ETV Bharat / sitara

ಮೆಕ್ಯಾನಿಕಲ್ ಇಂಜಿನಿಯರಿಂಗ್​​​ನಿಂದ ಮಜಾಭಾರತದವರೆಗೆ...ಪಿಕೆ ಕಿರುತೆರೆ ಜರ್ನಿ ಇದು - ರಿಯಾಲಿಟಿ ಶೋ ಚಾಂಪಿಯನ್​​ನಿಂದ ಪಿಕೆ ಕರಿಯರ್ ಆರಂಭ

ನಂತರ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗಲಿದ್ದ ಮಜಾಭಾರತದಲ್ಲಿ ಭಾಗವಹಿಸುವಂತೆ ವಾಹಿನಿ ಕಡೆಯಿಂದ ಕರೆ ಬಂದಾಗ ಸ್ವರ್ಗಕ್ಕೆ ಮೂರೇ ಗೇಣು. ಆಫರ್ ಏನೋ ಬಂತು, ಆದರೆ ನಟನೆಯ ಗಂಧಗಾಳಿ ಗೊತ್ತಿಲ್ಲ. ವಾಹಿನಿಯವರಿಗೆ ವಿಷಯ ತಿಳಿಸಿದಾಗ ಒಂದು ವಾರ ಇದ್ದು ನೋಡಿ, ನಿಮಗೆ ಆಗದಿದ್ದರೆ ನಂತರ ನೋಡೋಣ ಎಂದು ವಾಹಿನಿಯವರೇ ಪಿಕೆಯನ್ನು ಹುರಿದುಂಬಿಸಿದರು.

Priyanka kamat
ಪ್ರಿಯಾಂಕ ಕಾಮತ್
author img

By

Published : Feb 27, 2020, 12:51 PM IST

ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವೀಧರೆಯಾದ ಈ ಚೆಲುವೆ ಇಂದು ಉದಯ ವಾಹಿನಿಯ ಹಾಸ್ಯೋತ್ಸವದ ನಿರೂಪಕಿ. ಪಿಕೆ ಎಂದೇ ಜನಪ್ರಿಯವಾಗಿರುವ ಈಕೆಯ ನಿಜವಾದ ಹೆಸರು ಪ್ರಿಯಾಂಕಾ ಕಾಮತ್. ರಿಯಾಲಿಟಿ ಶೋ ಮೂಲಕ ನಟನಾ ಜಗತ್ತಿಗೆ ಪಾದಾರ್ಪಣೆ ಮಾಡಿದ ಪ್ರಿಯಾಂಕಾ ಕಾಮತ್ ಇಂದು ನಿರೂಪಕಿಯಾಗಿ ಇಲ್ಲೇ ಬ್ಯುಸಿಯಾಗಿದ್ದಾರೆ.

Priyanka kamat
ಪಿಕೆ ಎಂದೇ ಖ್ಯಾತರಾದ ಪ್ರಿಯಾಂಕ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ರಿಯಾಲಿಟಿ ಶೋ ಚಾಂಪಿಯನ್​​​ ಆಡಿಷನ್​​​​ ಬಂದ ಪ್ರಿಯಾಂಕಾ ಸೆಲೆಕ್ಟ್ ಕೂಡಾ ಆಗಿದ್ದರು. ಆದರೆ ಅಂತಿಮ ವರ್ಷದ ಪರೀಕ್ಷೆ ಇದ್ದ ಕಾರಣ ಪ್ರಿಯಾಂಕ ಆಡಿಷನ್​​​ಗೆ ಬರಲಾಗುವುದಿಲ್ಲ ಎಂದು ಹೇಳಿದ್ದರು. ಆದರೆ ಅವರ ಅದೃಷ್ಟವೆಂಬಂತೆ ಪರೀಕ್ಷೆ ಮುಗಿದ ನಂತರ ಆಡಿಷನ್​​​ಗೆ ಬರಬಹುದು ಎಂದು ಕರೆ ಬಂತು. ಪರೀಕ್ಷೆ ಬರೆದು ಕಾರ್ಯಕ್ರಮಕ್ಕೆ ಬಂದ ಪ್ರಿಯಾಂಕ ಸುಮಾರು 3 ತಿಂಗಳು ಕಾರ್ಯಕ್ರಮದಲ್ಲಿ ಉಳಿದಿದ್ದರು. ಅಲ್ಲಿಗೆ ಪಿಕೆ ಅಲಿಯಾಸ್ ಪ್ರಿಯಾಂಕಾ ಕಾಮತ್ ಅವರ ಅದೃಷ್ಟದ ಬಾಗಿಲು ತೆರೆಯಿತು ಎಂದೇ ಹೇಳಬಹುದು.

Priyanka kamat
ಸಿನಿಮಾದಲ್ಲಿ ಕೂಡಾ ನಟಿಸಿರುವ ಪ್ರಿಯಾಂಕ

ನಂತರ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗಲಿದ್ದ ಮಜಾಭಾರತದಲ್ಲಿ ಭಾಗವಹಿಸುವಂತೆ ವಾಹಿನಿ ಕಡೆಯಿಂದ ಕರೆ ಬಂದಾಗ ಸ್ವರ್ಗಕ್ಕೆ ಮೂರೇ ಗೇಣು. ಆಫರ್ ಏನೋ ಬಂತು, ಆದರೆ ನಟನೆಯ ಗಂಧಗಾಳಿ ಗೊತ್ತಿಲ್ಲ. ವಾಹಿನಿಯವರಿಗೆ ವಿಷಯ ತಿಳಿಸಿದಾಗ ಒಂದು ವಾರ ಇದ್ದು ನೋಡಿ, ನಿಮಗೆ ಆಗದಿದ್ದರೆ ನಂತರ ನೋಡೋಣ ಎಂದು ವಾಹಿನಿಯವರೇ ಪಿಕೆಯನ್ನು ಹುರಿದುಂಬಿಸಿದರು. ಮೊದಲಿಗೆ ಕಷ್ಟ ಎನಿಸಿದರೂ ನಂತರ ನಟನೆ ಅಭ್ಯಾಸ ಎನಿಸಿತು. ಮಜಾಭಾರತದ ಮೂರೂ ಸೀಸನ್​​​ನಲ್ಲೂ ಪಿಕೆ ಅಭಿನಯದ ಖಾಯಂ ಆಗಿಬಿಟ್ಟಿತು. ಉದಯ ವಾಹಿನಿಯ ಕಾಮಿಡಿ ಶೋ ಸಂಡೇ ಬಜಾರ್ ನ ನಿರೂಪಕಿಯಾಗಿ ಸೈ ಎನಿಸಿಕೊಂಡಿರುವ ಪ್ರಿಯಾಂಕಾ ಸಿಂಗ ಸಿನಿಮಾದಲ್ಲಿ ನಾಯಕಿಯ ಗೆಳತಿಯಾಗಿ ಅಭಿನಯಿಸಿದ್ದಾರೆ. ಇದರ ಜೊತೆಗೆ ತಮಿಳು ಸಿನಿಮಾಗಳಲ್ಲಿ ನಟಿಸುವ ಮೂಲಕ ಪರಭಾಷೆಯಲ್ಲೂ ತಮ್ಮ ನಟನಾ ಛಾಪನ್ನು ಮೂಡಿಸಿದ್ದಾರೆ ಪ್ರಿಯಾಂಕಾ ಕಾಮತ್.

Priyanka kamat
ಮೆಕ್ಯಾನಿಕಲ್ ಇಂಜಿನಿಯರಿಂಗ್​​​ನಿಂದ ಮಜಾಭಾರತದವರೆಗೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.