ETV Bharat / sitara

ತೆಲುಗು ಕಿರುತೆರೆಗೆ ಎಂಟ್ರಿ ಕೊಟ್ಟ ಕನ್ನಡದ ‘ಕುಲವಧು’ ಹುಡುಗ - Kannada serial actor shashir

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕುಲವಧು ಧಾರಾವಾಹಿಯ ವೇದಾಂತ್ ಆಗಿ ನಟಿಸಿ ಕಿರುತೆರೆ ಲೋಕದಲ್ಲಿ ಹೆಸರು ಮಾಡಿದ್ದ ಶಿಶಿರ್ ಶಾಸ್ತ್ರಿ ಮುಂದೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಪ್ರೇಮಲೋಕ’ ಧಾರಾವಾಹಿಯಲ್ಲಿ ಸುಧೀರ್ ಎನ್ನುವ ಅತಿಥಿ ಪಾತ್ರದಲ್ಲಿ ಅಭಿನಯಿಸಿದ್ದರು.

shishir shastry
ಶಿಶಿರ್ ಶಾಸ್ತ್ರಿ
author img

By

Published : Jun 11, 2021, 8:48 AM IST

ಕನ್ನಡ ಕಿರುತೆರೆಯ ಮೂಲಕ ನಟನಾ ಪಯಣ ಶುರು ಮಾಡಿದ ಅನೇಕರು ತೆಲುಗು ಕಿರುತೆರೆಯಲ್ಲಿಯೂ ನಟನಾ ಕಂಪು ಪಸರಿಸುತ್ತಿದ್ದಾರೆ. ಇದೀಗ ಆ ಸಾಲಿಗೆ ಹೊಸದಾಗಿ ನಟ ಶಿಶಿರ್ ಶಾಸ್ತ್ರಿ ಸೇರಿಕೊಂಡಿದ್ದಾರೆ. ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸೇವಂತಿ ಧಾರಾವಾಹಿಯಲ್ಲಿ ನಾಯಕ ಅರ್ಜುನ್ ಆಗಿ ಅಭಿನಯಿಸುತ್ತಿರುವ ಶಿಶಿರ್ ಈಗ ತೆಲುಗು ಕಿರುತೆರೆಗೆ ಕಾಲಿಟ್ಟಿದ್ದಾರೆ.

ತೆಲುಗು ಕಿರುತೆರೆಗೆ ಎಂಟ್ರಿಕೊಟ್ಟ ಕನ್ನಡದ ‘ಕುಲವಧು’ ಹುಡುಗ ಶಿಶಿರ್ ಶಾಸ್ತ್ರಿ

ಜೀ ತೆಲುಗು ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಇಂತಿಗುಟ್ಟು’ ಧಾರಾವಾಹಿಯಲ್ಲಿ ನಟಿಸುವ ಮೂಲಕ ಪರಭಾಷೆಯ ಕಿರುತೆರೆಗೆ ಕಾಲಿಟ್ಟಿದ್ದಾರೆ. ಪ್ರಸ್ತುತ ಧಾರಾವಾಹಿಯಲ್ಲಿ ಶೌರ್ಯ ಹೆಸರಿನಲ್ಲಿ ಶಿಶಿರ್ ಕಾಣಿಸಿಕೊಳ್ಳುತ್ತಿದ್ದು ಇದೇ ಮೊದಲ ಬಾರಿಗೆ ಪೊಲೀಸ್ ಅಧಿಕಾರಿಯಾಗಿ ಮೋಡಿ ಮಾಡುತ್ತಿದ್ದಾರೆ. ‘ಇಂತಿಗುಟ್ಟು’ ಧಾರಾವಾಹಿಯಲ್ಲಿ ಸಾಯಿ ಕಿರಣ್ ರಾಮ್, ರೂಪಾ ಶ್ರವಣ್, ನಿಶಾ ಗೌಡ, ಮೀನಾ ವಾಸು, ನಿಸರ್ಗ, ಐಶ್ವರ್ಯಾ ಮತ್ತು ಇತರರು ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.

Shashir
ಇಂತಿಗುಟ್ಟು’ ಧಾರಾವಾಹಿಯಲ್ಲಿ ಶಶಿರ್​​​

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕುಲವಧು ಧಾರಾವಾಹಿಯ ವೇದಾಂತ್ ಆಗಿ ನಟಿಸಿ ಕಿರುತೆರೆಯಲ್ಲಿ ಫೇಮಸ್ ಆಗಿದ್ದ ಶಿಶಿರ್ ಶಾಸ್ತ್ರಿ ಮುಂದೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಪ್ರೇಮಲೋಕ ಧಾರಾವಾಹಿಯಲ್ಲಿ ಸುಧೀರ್ ಎನ್ನುವ ಅತಿಥಿ ಪಾತ್ರದಲ್ಲಿ ಅಭಿನಯಿಸಿದ್ದರು. ಸದ್ಯ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸೇವಂತಿ ಧಾರಾವಾಹಿಯಲ್ಲಿ ಅರ್ಜುನ್ ಆಗಿ ಮೋಡಿ ಮಾಡುತ್ತಿರುವ ಶಿಶಿರ್, ಇದೀಗ ತೆಲುಗು ಕಿರುತೆರೆಯಲ್ಲೂ ಮಿಂಚುತ್ತಿದ್ದಾರೆ.

shishir shastry
ಶಶಿರ್ ಶಾಸ್ತ್ರಿ

ಇದನ್ನೂ ಓದಿ: ಚಿತ್ರಮಂದಿರ ಕಾರ್ಮಿಕರಿಗೆ ದಿನಸಿ ಕಿಟ್ ವಿತರಿಸಿದ ಯುವ ನಟ ಶ್ರೇಯಸ್​​ ತಂಡ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.