ಸ್ಯಾಂಡಲ್ವುಡ್ನಲ್ಲಿ ತಮ್ಮ ಸಾಹಿತ್ಯಕ್ಕೆ ಹಲವಾರು ಪ್ರಶಸ್ತಿಗಳನ್ನು ಪಡೆದು ಖ್ಯಾತರಾಗಿರುವ ಕಿನಾಲ್ ರಾಜ್ ಇದೀಗ 'ಪಾಸಿಟಿವ್' ಎಂಬ ಕಿರುಚಿತ್ರವೊಂದಕ್ಕೆ ಕಥೆ, ಚಿತ್ರಕಥೆ ಬರೆದು ಸಂಭಾಷಣೆ ಕೂಡಾ ಬರೆದಿದ್ದಾರೆ.
ಕಿನಾಲ್ ರಾಜ್ 'ಕೆಜಿಎಫ್' ಚಿತ್ರದ ಮೂಲಕ ಬೆಳಕಿಗೆ ಬಂದವರು. 'ಗಿರ್ಮಿಟ್' ಚಿತ್ರದ ಸಾಹಿತ್ಯಕ್ಕೆ ಕಿನಾಲ್ ರಾಜ್ ಅವರಿಗೆ ಶ್ರೀ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಲಭಿಸಿತ್ತು. ನಂತರ 'ದಮಯಂತಿ', ಕಾಲಾಂತಕ, ಈಗ ಶ್ರೀಮುರಳಿ ಅಭಿನಯದ 'ಮದಗಜ' ಸಿನಿಮಾಗಳಿಗೂ ಕಿನಾಲ್ ರಾಜ್ ಗೀತರಚನೆ ಮಾಡಿದ್ದಾರೆ.
- " class="align-text-top noRightClick twitterSection" data="">
ಬೆಂಗಳೂರಿನಿಂದ ತನ್ನ ಹಳ್ಳಿಗೆ ಹೋಗುವ ವ್ಯಕ್ತಿಯೊಬ್ಬನಿಗೆ ಕೊರೊನಾ ಸೋಂಕು ತಗುಲಿರುತ್ತದೆ. ಸೋಂಕಿಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖನಾಗಿ ಬಂದರೂ ನೆರೆಹೊರೆಯವರು ಆತನನ್ನು ಹೇಗೆ ನೋಡುತ್ತಾರೆ ಇದರಿಂದ ಆ ವ್ಯಕ್ತಿ ಯಾವ ರೀತಿ ಮಾನಸಿಕ ಒತ್ತಡ ಅನುಭವಿಸುತ್ತಾನೆ ಎಂಬುದನ್ನು ಈ ಕಿರುಚಿತ್ರದಲ್ಲಿ ತೋರಿಸಲಾಗಿದೆ. ಈ ಕಿರುಚಿತ್ರವನ್ನು ನಾಗರಾಜ ಶಲ್ಯದ್ ನಿರ್ದೇಶಿಸಿ ಅವರೇ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇವರೊಂದಿಗೆ ಪ್ರಿಯಾಂಕ ಕಿನ್ನಾಲ್, ಬಸವರಾಜ್ ಕುರಿ, ಮಂಜುಳ ವಾಸುದೇವ್ ಹಾಗೂ ಇನ್ನಿತರರು ಅಭಿನಯಿಸಿದ್ದಾರೆ. ಈ ಕಿರುಚಿತ್ರಕ್ಕೆ ಆಕಾಶ್ ಪರ್ವ ಸಂಗೀತ, ಜಿ.ವಿ. ನಾಗರಾಜ್ ಛಾಯಾಗ್ರಹಣ, ಡಿ.ಐ. ಗಣೇಶ್ ತೋರಗಾಲ್ ಸಂಕಲನ ಮಾಡಿದ್ದಾರೆ.
ಕಳೆದ ವಾರ 'ಪಾಸಿಟಿವ್' ಕಿರುಚಿತ್ರದ ಟ್ರೇಲರ್ ಬಿಡುಗಡೆ ಮಾಡಲಾಗಿತ್ತು. 12 ನಿಮಿಷದ ಈ ಕಿರುಚಿತ್ರವನ್ನು ಆಗಸ್ಟ್ 22 ಗಣೇಶ ಚತುರ್ಥಿಯಂದು ಸಿರಿ ಟಿವಿ ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆ ಮಾಡಲಾಗಿದೆ.