ETV Bharat / sitara

ತೆಲುಗಿನ ನಂತರ ತಮಿಳಿಗೆ ರಿಮೇಕ್ ಆಗಲಿದೆ 'ಕಸ್ತೂರಿ ನಿವಾಸ' ಧಾರಾವಾಹಿ - Kasturi nivasa serial

ಕನ್ನಡದ ಅನೇಕ ಧಾರಾವಾಹಿಗಳು ಇತರೆ ಭಾಷಿಕರನ್ನು ಸೆಳೆದುಕೊಳ್ಳುತ್ತಿವೆ. 'ಉದಯ' ವಾಹಿನಿಯ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾದ 'ಕಸ್ತೂರಿ ನಿವಾಸ' ಇತ್ತೀಚೆಗಷ್ಟೇ ತೆಲುಗಿಗೆ ರಿಮೇಕ್​ ಆಗಿತ್ತು. ಇದೀಗ ಈ ಸೀರಿಯಲ್ ತಮಿಳಿಗೆ ರಿಮೇಕ್​ ಆಗುತ್ತಿದೆ.

kasturi-nivasa-serial-remake-to-tamil
ತೆಲುಗಿನ ನಂತರ ತಮಿಳಿಗೆ ರಿಮೇಕ್ ಆಗಲಿದೆ 'ಕಸ್ತೂರಿ ನಿವಾಸ' ಧಾರಾವಾಹಿ
author img

By

Published : Jan 11, 2021, 12:33 PM IST

Updated : Jan 11, 2021, 1:04 PM IST

ಕನ್ನಡ ಕಿರುತೆರೆ ಲೋಕದ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾದ 'ಕಸ್ತೂರಿ ನಿವಾಸ' ತನ್ನದೇ ವೀಕ್ಷಕ ವರ್ಗವನ್ನು ಹೊಂದಿದೆ. ಇತ್ತೀಚೆಗಷ್ಟೇ ಈ ಧಾರಾವಾಹಿ ತೆಲುಗಿಗೆ ರಿಮೇಕ್​ ಆಗಿದ್ದು, ಈಗಾಗಲೇ ಪ್ರಸಾರ ಆರಂಭಿಸಿದೆ. ಇದೀಗ ಈ ಸೀರಿಯಲ್ ತಮಿಳಿಗೆ ರಿಮೇಕ್​ ಆಗುತ್ತಿದೆ.

kasturi-nivasa-serial-remake-to-tamil
ತೆಲುಗಿನ ನಂತರ ತಮಿಳಿಗೆ ರಿಮೇಕ್ ಆಗಲಿದೆ 'ಕಸ್ತೂರಿ ನಿವಾಸ' ಧಾರಾವಾಹಿ

ಹಳೆ ಸಂಪ್ರದಾಯ ಹಾಗೂ ಹೊಸ ವಿಚಾರಧಾರೆಗಳ ನಡುವೆ ನಡೆಯುವ ಸಂಘರ್ಷದ ಕಥೆಯನ್ನು ಹೊಂದಿರುವ 'ಕಸ್ತೂರಿ ನಿವಾಸ' ಧಾರಾವಾಹಿಯು ತೆಲುಗಿನಲ್ಲಿ ಅಮೃತವರ್ಷಿಣಿ ಎಂಬ ಹೆಸರಿನಲ್ಲಿ ಪ್ರಸಾರವಾಗುತ್ತಿದೆ. ನೆಗೆಟಿವ್ ರೋಲ್ ಮೂಲಕ ಮನೆ ಮಾತಾಗಿರುವ ಕನ್ನಡತಿ ಮಾನ್ಸಿ ಜೋಷಿ, ತೆಲುಗಿನ ಅಮೃತವರ್ಷಿಣಿಯಲ್ಲಿ ನಾಯಕಿಯಾಗಿ ಮೋಡಿ ಮಾಡುತ್ತಿದ್ದಾರೆ.

ಇದೀಗ ಈ ಧಾರಾವಾಹಿ ತಮಿಳಿನಲ್ಲಿ ಪ್ರಸಾರವಾಗುತ್ತಿದ್ದು, ಧಾರಾವಾಹಿಯ ಹೆಸರು ಇನ್ನೂ ಬಹಿರಂಗಪಡಿಸಿಲ್ಲ. ಬಲ್ಲ ಮೂಲಗಳ ಪ್ರಕಾರ, ಈ ಧಾರವಾಹಿಗೆ ತಾರಾಗಣ ಅಂತ್ಯಗೊಂಡಿದ್ದು, ಸದ್ಯದಲ್ಲಿಯೇ ಪ್ರೊಮೋ ಶೂಟಿಂಗ್ ನಡೆಸಲಿದೆ. ಒಟ್ಟಿನಲ್ಲಿ ಈ ಧಾರಾವಾಹಿಯು ತೆಲುಗಿನ ನಂತರ ತಮಿಳಿಗೆ ರಿಮೇಕ್ ಆಗುತ್ತಿರುವುದು 'ಕಸ್ತೂರಿ ನಿವಾಸ' ತಂಡಕ್ಕೆ ಸಂತಸ ತಂದಿದೆ.

Last Updated : Jan 11, 2021, 1:04 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.