ್ತಡೇ ಸಂಭ್ರಮ ನಡೆಯಲಿದೆ. ಅಂದರೆ ಈ ವಾರ ಸ್ಪರ್ಧಿಗಳು ಪುನೀತ್ ರಾಜ್ ಕುಮಾರ್ ಅಭಿನಯದ ಚಿತ್ರಗಳನ್ನು ಹಾಡುವ ಮೂಲಕ ಪ್ರೇಕ್ಷಕರಿಗೆ ಗಾಯನದ ರಸದೌತಣವನ್ನು ಉಣಬಡಿಸಲಿದ್ದಾರೆ.

Puneet Rajkumar
ಪುನೀತ್ ರಾಜ್​​ಕುಮಾರ್​
author img

By

Published : Mar 13, 2020, 7:44 PM IST

ಮಾರ್ಚ್ 17 ರಂದು ಪವರ್ ಸ್ಟಾರ್ ಪುನೀತ್ ರಾಜ್​​ಕುಮಾರ್ 45ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಈ ಬಾರಿ ಪುನೀತ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲವಾದರೂ ಕಿರುತೆರೆಯಲ್ಲಿ ಅವರ ಹುಟ್ಟುಹಬ್ಬವನ್ನು ಕಿರುತೆರೆಯಲ್ಲಿ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ.

Power star
ಪವರ್ ಸ್ಟಾರ್

ಕಲರ್ಸ್ ವಾಹಿನಿಯಲ್ಲಿ ಆರಂಭವಾಗಿರುವ ಹಾಡು ಕರ್ನಾಟಕ ರಿಯಾಲಿಟಿ ಶೋನಲ್ಲಿ ಅಪ್ಪು ಬರ್ತಡೇ ಸಂಭ್ರಮ ನಡೆಯಲಿದೆ. ಅಂದರೆ ಈ ವಾರ ಸ್ಪರ್ಧಿಗಳು ಪುನೀತ್ ರಾಜ್ ಕುಮಾರ್ ಅಭಿನಯದ ಚಿತ್ರಗಳನ್ನು ಹಾಡುವ ಮೂಲಕ ಪ್ರೇಕ್ಷಕರಿಗೆ ಗಾಯನದ ರಸದೌತಣವನ್ನು ಉಣಬಡಿಸಲಿದ್ದಾರೆ. 'ಹಾಡು ಕರ್ನಾಟಕ' ದ ತೀರ್ಪುಗಾರರಾಗಿರುವ ವಾರಿಜಾಶ್ರೀ ವೇಣುಗೋಪಾಲ್ ಅವರು ಹ್ಯಾಪಿ ಬರ್ತ್ ಡೇ ಟು ಯೂ ಎಂದು ಹಾಡುವ ಮೂಲಕ ಪವರ್​​​​​ ಸ್ಟಾರ್​​​​​​ಗೆ ಹುಟ್ಟುಹಬ್ಬದ ಶುಭ ಕೋರಿದ್ದಾರೆ.

ಹ್ಯಾಪಿ ಬರ್ತಡೇ ಹಾಡಿನಲ್ಲಿ ಏನು ವಿಶೇಷತೆ ಇದೆ ಎಂದು ಕೇಳುವುದಾದರೆ, ಪುನೀತ್ ಅಭಿನಯದ 'ರಾಜಕುಮಾರ' ಚಿತ್ರದ 'ಬೊಂಬೆ ಹೇಳುತೈತೆ' ಹಾಡಿನ ರಾಗದಲ್ಲೇ ಪುನೀತ್ ಹ್ಯಾಪಿ ಬರ್ತಡೇ ಹಾಡಿದ್ದಾರೆ ವಾರಿಜಾಶ್ರೀ. ಮಾತ್ರವಲ್ಲ ಇನ್ನೋರ್ವ ತೀರ್ಪುಗಾರ್ತಿ ಇಂದುಶ್ರೀ ನಾಗರಾಜ್ ಅವರು ಕೂಡಾ 'ನಗುತಾ ನಗುತಾ ಬಾಳು ನೀನು ನೂರು ವರುಷಾ' ಎಂಬ ಹಾಡನ್ನು ಹೇಳುವ ಮೂಲಕ ಅಪ್ಪು ಜನ್ಮದಿನವನ್ನು ವಿಶೇಷವಾಗಿ ಸಂಭ್ರಮಿಸಲಿದ್ದಾರೆ. ಪುನೀತ್ ರಾಜ್​​​​ಕುಮಾರ್​​​ಗೆ ಕಿರುತೆರೆ ನಂಟು ಇರುವುದು ತಿಳಿದ ವಿಷಯ. ಕೋಟ್ಯಧಿಪತಿ ಶೋ ನಿರೂಪಕರಾಗಿ ಕಿರುತೆರೆ ಜಗತ್ತಿಗೆ ಕಾಲಿಟ್ಟ ಅಪ್ಪು, ಫ್ಯಾಮಿಲಿ ಪವರ್ ಶೋ ನಿರೂಪಣೆ ಕೂಡಾ ಮಾಡಿದ್ದರು. ಇದೀಗ ಇದೇ ಕಿರುತೆರೆಯಲ್ಲಿ ಅವರ ಹುಟ್ಟುಹಬ್ಬದ ಆಚರಣೆ ಬಹಳ ಅದ್ಧೂರಿಯಾಗಿ ನಡೆಯುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.