ನಟಿ ಮೇಘಶ್ರೀ ಕನ್ನಡ ಪ್ರೇಕ್ಷಕರಿಗೆ ಬಹಳ ಚಿರಪರಿಚಿತ. ಮನೋಜ್ಞವಾದ ನಟನೆಯಿಂದಲೇ ವೀಕ್ಷಕರ ಮನ ಸೆಳೆದಿರುವ ಅವರು, ಕೃಷ್ಣ ತುಳಸಿ, ಕದ್ದುಮುಚ್ಚಿ , ದಶರಥ ಸೇರಿದಂತೆ ಕನ್ನಡ, ತೆಲುಗು,ತಮಿಳು ಚಿತ್ರಗಳಲ್ಲಿ ನಟಿಸಿ ತ್ರಿಭಾಷಾ ತಾರೆ ಎನಿಸಿಕೊಂಡಿದ್ದಾರೆ.
ಬೆಳ್ಳಿತೆರೆ, ಕಿರುತೆರೆ ಎರಡರಲ್ಲೂ ಮಿಂಚಿರುವ ಮೇಘಶ್ರೀ ಕಿರುತೆರೆ ಯಾನ ಆರಂಭಿಸಿದ್ದು 'ನಾಗಕನ್ನಿಕೆ' ಧಾರಾವಾಹಿಯ ಶೇಷ ಪಾತ್ರದ ಮೂಲಕ. ಈ ಧಾರಾವಾಹಿ ನಂತರ ಬೆಳ್ಳಿತೆರೆಗೆ ಹಾರಿದ ಮೇಘಶ್ರೀ ಮತ್ತೆ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದು ಸುಜಾತಾ ಆಗಿ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಇವಳು ಸುಜಾತಾ' ಧಾರಾವಾಹಿಯಲ್ಲಿ ನಾಯಕಿಯಾಗಿ ಅಭಿನಯಿಸುವ ಮೂಲಕ ಮತ್ತೆ ಕಿರುತೆರೆ ವೀಕ್ಷಕರ ಮನ ಗೆದ್ದಿದ್ದಾರೆ.
- " class="align-text-top noRightClick twitterSection" data="
">
ಚಿಕ್ಕ ವಯಸ್ಸಿನಲ್ಲೇ ಪತಿಯನ್ನು ಕಳೆದುಕೊಂಡು ವಿಧವೆ ಪಟ್ಟ ಹೊತ್ತು. ತನ್ನ ಹೆತ್ತವರೊಂದಿಗೆ ಅತ್ತೆ ಮಾವನನ್ನೂ ನೋಡಿಕೊಳ್ಳುತ್ತಿರುವ ಹೆಣ್ಣುಮಗಳ ಕಥೆ ಹೊಂದಿರುವ ಈ ಧಾರಾವಾಹಿ ಇತ್ತೀಚೆಗೆ ಅಂತ್ಯಗೊಂಡಿದೆ. ಈ ಬಗ್ಗೆ ಮೇಘಶ್ರೀ ಬೇಸರ ಹೊರಹಾಕಿದ್ದು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳೊಂದಿಗೆ ದು:ಖ ಹಂಚಿಕೊಂಡಿದ್ದಾರೆ.
ಇಂದು ಸೆಟ್ನಲ್ಲಿ ಕೊನೆಯ ದಿನ 'ಇವಳು ಸುಜಾಜಾ' ಟೀಮ್ ಬಹಳ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಈ ಅವಕಾಶ ನೀಡಿದಕ್ಕಾಗಿ ಸೃಜನ್ ಲೋಕೇಶ್ ಹಾಗೂ ತಂಡಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಬರೆದುಕೊಂಡಿದ್ದು ತನ್ನ ಸಹಕಲಾವಿದರ ಜೊತೆ ಇರುವ ಫೋಟೋ ಹಂಚಿಕೊಂಡಿದ್ದಾರೆ. ಬಿಗ್ಬಾಸ್ ಸೀಸನ್ 6 ರಲ್ಲಿ ಕೂಡಾ ಮೇಘಶ್ರೀ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಭಾಗವಹಿಸಿದ್ದರು.