ETV Bharat / sitara

ಬಿಗ್​ಬಾಸ್-8: ನಿಧಿ ನೇರವಾಗಿ ನಾಮಿನೇಟ್​ ಮಾಡಿದ್ದು ಇವರನ್ನೇ! - Nidhi Subbiah directly nominated Arvind KP

ಬಿಗ್​ಬಾಸ್ ಸೀಸನ್ 8ರ ಸೆಕೆಂಡ್ ಇನ್ನಿಂಗ್ಸ್​ನ ಮೊದಲ ಎಲಿಮಿನೇಟ್ ಸ್ಪರ್ಧಿಯಾಗಿ ನಿಧಿ ಮನೆಯಿಂದ ಹೊರಬಂದಿದ್ದು, ಈ ವೇಳೆ ಕೆ.ಪಿ.ಅರವಿಂದ್ ಅವರನ್ನು ನೇರ ನಾಮಿನೇಟ್ ಮಾಡಿದ್ದಾರೆ.

Bigg Boss season 8
ನಟಿ ನಿಧಿ ಸುಬ್ಬಯ್ಯ
author img

By

Published : Jul 5, 2021, 6:32 AM IST

85 ದಿನಗಳ ಬಿಗ್ ಬಾಸ್ ರಿಯಾಲಿಟಿ ಶೋ ಜರ್ನಿಯನ್ನು ನಟಿ ನಿಧಿ ಸುಬ್ಬಯ್ಯ ಅಂತ್ಯಗೊಳಿಸಿದ್ದಾರೆ. ಬಿಗ್​ಬಾಸ್ ಸೀಸನ್ 8ರ ಸೆಕೆಂಡ್ ಇನ್ನಿಂಗ್ಸ್​ನ ಮೊದಲ ಎಲಿಮಿನೇಟ್ ಸ್ಪರ್ಧಿಯಾಗಿ ನಿಧಿ ಮನೆಯಿಂದ ಹೊರಬಂದಿದ್ದಾರೆ. ಮನೆಯಿಂದ ಹೊರ ಬರುವ ಮುನ್ನ ಕೆ.ಪಿ. ಅರವಿಂದ್ ಅವರನ್ನು ನೇರವಾಗಿ ನಾಮಿನೇಟ್ ಮಾಡಿದ್ದಾರೆ.

Bigg Boss season 8
ಕೆ.ಪಿ.ಅರವಿಂದ್ ನೇರವಾಗಿ ನಾಮಿನೇಟ್​

ನಾಮಿನೇಟ್ ಆಗಿದ್ದ ಏಳು ಮಂದಿಯಲ್ಲಿ ದಿವ್ಯಾ ಸುರೇಶ್ ಮೊದಲಿಗೆ ಸೇಫ್ ಆದರು. ನಂತರ ಮಂಜು, ಪ್ರಿಯಾಂಕಾ, ಪ್ರಶಾಂತ್, ರಘು, ಚಕ್ರವರ್ತಿ ಸೇಫ್ ಆಗಿ ಉಳಿದರು. ನಿಧಿ ಸುಬ್ಬಯ್ಯ ಅಂತಿಮವಾಗಿ ಎಲಿಮಿನೇಟ್ ‌ಆದರು. ನಂತರ ವೇದಿಕೆ ಮೇಲೆ ಬಂದ ನಿಧಿ ತಮ್ಮ ಬಿಗ್​ಬಾಸ್ ಜರ್ನಿಯ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಸುದೀಪ್ ಅವರೊಂದಿಗೆ ಹಂಚಿಕೊಂಡರು. ಮನೆಯಲ್ಲಿ ಎಲ್ಲರೂ ಮುಖವಾಡ ಹಾಕಿಕೊಂಡು, ನಾಟಕ ಮಾಡಿಕೊಂಡು ಎಲ್ಲರೊಂದಿಗೆ ಬೆರೆಯುತ್ತಿದ್ದಾರೆ. ನಾನು ಆ ರೀತಿ ಮಾಡಲಿಲ್ಲ ಹಾಗಾಗಿ, ಹೊರಬಂದೆ ಅಂತಾ ಹೇಳಿದ್ರು.

Bigg Boss season 8
ಬಿಗ್​ಬಾಸ್ ಸೀಸನ್ 8ರ ಸೆಕೆಂಡ್ ಇನ್ನಿಂಗ್ಸ್​

ಇದನ್ನು ಓದಿ:ಕೋಮಲ್​ ಅಭಿನಯದ '2020' ಚಿತ್ರದ ಪೋಸ್ಟರ್​​ ಬಿಡುಗಡೆ

ಫಿನಾಲೆಯಲ್ಲಿ ಐದು ಮಂದಿ ಯಾರು ಇರಬಹುದು ಎಂದು ಸುದೀಪ್ ಕೇಳಿದಾಗ, ಮಂಜು ಪ್ರಶಾಂತ್ ವೈಷ್ಣವಿ, ಶುಭಾ ಹಾಗೂ ದಿವ್ಯ ಉರುಡುಗ ಇರಲಿದ್ದಾರೆ ಎಂದರು ನಿಧಿ.

ಹಾಗೆಯೇ ಕೊನೆಯಲ್ಲಿ ಉಳಿಯುವ ಇಬ್ಬರು ಸದಸ್ಯರು ಯಾರು ಎಂದು ಕೇಳಿದಾಗ ವೈಷ್ಣವಿ ಹಾಗೂ ಮಂಜು ಅವರ ಹೆಸರನ್ನು ಸೂಚಿಸಿ, ಆದರೆ ಮಂಜು ಗೆಲ್ಲಬೇಕು ಎಂದು ನಿಧಿ ಹೇಳಿದರು. ಬಿಗ್ ಬಾಸ್ ನಂತರ ನಿಧಿ ಏನು ಮಾಡುತ್ತೀರಾ ಎಂದು ಕೇಳಿದಾಗ ಸಿನಿಮಾ ಹಾಗೂ ಟ್ರಾವೆಲ್ ಮಾಡಲು ಕಾಯುತ್ತಿರುವುದಾಗಿ ಉತ್ತರಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.