2020 ಆರಂಭವಾಗಿ ಎರಡು ತಿಂಗಳುಗಳು ಕಳೆದಿವೆಯಷ್ಟೇ. ಈ ಎರಡು ತಿಂಗಳಲ್ಲಿ ಸಾಕಷ್ಟು ಧಾರಾವಾಹಿಗಳು ಆರಂಭವಾಗಿವೆ. ಕೆಲವೊಂದು ಧಾರಾವಾಹಿಗಳು ಕೂಡಾ ಮುಕ್ತಾಯಗೊಂಡಿವೆ. ಇದೀಗ ವೀಕ್ಷಕರನ್ನು ನಗೆಕಡಲಲ್ಲಿ ತೇಲಿಸುತ್ತಿದ್ದ 'ಪಾಪ ಪಾಂಡು' ಧಾರಾವಾಹಿ ಕೂಡಾ ಮುಕ್ತಾಯವಾಗಲಿದ್ದು ವೀಕ್ಷಕರಿಗೆ ಬಹಳ ಬೇಸರವಾಗಿದೆ.

ಸಿಹಿ ಕಹಿ ಚಂದ್ರು ನಿರ್ದೇಶನದಲ್ಲಿ ಕಳೆದ ವರ್ಷ ಆರಂಭವಾದ 'ಪಾಪಾ ಪಾಂಡು' ಇದೀಗ ಪ್ರಸಾರ ನಿಲ್ಲಿಸುತ್ತಿದೆ. ಈ ಧಾರಾವಾಹಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಇಲ್ಲದ ಕಾರಣ ಧಾರಾವಾಹಿಯನ್ನು ನಿಲ್ಲಿಸಲಾಗುತ್ತಿದೆ ಎನ್ನಲಾಗಿದೆ. ಪಾಚು, ಪಾಂಡು, ಪುಂಡ, ಶ್ರೀಹರಿ, ನಿಮ್ಮಿ , ಚಾರು ಐದು ಪಾತ್ರಗಳುಳ್ಳ ಈ ಧಾರಾವಾಹಿ ಪ್ರತಿ ದಿನವೂ ನವಿರಾದ ಹಾಸ್ಯದ ಮೂಲಕ ವೀಕ್ಷಕರನ್ನು ಮನರಂಜಿಸಲು ಬರುತ್ತಿತ್ತು. ಮಾತ್ರವಲ್ಲ ಧಾರಾವಾಹಿಯ ಪ್ರತಿಯೊಂದು ಪಾತ್ರವೂ ಕೂಡಾ ವೀಕ್ಷಕರಿಗೆ ನಗೆಯ ರಸದೌತಣವನ್ನೇ ಉಣಬಡಿಸುತ್ತಿತ್ತು. ಶಾಲಿನಿ ಮತ್ತು ಚಿದಾನಂದರ ಜೋಡಿಗೆ ಕಿರುತೆರೆ ಪ್ರೇಕ್ಷಕರು ಫಿದಾ ಆಗಿದ್ದರು. 'ಪಾಪ ಪಾಂಡು'ವಿನ ಶ್ರೀಹರಿಯಾಗಿ ಸೌರಭ್ ಕುಲಕರ್ಣಿ, ನಿಮ್ಮಿ ಯಾಗಿ ಶ್ರುತಿ ರಮೇಶ್, ಚೌಕಾಸಿ ಚಾರು ಆಗಿ ನಯನಾ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದರು.
ಇದೀಗ ಟಿಆರ್ಪಿ ಸಮಸ್ಯೆಯಿಂದ ಈ ಧಾರಾವಾಹಿ ಅರ್ಧದಲ್ಲೇ ಪ್ರಸಾರ ನಿಲ್ಲಿಸುತ್ತಿದೆ. ನಾನು 'ಪಾಪ ಪಾಂಡು' ಧಾರಾವಾಹಿಯನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಈ ಧಾರಾವಾಹಿ ತಂಡಕ್ಕೂ ನನಗೂ ಒಳ್ಳೆಯ ಬಾಂಧವ್ಯ ಉಂಟಾಗಿತ್ತು. 'ಪಾಪ ಪಾಂಡು' ವಿನ ನಿಮ್ಮಿ ಪಾತ್ರ ನನಗೆ ಬಹಳ ಜನಪ್ರಿಯತೆ ತಂದು ಕೊಟ್ಟಿತ್ತು. ನಾನು ಇಂದು ಬಣ್ಣದ ಲೋಕದಲ್ಲಿ ಹೆಸರು ಮಾಡಿದ್ದೇನೆ ಎಂದರೆ ಅದಕ್ಕೆ ಇದೇ ಧಾರಾವಾಹಿ ಕಾರಣ. ನನಗೆ ಇಂತಹ ಒಳ್ಳೆ ಅವಕಾಶ ನೀಡಿದ್ದಕ್ಕೆ ಸಿಹಿಕಹಿ ಚಂದ್ರು ಹಾಗೂ ಧಾರಾವಾಹಿ ತಂಡಕ್ಕೆ ಕೃತಜ್ಞತೆ ಹೇಳುತ್ತೇನೆ. ಪ್ರತಿಯೊಂದು ಅಂತ್ಯವೂ ಹೊಸ ಪ್ರಾರಂಭಕ್ಕೆ ನಾಂದಿಯಾಗಲಿದೆ ಎಂಬ ಮಾತಿದೆ. ನಾನು ಕೂಡಾ ಹೊಸ ಪ್ರಾಜೆಕ್ಟ್ ಮೂಲಕ ಮತ್ತೆ ನಿಮ್ಮ ಮುಂದೆ ಬರುತ್ತೇನೆ. ಆದರೆ ಅದು ಯಾವುದು, ಯಾವಾಗ ಎಂದು ಇನ್ನು ತೀರ್ಮಾನವಾಗಿಲ್ಲ' ಎಂದು ಹೇಳಿಕೊಂಡಿದ್ದಾರೆ.