ಕೊರೊನಾ ಲಾಕ್ಡೌನ್ನಿಂದ ಹಳೆ ಧಾರಾವಾಹಿಗಳು ಮರುಪ್ರಸಾರವಾಗುತ್ತಿವೆ. ಕಿರುತೆರೆ ವೀಕ್ಷಕರಿಗೆ ತಮ್ಮ ನೆಚ್ಚಿನ ನಾಯಕ-ನಾಯಕಿಯನ್ನು ಮತ್ತೊಮ್ಮೆ ನೋಡಲು ಸಾಧ್ಯವಾಗುತ್ತಿದೆ. ಇದರ ಜೊತೆಗೀಗ ಮತ್ತೊಂದು ಧಾರಾವಾಹಿ ಮರುಪ್ರಸಾರಗೊಳ್ಳಲಿದೆ.
ಲಾಕ್ಡೌನ್ನಿಂದಾಗಿ ಚಿತ್ರೀಕರಣ ಸ್ಥಗಿತಗೊಂಡು ಧಾರಾವಾಹಿಗಳ ಪ್ರಸಾರ ಸ್ಥಗಿತಗೊಂಡಿತ್ತು. ಹೀಗಾಗಿ ಪ್ರಖ್ಯಾತಿ ಹೊಂದಿದ ಅಶ್ವಿನಿ ನಕ್ಷತ್ರ, ರಾಧಾ ರಮಣ ಮತ್ತು ಪದ್ಮಾವತಿ ಧಾರಾವಾಹಿಗಳು ಈಗಾಗಲೇ ಕಲರ್ಸ್ ಸೂಪರ್ ವಾಹಿನಿಯಲ್ಲಿ ಮರು ಪ್ರಸಾರ ಕಾಣುತ್ತಿವೆ. ಇದರ ಜೊತೆಗೆ ಇದೀಗ 'ಲಕ್ಷ್ಮಿ ಬಾರಮ್ಮ'ಧಾರಾವಾಹಿ ಕೂಡಾ ಮತ್ತೆ ಪ್ರಸಾರ ಆರಂಭಿಸಲಿದೆ.
2014ರಲ್ಲಿ ಆರಂಭವಾಗಿ ಸತತ ಏಳು ವರ್ಷಗಳ ವೀಕ್ಷಕರ ಪ್ರಸಾರವಾಗಿದ್ದ ಈ ಧಾರಾವಾಹಿ ಜನರ ಮೆಚ್ಚುಗೆ ಪಡೆಯುವುದರ ಜೊತೆಗೆ ಅತಿ ದೀರ್ಘಾವಧಿ ಪ್ರಸಾರವಾದ 2ನೇ ಧಾರಾವಾಹಿ ಎಂಬ ಪ್ರಖ್ಯಾತಿ ಪಡೆದುಕೊಂಡಿತ್ತು. ಇದೀಗ ಮತ್ತೆ ಮರುಪ್ರಸಾರವಾಗುತ್ತಿದೆ.
ಚಂದನ್ ಕುಮಾರ್, ಶೈನ್ ಶೆಟ್ಟಿ, ಚಂದುಗೌಡ, ಕವಿತಾಗೌಡ ಹಾಗೂ ರಶ್ಮಿ ಪ್ರಭಾಕರ್, ನೇಹಾ ಗೌಡ, ದೀಪಾ ರವಿಶಂಕರ್, ಅನಿಕಾ ಸಿಂಧ್ಯಾ, ಜೀವನ್ ನೀನಾಸಮ್, ವಿಜಯ್ ಸೇರಿದಂತೆ ದೊಡ್ಡ ಕಲಾ ಬಳಗವೇ ಧಾರಾವಾಹಿಯಲ್ಲಿ ನಟಿಸಿದ್ದು, ಪ್ರಖ್ಯಾತಿ ಪಡೆದಿತ್ತು.
ಹೆಚ್ಚಿನ ಟಿಆರ್ಪಿ ಪಡೆಯುತ್ತಿದ್ದ ಈ ಧಾರಾವಾಹಿ ಚಂದನ್ ಕುಮಾರ್, ಶೈನ್ ಶೆಟ್ಟಿ, ಚಂದು ಗೌಡ, ಕವಿತಾ ಗೌಡ, ರಶ್ಮಿ ಪ್ರಭಾಕರ್ ಹಾಗೂ ನೇಹಾ ಗೌಡರಿಗೆ ಪ್ರಸಿದ್ಧಿ ತಂದುಕೊಟ್ಟಿತ್ತು. ಕನ್ನಡ ಕಿರುತೆರೆಯಲ್ಲಿ ಹೊಸ ಅಲೆಯನ್ನೇ ಹುಟ್ಟಿ ಹಾಕಿರುವ ಲಕ್ಷ್ಮಿ ಬಾರಮ್ಮ ಧಾರಾವಾಹಿ ಒಡಿಯಾ ಭಾಷೆಯಲ್ಲಿ ಲಕ್ಷ್ಮಿ ಪ್ರತಿಮಾ ಎಂಬ ಹೆಸರಿನಲ್ಲಿ ಪ್ರಸಾರವಾಗುತ್ತಿದ್ದು, ತಮಿಳಿಗೂ ರಿಮೇಕ್ ಆಗಿ ವಂದಾಲ್ ಶ್ರೀದೇವಿ ಎಂಬ ಹೆಸರಿನಲ್ಲಿ ಮೂಡಿ ಬರುತ್ತಿದೆ.