ETV Bharat / sitara

100 ದಿನಗಳನ್ನು ಪೂರೈಸಿದ 'ನನ್ನರಸಿ ರಾಧೆ'...ವೀಕ್ಷಕರಿಗೆ ಧನ್ಯವಾದ ಅರ್ಪಿಸಿದ ನಟ - colors Kannada channel Nannarasi radhe

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ನನ್ನರಸಿ ರಾಧೆ' ಧಾರಾವಾಹಿ ಯಶಸ್ವಿ 100 ಎಪಿಸೋಡ್​​​ಗಳನ್ನು ಪೂರೈಸಿದೆ. ಧಾರಾವಾಹಿಗೆ ಪ್ರೋತ್ಸಾಹ ನೀಡಿದ ವೀಕ್ಷಕರಿಗೆ ನಾಯಕ ಅಭಿನವ್ ವಿಶ್ವನಾಥ್

Nannarasi radhe completed 100 episodes
'ನನ್ನರಸಿ ರಾಧೆ'
author img

By

Published : Aug 7, 2020, 1:30 PM IST

ಡಬ್ಬಿಂಗ್ ಧಾರಾವಾಹಿಗಳ ನಡುವೆಯೂ ಕನ್ನಡ ಧಾರಾವಾಹಿಗಳು ಯಶಸ್ವಿಯಾಗಿ ಮುನ್ನುಗ್ಗುತ್ತಿವೆ. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ನನ್ನರಸಿ ರಾಧೆ' ಧಾರಾವಾಹಿ ವೀಕ್ಷಕರ ಪ್ರೋತ್ಸಾಹದ ಜೊತೆಗೆ ಯಶಸ್ವಿ 100 ಸಂಚಿಕೆಗಳನ್ನು ಪೂರೈಸಿದೆ.

Nannarasi radhe completed 100 episodes
ಅಭಿನವ್ ವಿಶ್ವನಾಥ್

ಧಾರಾವಾಹಿ 100 ಎಪಿಸೋಡ್​​ಗಳನ್ನು ಪೂರೈಸಿರುವ ವಿಚಾರವನ್ನು ಅಗಸ್ತ್ಯ ರಾಥೋಡ್ ಆಗಿ ನಟಿಸುತ್ತಿರುವ ಅಭಿನವ್ ವಿಶ್ವನಾಥ್ ತಮ್ಮ ಸೋಷಿಯಲ್ ಮೀಡಿಯಾ ಮೂಲಕ ಹೇಳಿಕೊಂಡಿದ್ದಾರೆ. ಧಾರಾವಾಹಿ ತಂಡದವರ ಜೊತೆಗೆ ಇರುವ ಫೋಟೋವೊಂದನ್ನು ತಮ್ಮ ಇನ್ಸ್​​​ಟಾಗ್ರಾಮ್​​ ಖಾತೆಯಲ್ಲಿ ಹಂಚಿಕೊಂಡಿರುವ ಅಭಿನವ್ 'ನನ್ನರಸಿ ರಾಧೆ ಧಾರಾವಾಹಿ ನೂರು ದಿನಗಳನ್ನು ಪೂರೈಸಿದೆ. ನಮ್ಮನ್ನು ಪ್ರೋತ್ಸಾಹಿಸಿದ ಪ್ರತಿಯೊಬ್ಬರಿಗೂ ಶುಭಾಶಯಗಳು. ನಾವಿಂದು ಯಶಸ್ವಿ ನೂರು ಸಂಚಿಕೆ ಪೂರೈಸಿದ್ದೇವೆ ಎಂದರೆ ಅದಕ್ಕೆ ನೀವು ನೀಡಿದ ಪ್ರೀತಿ ಹಾಗೂ ಸಹಕಾರವೇ ಕಾರಣ. ಇಲ್ಲವಾದರೆ ನಾವು ಸಾಧನೆ ಮಾಡಲು ಆಗುತ್ತಿರಲಿಲ್ಲ' ಎಂದು ಬರೆದುಕೊಂಡಿದ್ದಾರೆ.

'ಇದು ಆರಂಭ ಅಷ್ಟೇ. ನೀವು ನೀಡಿರುವ ಪ್ರೀತಿ, ಸಹಕಾರ ಇನ್ನಷ್ಟು ಕೆಲಸ ಮಾಡಲು ಸಾಧ್ಯ ಮಾಡಿಕೊಟ್ಟಿದೆ. ಧಾರಾವಾಹಿ ನೋಡುವ ಎಲ್ಲರಿಗೂ ನಾನು ಧನ್ಯವಾದ ಸಮರ್ಪಿಸುವೆ. ಪರದೆಯ ಹಿಂದಿನ ವ್ಯಕ್ತಿಗಳಾದ ಮುಖ್ಯವಾಗಿ ನಿರ್ದೇಶಕರಿಗೆ, ಸಹ ನಿರ್ದೇಶಕರಿಗೆ, ನಿರ್ಮಾಪಕರು, ಕ್ಯಾಮರಾ ಮ್ಯಾನ್, ಮೇಕಪ್ ಆರ್ಟಿಸ್ಟ್ ಹಾಗೂ ಸಹಕಲಾವಿದರಿಗೆ ಕೂಡಾ ಶುಭ ಕೋರುತ್ತೇನೆ' ಎಂದು ಅಭಿನವ್ ಬರೆದುಕೊಂಡಿದ್ದಾರೆ‌.

Nannarasi radhe completed 100 episodes
ಅಗಸ್ತ್ಯ ರಾಥೋಡ್ ಆಗಿ ನಟಿಸುತ್ತಿರುವ ಅಭಿನವ್ ವಿಶ್ವನಾಥ್

ವಿನೋದ್ ವಿ. ದೋಂಢಾಳೆ ನಿರ್ದೇಶನದ 'ನನ್ನರಸಿ ರಾಧೆ'ಯಲ್ಲಿ ನಾಯಕ ಅಗಸ್ತ್ಯ ರಾಥೋಡ್ ಆಗಿ ಅಭಿನವ್ ವಿಶ್ವನಾಥ್ ನಟಿಸಿದ್ದಾರೆ. ನಾಯಕಿ ಇಂಚರಾ ಆಗಿ ಕೌಸ್ತುಭಾ ಮಣಿ ನಟಿಸಿದ್ದಾರೆ. ಉಳಿದಂತೆ ಸಿಹಿ ಕಹಿ ಚಂದ್ರು, ವೈಜಯಂತಿ ಕಾಶಿ , ತೇಜಸ್ವಿನಿ ಪ್ರಕಾಶ್ ಮುಂತಾದವರು ತಾರಾಗಣದಲ್ಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.