ETV Bharat / sitara

10th ಸಿಬಿಎಸ್​​​ಸಿ ಪರೀಕ್ಷೆಯಲ್ಲಿ ಶೇ. 93% ಅಂಕ.. ನಟನೆ ಜತೆ ಓದಿನಲ್ಲೂ ಜಾಣೆ ಈ ನಟಿ

ನಾನು 90% ಅಂಕ ಪಡೆಯಬಹುದೆಂದು ಅಂದಾಜಿಸಿದ್ದೆ. ಆದರೆ, 93 % ಬಂದಿರುವುದು ಕೇಳಿ ಖುಷಿಯಾಯಿತು.

ಚಿತ್ರಕೃಪೆ : ಇನ್​ಸ್ಟಾಗ್ರಾಂ
author img

By

Published : May 8, 2019, 11:30 AM IST

ಹಿಂದಿಯ ಕಿರುತೆರೆ ನಟಿ ಅಶ್ನೂರ್ ಕೌರ್ ಸಿಬಿಎಸ್​​ಸಿ 10ನೇ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣಗೊಂಡಿದ್ದಾಳೆ. ಈಕೆ 93% ಅಂಕ ಗಳಿಸಿ ಸಾಧನೆಗೈದಿದ್ದಾಳೆ.

ಅಶ್ನೂರ್ ಕೌರ್, ಹಿಂದಿಯ ಜನಪ್ರಿಯ 'ಪಟಿಯಾಲಾ ಬೇಬ್ಸ್' ಕಾರ್ಯಕ್ರಮದಲ್ಲಿ ಮಿನ್ನೀ ಖುರಾನಾ ಪಾತ್ರದಲ್ಲಿ ನಟಿಸುತ್ತಾರೆ. ಈ ಬಾಲ ನಟಿ ನಿನ್ನೆ ಸಿಬಿಎಸ್​ಸಿಯ 10ನೇ ತರಗತಿ ಪರೀಕ್ಷೆಯಲ್ಲಿ ಶೇ. 93 ರಷ್ಟು ಅಂಕ ಗಳಿಸಿ ಮೇಲುಗೈ ಸಾಧಿಸಿದ್ದಾರೆ. ಈ ಸಂತಸವನ್ನ ಮಾಧ್ಯಮದ ಎದುರು ಹಂಚಿಕೊಂಡಿರುವ ಕೌರ್​, ನಾನು 90% ಅಂಕ ಪಡೆಯಬಹುದೆಂದು ಅಂದಾಜಿಸಿದ್ದೆ. ಆದರೆ, 93 % ಬಂದಿರುವುದು ಕೇಳಿ ಖುಷಿಯಾಯಿತು. ಫಲಿತಾಂಶಕ್ಕೂ ಮುನ್ನ ತುಂಬಾ ನರ್ವಸ್​ ಆಗಿದ್ದೆ. ಆದರೆ, ನನ್ನ ರಿಸಲ್ಟ್ ನೋಡಿ ಸಂತೋಷ ಹಿಡಿದಿಟ್ಟುಕೊಳ್ಳಲಾರದೆ ಜೋರಾಗಿ ಚೀರಿದೆ. ಪಕ್ಕದಲ್ಲಿಯೇ ಇದ್ದ ನನ್ನ ತಾಯಿಯ ಕಣ್ಣುಗಳ ಅಂಚಿನಲ್ಲಿ ಆನಂದಭಾಷ್ಪ ಹೊಮ್ಮುತ್ತಿತ್ತು ಎಂದಿದ್ದಾರೆ.

ಇದೇ ವೇಳೆ ತಮ್ಮ ವಿದ್ಯಾಭ್ಯಾಸದ ವಿಧಾನ ಬಗ್ಗೆಯೂ ಮಾತನಾಡಿರುವ ಅಶ್ನೂರು, ನಟನೆ ಮತ್ತು ಓದು ಒಟ್ಟಿಗೆ ಸರಿದೂಗಿಸಿಕೊಂಡು ಹೋಗುವುದು ಕಷ್ಟವಾಗುತ್ತಿತ್ತು. ಉದ್ದುದ್ದ ಡೈಲಾಗ್​ಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕಿತ್ತು. ಇತ್ತ ಪಠ್ಯ ಚಟುವಟಿಕೆಗಳಲ್ಲಿಯೂ ಗಮನ ಹರಿಸಬೇಕಾಗಿತ್ತು. ಇದು ಸ್ವಲ್ಪ ಕಷ್ಟವಾದ್ರೂ ಕೂಡ ನನ್ನ ಶಿಕ್ಷಕರು ಹಾಗೂ ಪೋಷಕರ ಸಹಾಯದಿಂದ ನನಗೆ ಸುಲಭವಾಯಿತು. ಏನಾದರೂ ಸಮಸ್ಯೆಗಳಿದ್ದರೆ ಹೆಚ್ಚುವರಿ ತರಗತಿ ತೆಗೆದುಕೊಳ್ಳುವುದಾಗಿ ಶಿಕ್ಷಕರು ಹೇಳಿದ್ದರು. ಪ್ರತಿ ದಿನ ಮುಂಜಾನೆ 5 ಗಂಟೆಗೆ ಎದ್ದು ಓದುತ್ತಿದ್ದೆ. ಶೂಟಿಂಗ್​ ಸೆಟ್​, ಮೇಕಪ್ ರೂಮಿನಲ್ಲಿಯೂ ಸ್ಟಡಿ ಮಾಡುತ್ತಿದ್ದೆ. ಈಗ ಕಾಮರ್ಸ್ ಆಯ್ದುಕೊಳ್ಳುವುದಾಗಿ ಆಶ್ನೂರು ತಿಳಿಸಿದ್ದಾರೆ.

ಅಭಿನಯದ ಬಗ್ಗೆಯೂ ಮಾತಾಡಿರುವ ಅವರು, ಮೊದಲು ಶಿಕ್ಷಣ ಮುಗಿಸುತ್ತೇನೆ. ಆಮೇಲೆ ಪೂರ್ಣ ಪ್ರಮಾಣದಲ್ಲಿ ನಟನೆಯಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂದಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.