ಬಿಗ್ಬಾಸ್ ಸೀಸನ್ 7 ರ ಸ್ಪರ್ಧಿಯಾಗಿದ್ದ ಕುರಿ ಪ್ರತಾಪ್ ಅವರು ರನ್ನರ್ ಆಪ್ ಆಗಿ ಹೊರಹೊಮ್ಮಿರುವುದು ಎಲ್ಲರಿಗೂ ತಿಳಿದ ವಿಚಾರ. 117 ದಿನಗಳ ಕಾಲ ಬಿಗ್ಬಾಸ್ ಮನೆಯಲ್ಲಿದ್ದ ಕುರಿ ಪ್ರತಾಪ್ ಹಾಸ್ಯ ಚಟಾಕಿ ಹಾರಿಸುವ ಮೂಲಕ ಪ್ರೇಕ್ಷಕರನ್ನು ಸದಾ ನಗಿಸುತ್ತಿದ್ದರು.
- " class="align-text-top noRightClick twitterSection" data="
">
ಎಲ್ಲಕ್ಕಿಂತ ಮುಖ್ಯವಾಗಿ ಬಿಗ್ಬಾಸ್ ಮನೆಯಲ್ಲಿ ಕುರಿ ಪ್ರತಾಪ್ ಜನಪ್ರಿಯರಾಗಲು ದೊಡ್ಡ ಕಾರಣ ಎಂದರೆ ಒತ್ತು ಶ್ಯಾವಿಗೆ. ಬಿಗ್ಬಾಸ್ ಮನೆಯಲ್ಲಿದ್ದಾಗ ಪ್ರತಾಪ್ ಒತ್ತು ಶ್ಯಾವಿಗೆ ಮಾಡಲು ಬರದೆ ಆತನ ಪರಿಸ್ಥಿತಿ ಕಂಡು ಕುರಿ ಪ್ರತಾಪ್ ನಗಾಡಿದ್ದರು. ಆದರೆ ಇದೀಗ ಕುರಿ ಪ್ರತಾಪ್ ಮತ್ತೆ ಒತ್ತು ಶ್ಯಾವಿಗೆ ಮೂಲಕವೇ ಸುದ್ದಿಯಲ್ಲಿದ್ದಾರೆ. ಬಿಗ್ಬಾಸ್ ಮನೆಯಿಂದ ಬಂದ ನಂತರ ಸಂಪೂರ್ಣ ಸಿನಿರಂಗದಲ್ಲಿ ಬ್ಯುಸಿಯಾಗಿದ್ದರು. ಆದರೆ ಕೋರೋನಾ ವೈರಸ್ ನ ಕಾರಣದಿಂದಾಗಿ ಒಂದು ವಾರಗಳ ಕಾಲ ಶೂಟಿಂಗ್ಗೆ ಬ್ರೇಕ್ ಹಾಕಲಾಗಿದ್ದು ಕುರಿ ಪ್ರತಾಪ್ ಅವರು ಮನೆ ಮಂದಿಯೊಂದಿಗೆ ಸಮಯ ಕಳೆಯುತ್ತಿದ್ದಾರೆ. ಕುಟುಂಬದವರಿಗಾಗಿ ಸಮಯ ಕಳೆಯಲು ನಿರ್ಧಾರ ಮಾಡಿರುವ ಪ್ರತಾಪ್ ಕುಟುಂಬದವರಿಗಾಗಿ ಒತ್ತು ಶ್ಯಾವಿಗೆ ಮಾಡಿಕೊಟ್ಟಿದ್ದಾರೆ. ಒತ್ತು ಶ್ಯಾವಿಗೆ ಮಾಡುವ ವಿಡಿಯೋವನ್ನು ಸ್ವತಃ ಕುರಿ ಪ್ರತಾಪ್ ಅವರೇ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಾಕಿದ್ದಾರೆ. ಯಾರ ಸಹಾಯವಿಲ್ಲದೇ ಇದೇ ಮೊದಲ ಬಾರಿಗೆ ಒತ್ತು ಶ್ಯಾವಿಗೆ ಮಾಡಿದ್ದೇನೆ. ಮಾತ್ರವಲ್ಲ ಅದನ್ನು ತಿಂದವರಿಗೆ ಏನೂ ಆಗಿಲ್ಲ ಎಂದು ಕುರಿ ಪ್ರತಾಪ್ ಬರೆದುಕೊಂಡಿದ್ದಾರೆ. ಒತ್ತು ಶ್ಯಾವಿಗೆ ಮಾಡುತ್ತಿರುವ ವಿಡಿಯೋ ಮಾತ್ರ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.