ಸೌಂದರ್ಯವರ್ಧಕ ಬಳಸಿ ಅಂದವನ್ನು ಹೆಚ್ಚಿಸಿಕೊಳ್ಳುವ ಕಾಲ ಇದು. ಆದರೆ ನೈಸರ್ಗಿಕ ಅಂದವೇ ಎಂದಿಗೂ ಶಾಶ್ವತ. ರಾಸಾಯನಿಕಗಳು ಚರ್ಮಕ್ಕೆ ಒಳ್ಳೆಯದಲ್ಲ ಎಂಬುದು ಎಲ್ಲರಿಗೂ ತಿಳಿದ ವಿಷಯ. ಆದರೆ ಈ ಚೆಲುವೆ ಹೆಚ್ಚು ಮೇಕಪ್ ಇಲ್ಲದೆ ನಟಿಸುತ್ತಾರೆ. ಅವರೇ ಕುಲವಧು ಖ್ಯಾತಿಯ ವಚನಾ ಅಲಿಯಾಸ್ ಅಮೃತಾ ರಾಮಮೂರ್ತಿ.
- " class="align-text-top noRightClick twitterSection" data="
">
ಅಮೃತಾ ಹೊಸದಾಗಿ ಮಾಡಿರುವ ಫೋಟೋಶೂಟ್ ಇದೀಗ ಇನ್ಸ್ಟಾಗ್ರಾಂನಲ್ಲಿ ಸದ್ದು ಮಾಡುತ್ತಿದೆ. ಈ ಫೋಟೋಶೂಟ್ನಲ್ಲಿ ಮೂಗಿಗೆ ಒಂದು ನತ್ತು ಬಿಟ್ಟರೆ ಬೇರಾವ ಒಡವೆ ಧರಿಸಿಲ್ಲ ಅಮೃತಾ. ಗುಂಗುರು ಕೂದಲಿನ ಚೆಲುವೆ ಅಮೃತಾ ರಾಮಮೂರ್ತಿ, ಸರಸ್ವತಿ ಧಾರಾವಾಹಿ ಮೂಲಕ ಬಣ್ಣದ ಜಗತ್ತಿಗೆ ಕಾಲಿಟ್ಟರು. ನಂತರ ಅವರು ಅಭಿನಯಿಸಿದ್ದು 'ಮೇಘ ಮಯೂರಿ' ಧಾರಾವಾಹಿಯಲ್ಲಿ. ಇದಾದ ಮೇಲೆ 'ಮಿಸ್ಟರ್ ಅ್ಯಂಡ್ ಮಿಸಸ್ ರಂಗೇಗೌಡ' ಧಾರಾವಾಹಿಯಲ್ಲಿ ಐಶ್ವರ್ಯ ಪಾತ್ರಕ್ಕೆ ಜೀವ ತುಂಬಿದ ಅಮೃತಾ ಮುಂದೆ ಕುಲವಧುವಿನ ಕಿರಿಯ ಸೊಸೆ ವಚನಾ ಆಗಿ ಮನೆ ಮಾತಾದರು. ಈ ನಡುವೆ ತಮ್ಮ ಸಹ ನಟ ರಘು ಅವರೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದ ಅವರು, ಈಗಾಗಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಾಗಿದೆ. ಇತ್ತೀಚೆಗಷ್ಟೇ ಕುಲವಧು ಧಾರಾವಾಹಿ ಮುಗಿದಿದೆ. ಆದರೂ ಎಲ್ಲರೂ ಈಕೆಯನ್ನು ವಚನಾ ಎಂದೇ ಗುರುತಿಸುತ್ತಾರೆ. ಸದ್ಯಕ್ಕೆ ಅಮೃತಾ ಹೊಸ ಫೋಟೋಶೂಟ್ ಹುಡುಗರ ಮನ ಗೆದ್ದಿದೆ.
- " class="align-text-top noRightClick twitterSection" data="
">
- " class="align-text-top noRightClick twitterSection" data="
">