ETV Bharat / sitara

'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಎರಿಕಾ ನಟನೆ ವದಂತಿ: ನಿರ್ದೇಶಕ ಹೇಳಿದ್ದೇನು? - jothe jotheyali director clarify the rumours of Erica Fernandes acting in serial

ಜೊತೆಜೊತೆಯಲಿ ಧಾರಾವಾಹಿಯಲ್ಲಿ ಎರಿಕಾ ಫರ್ನಾಂಡಿಸ್ ನಟಿಸುತ್ತಿಲ್ಲ ಎಂದು ನಿರ್ದೇಶಕ ಆರೂರು ಜಗದೀಶ್ ಸ್ಪಷ್ಟನೆ ನೀಡಿದ್ದಾರೆ. ಈ ಮೂಲಕ ವದಂತಿಗಳಿಗೆ ತೆರೆ ಎಳೆದಿದ್ದಾರೆ.

Arooru jagadish
ನಿರ್ದೇಶಕ ಆರೂರು ಜಗದೀಶ್
author img

By

Published : Feb 25, 2021, 9:39 AM IST

ನಿನ್ನಿಂದಲೇ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿ ಸಿನಿ ಪ್ರಿಯರ ಮನ ಗೆದ್ದ ಪರಭಾಷೆಯ ಚೆಲುವೆ ಎರಿಕಾ ಫರ್ನಾಂಡಿಸ್, ಜೊತೆ ಜೊತೆಯಲಿ ಧಾರಾವಾಹಿಯ ರಾಜನಂದಿನಿಯಾಗಿ ಕನ್ನಡ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಲಿದ್ದಾರೆ ಎಂಬ ಸುದ್ದಿ ಕೇಳಿ ಬಂದಿತ್ತು‌.

ಕನ್ನಡ ಹಿರಿತೆರೆಯಲ್ಲಿ ನಟಿಸಿ ಮನೆ ಮಾತಾಗಿರುವ ಎರಿಕಾ ಫರ್ನಾಂಡಿಸ್ ಇದೀಗ ಕಿರುತೆರೆಗೂ ಕಾಲಿಡಲಿದ್ದಾರೆ ಎಂಬ ಮಾತು ಹರಿದಾಡಿತ್ತು. ಆದರೆ ಅದು ನಿಜವಾದ ಸುದ್ದಿಯಲ್ಲ, ಬದಲಿಗೆ ಅದು ರೂಮರ್ ಎಂಬುದನ್ನು ಸ್ವತಃ ಜೊತೆ ಜೊತೆಯಲಿ ಧಾರಾವಾಹಿಯ ನಿರ್ದೇಶಕ ಆರೂರು ಜಗದೀಶ್ ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿರುವ ಧಾರಾವಾಹಿ ನಿರ್ದೇಶಕ ಆರೂರು ಜಗದೀಶ್ "ಜೊತೆಜೊತೆಯಲಿ ಧಾರಾವಾಹಿಯಲ್ಲಿ ಎರಿಕಾ ಫರ್ನಾಂಡಿಸ್ ರಾಜನಂದಿನಿಯಾಗಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ವಾಸ್ತವದ ಸಂಗತಿ ಎಂದರೆ ರಾಜನಂದಿನಿ ಪಾತ್ರಕ್ಕೆ ನಾವು ಇಲ್ಲಿಯ ತನಕ ಯಾವ ನಟಿಯನ್ನು ಇನ್ನೂ ಕೂಡಾ ಆಯ್ಕೆ ಆಗಿಲ್ಲ‌. ರಾಜನಂದಿನಿ ಪಾತ್ರ ಕಿರುತೆರೆಯಲ್ಲಿ ಈ ತಿಂಗಳ ನಂತರ ಅಥವಾ ಎರಡು ತಿಂಗಳ ನಂತರ ಪ್ರವೇಶಿಸಬಹುದು" ಎಂದು ಹೇಳಿದ್ದಾರೆ.

"ಅಂದ ಹಾಗೇ ರಾಜನಂದಿನಿ ಪಾತ್ರವನ್ನು ನಿರ್ವಹಿಸುವ ನಟಿಯ ಬಗ್ಗೆ ನಾವು ಇನ್ನೂ ಕೂಡಾ ಯೋಚಿಸಿಲ್ಲ. ಕೊನೆಯದಾಗಿ ಈಗಾಗಲೇ ನಾವು ಮೂರು ನಟಿಯರ ಪಟ್ಟಿಯನ್ನು ಅಂತಿಮಗೊಳಿಸಿದ್ದೇವೆ. ರಾಜನಂದಿನಿ ಪಾತ್ರವನ್ನು ಯಾರು ಮಾಡುತ್ತಾರೆ ಎಂಬುದು ಖಚಿತವಾದ ಬಳಿಕವಷ್ಟೇ ನಾವು ಇದನ್ನು ಬಹಿರಂಗಪಡಿಸುತ್ತೇವೆ" ಎಂದು ಸ್ಪಷ್ಟಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.