ETV Bharat / sitara

ಕೆಜಿ ರಸ್ತೆಯಲ್ಲಿ ಆಟ ನಿಲ್ಲಿಸಿದ 'ಮೇನಕ' ಚಿತ್ರಮಂದಿರ : ಸ್ಟಾರ್ ನಟರ ಲಕ್ಕಿ ಥಿಯೇಟರ್​​ ಶಾಶ್ವತ ಬಂದ್​​ - 'ಮೇನಕ' ಚಿತ್ರಮಂದಿರ

ಗಾಂಧಿನಗರದಲ್ಲಿ ಮೂರು ದಶಕಗಳ ಕಾಲ 20 ಸಾವಿರಕ್ಕೂ ಹೆಚ್ಚು ಸಿನಿಮಾಗಳು ಮೇನಕ ಚಿತ್ರಮಂದಿರದಲ್ಲಿ ಪ್ರದರ್ಶನಗೊಂಡಿವೆ. ಅದರಲ್ಲಿ ಕನ್ನಡದ ಸ್ಟಾರ್ ನಟರ ಸಿನಿಮಾಗಳು ಹಲವು ದಾಖಲೆಗಳನ್ನ ಮಾಡಿದ್ದವು. ಆದರೆ, ಮೇನಕ ಚಿತ್ರ ಮಂದಿರ ಇನ್ನು ನೆನಪು ಮಾತ್ರ..

'ಮೇನಕ' ಚಿತ್ರಮಂದಿರ
'ಮೇನಕ' ಚಿತ್ರಮಂದಿರ
author img

By

Published : Oct 2, 2021, 8:27 PM IST

ಕನ್ನಡ ಚಿತ್ರರಂಗದಲ್ಲಿ ಬಹು ಕೋಟಿ ಬಜೆಟ್ ಸಿನಿಮಾಗಳ ನಿರ್ಮಾಣ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ, ಸಿನಿಮಾಗಳು ಬಿಡುಗಡೆ ಮಾಡಲು ಚಿತ್ರಮಂದಿರಗಳ ಕೊರತೆ ಗಾಂಧಿನಗರದಲ್ಲಿ ಎದ್ದು ಕಾಣುತ್ತಿದೆ.

ಈಗಾಗಲೇ ಗಾಂಧಿನಗರದ ಕೆಜಿ ರಸ್ತೆಯಲ್ಲಿದ್ದ ಕಪಾಲಿ, ತ್ರಿಭುವನ್, ಮೆಜೆಸ್ಟಿಕ್, ಸಾಗರ್ ಚಿತ್ರಮಂದಿರಗಳನ್ನು ಶಾಶ್ವತವಾಗಿ ಮುಚ್ಚಲಾಗಿದೆ. ಇದೀಗ ಈ ಚಿತ್ರಮಂದಿರಗಳ ಸಾಲಿಗೆ 'ಮೇನಕ' ಚಿತ್ರಮಂದಿರ ಹೊಸ ಸೇರ್ಪಡೆಯಾಗುತ್ತಿದೆ.

ಕೊರೊನಾ ಸೋಂಕು ಇಳಿಮುಖವಾಗುತ್ತಿದ್ದಂತೆ ಶೇ.50ರಷ್ಟು ಅಕ್ಯುಪೇನ್ಸಿಗೆಯೊಂದಿಗೆ ಚಿತ್ರ ಮಂದಿರಗಳು ತೆರೆಯಲು ಸರ್ಕಾರ ಅನುಮತಿ ನೀಡಿತ್ತು. ಆದರೆ, ಈಗ ಶೇ.100ರಷ್ಟು ಅಕ್ಯುಪೇನ್ಸಿ ನೀಡಿದ ಸಮಯದಲ್ಲಿ ಮೇನಕ ಚಿತ್ರಮಂದಿರ ಸಂಪೂರ್ಣವಾಗಿ ಬಾಗಿಲು ಮುಚ್ಚುತ್ತಿದೆ.

ಕಳೆದ 30 ವರ್ಷಗಳಿಗೂ ಹೆಚ್ಚು ಕಾಲ ಪ್ರೇಕ್ಷಕರನ್ನು ರಂಜಿಸಿದ್ದ ಮೇನಕ ಚಿತ್ರಮಂದಿರವನ್ನು ಶಾಶ್ವತವಾಗಿ ಮುಚ್ಚಲಾಗುತ್ತಿದೆ. ಕನ್ನಡ ಚಿತ್ರರಂಗದ ಹಲವಾರು ಸ್ಟಾರ್ ನಟರಿಗೆ ‌ಮೇನಕ ಚಿತ್ರಮಂದಿರ ಅದೃಷ್ಟದ ಥಿಯೇಟರ್ ಆಗಿತ್ತು.

ಸಾಹಸ ಸಿಂಹ ವಿಷ್ಣುವರ್ಧನ್ ಅವರಿಗೆ ಈ ಚಿತ್ರ ಮಂದಿರ ಲಕ್ಕಿಯಾಗಿತ್ತು. ಇದೇ ಚಿತ್ರ ಮಂದಿರದಲ್ಲಿ ಪವರ್ ಸ್ಟಾರ್ ಪುನಿತ್ ರಾಜ್ ಕುಮಾರ್ ಅಭಿನಯದ ಆಕಾಶ್, ಕಿಚ್ಚ ಸುದೀಪ್ ಅಭಿನಯದ ಹುಚ್ಚ ಚಿತ್ರಗಳು ರಿಲೀಸ್ ಆಗಿ 25 ವಾರಗಳ ಯಶಸ್ವಿ ಪ್ರದರ್ಶನ ಕಂಡಿದ್ದವು.

ಅಲ್ಲದೇ ಶಿವರಾಜ್ ಕುಮಾರ್ ಅಭಿನಯದ ಮೊದಲ ಸಿನಿಮಾ ಆನಂದ್ ಕೂಡ ಮೇನಕ ಚಿತ್ರಮಂದಿರದಲ್ಲೇ ಬಿಡುಗಡೆಯಾಗಿತ್ತು. ಜೊತೆಗೆ ಶಿವರಾಜ್ ಕುಮಾರ್ ಹ್ಯಾಟ್ರಿಕ್ ಹೀರೋ ಆಗಿದ್ದು ಮೇನಕ ಚಿತ್ರಮಂದಿರದಲ್ಲೇ. ಅಲ್ಲದೇ ಮೇನಕ ಟಾಕೀಸ್​​ನಲ್ಲಿ ಶಿವರಾಜ್ ಕುಮಾರ್ ಅಭಿನಯದ ಮೊದಲ ಮೂರು ಚಿತ್ರಗಳು ರಿಲೀಸ್ ಆಗಿದ್ದವು ಅನ್ನೋದು ಮತ್ತೊಂದು ವಿಶೇಷ.

ಗಾಂಧಿನಗರದಲ್ಲಿ ಮೂರು ದಶಕಗಳ ಕಾಲ 20 ಸಾವಿರಕ್ಕೂ ಹೆಚ್ಚು ಸಿನಿಮಾಗಳು ಮೇನಕ ಚಿತ್ರಮಂದಿರದಲ್ಲಿ ಪ್ರದರ್ಶನಗೊಂಡಿವೆ. ಅದರಲ್ಲಿ ಕನ್ನಡದ ಸ್ಟಾರ್ ನಟರ ಸಿನಿಮಾಗಳು ಹಲವು ದಾಖಲೆಗಳನ್ನ ಮಾಡಿದ್ದವು. ಆದರೆ, ಮೇನಕ ಚಿತ್ರ ಮಂದಿರ ಇನ್ನು ನೆನಪು ಮಾತ್ರ.

ಇದನ್ನೂ ಓದಿ: ಹೊಸ ಸಂಚಾರಿ ನಿಯಮದ ಬಗ್ಗೆ ನಿರ್ದೇಶಕ ಮಂಸೋರೆ ಅಸಮಾಧಾನ : ಪೊಲೀಸರಿಗೆ ಕೇಳಿದ್ರು ಒಂದಿಷ್ಟು ಪ್ರಶ್ನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.