ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಯಾರೆ ನೀ ಮೋಹಿನಿ' ಧಾರಾವಾಹಿಯಲ್ಲಿ ವಿಲನ್ ಮಾಯಾ ಆಗಿ ಅಭಿನಯಿಸುತ್ತಿರುವ ನಟಿ ಐಶ್ವರ್ಯ ಬಸ್ಪುರೆ ಶಾಲಾ ಕಾಲೇಜು ದಿನಗಳನ್ನು ನೆನೆದಿದ್ದಾರೆ. ಚಿಕ್ಕಂದಿನಿಂದ ತಾವು ಸಂಗ್ರಹಿಸಿದ್ದ ಸ್ಟಾಂಪ್ ಹಾಗೂ ಡಿಸ್ನಿ ಸ್ಟಿಕ್ಕರ್ ಕಲೆಕ್ಷನ್ ಇರುವ ಪುಸ್ತಕವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
- " class="align-text-top noRightClick twitterSection" data="
">
"ಮನೆಯಲ್ಲಿ ಫ್ರೀ ಕುಳಿತಿರುವಾಗ ಸುಮಾರು 10 ವರ್ಷಗಳಿಂದ ಲಾಕ್ ಆಗಿದ್ದ ವಾಡ್ರೋರ್ಬ್ವೊಂದನ್ನು ಕ್ಲೀನ್ ಮಾಡಲು ಹೋದಾಗ ನನ್ನ ಹಳೆಯ ದಿನಗಳು ನೆನಪಾಯ್ತು. ಎಷ್ಟೋ ಸರ್ಟಿಫಿಕೇಟ್ಗಳು, ನನ್ನ ಸ್ಕೂಲ್ ಐಡಿಕಾರ್ಡ್, ಬೆಲ್ಟ್, ಎನ್ಸಿಸಿ ಯೂನಿಫಾರ್ಮ್, ಸಿಎಸ್ಎಂ ಬ್ಯಾಡ್ಜ್ ಎಲ್ಲಾ ಕಂಡಿತು. ಆಗ ನನ್ನ ಸ್ಕೂಲ್ ಹಾಗೂ ಕಾಲೇಜು ದಿನಗಳ ನೆನಪಾಯ್ತು. ನಾನು ಹೋಗಿಬಂದ ಎಲ್ಲಾ ಎನ್ಸಿಸಿ ಕ್ಯಾಂಪ್ಗಳ ನೆನಪಾಯ್ತು. ಅದರೊಂದಿಗೆ ನನ್ನ ಸ್ಟಾಂಪ್ ಕಲೆಕ್ಷನ್ ಬುಕ್ ನೋಡಿ ಬಹಳ ಖುಷಿ ಆಯ್ತು" ಎಂದು ಐಶ್ವರ್ಯ ಬರೆದುಕೊಂಡಿದ್ದಾರೆ.
ಸದ್ಯಕ್ಕೆ ಮಾಯಾ ಆಗಿ ಕಿರುತೆರೆಯಲ್ಲಿ ಬ್ಯುಸಿಯಾಗಿರುವ ಐಶ್ವರ್ಯ ಬಿಡುವಿನ ವೇಳೆಯಲ್ಲಿ ಹಳೆಯ ಸುಂದರ ನೆನಪುಗಳನ್ನು ಎಳೆ ಎಳೆಯಾಗಿ ತೆರೆದಿಟ್ಟಿದ್ದಾರೆ. ಉದಯ ವಾಹಿನಿಯ 'ಮಹಾಸತಿ' ಧಾರಾವಾಹಿಯ ಮೂಲಕ ನಟನಾ ಲೋಕಕ್ಕೆ ಕಾಲಿಟ್ಟ ಐಶ್ವರ್ಯಾಗೆ 'ಯಾರೇ ನೀ ಮೋಹಿನಿಯ' ಮಾಯಾ ಪಾತ್ರ ಸಾಕಷ್ಟು ಜನಪ್ರಿಯತೆ ತಂದುಕೊಟ್ಟಿದೆ.
- " class="align-text-top noRightClick twitterSection" data="
">