ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜೊತೆಜೊತೆಯಲಿ ಧಾರಾವಾಹಿ ಸಾಕಷ್ಟು ಸುದ್ದಿಯಾಗಿಗುತ್ತಿದ್ದು, ಆರಂಭದವಾದಾಗಿನಿಂದಲೂ ಟಿಆರ್ಪಿಯಲ್ಲಿ ಮುಂದೆ ಇರುವ ಜೊತೆಜೊತೆಯಲಿ ಧಾರಾವಾಹಿ ಕಿರುತೆರೆಯಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದೆ. ವಿಭಿನ್ನ ಕಥಾ ಶೈಲಿಯ ಮೂಲಕ ವೀಕ್ಷಕರನ್ನು ಸೆಳೆದಿರುವ ಧಾರಾವಾಹಿ ತಂಡ ಕೋಟೆನಾಡು ಚಿತ್ರದುರ್ಗದಲ್ಲಿ ಜೊತೆ ಜೊತೆಯಲಿ ಜಾತ್ರೆ ಅದ್ಧೂರಿ ಕಾರ್ಯಕ್ರಮ ಆಯೋಜಿಸಿತ್ತು.
ಇನ್ನು, ಜಾತ್ರೆ ಹಿನ್ನೆಲೆಯಲ್ಲಿ ಧಾರವಾಹಿಯ ತಂಡ ಚಿತ್ರದುರ್ಗದಲ್ಲಿ ಬೀಡು ಬಿಟ್ಟಿತ್ತು. ಭಾನುವಾರ ಮುರುಘಾ ರಾಜೇಂದ್ರ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜೊತೆ ಜೊತೆಯಲಿ ತಂಡದ ಕಲಾವಿದರಿಗೆ ದುರ್ಗದ ವನಿತೆಯರು ಅಭಿಮಾನದ ಹೊಳೆ ಹರಿಸಿದರು.
ಇನ್ನು, ಧಾರಾವಾಹಿ ಜಾತ್ರೆ ಅಕ್ಷರಶಹ ನೃತ್ಯೋತ್ಸವದಂತಿತ್ತು. ನಮ್ಮ ಮನೆಯಲಿ ದಿನವೂ ಬೆಳಗುವ ದೀಪವೇ.. ಜೇನಿನ ಗೂಡು ನಾವೆಲ್ಲ ಎನ್ನುತ್ತಾ ಆರ್ಯವರ್ಧನ್, ಅನು ಫ್ಯಾಮಿಲಿಯವರು ಆಗಮಿಸಿ ಜಾತ್ರೆಗೆ ಕಿಚ್ಚು ಹಚ್ಚಿದರು. ಓ ಬೇಬಿ ಏನ್ಸ್ ಎನ್ನುತ್ತಾ ಹರ್ಷವರ್ಧನ್, ಮಾನ್ಸಿ ಹೆಜ್ಜೆ ಹಾಕಿದರೆ, ಹಲೋ ಮಿಸ್ಟರ್ ಆಗಿ ಮೀರಾ ಬಂದರು. ಪುಷ್ಪಾ, ಸುಬ್ಬು ಜುಗಲ್‌ಬಂದಿಗೆ ಜನರು ನಕ್ಕು ನಕ್ಕು ಸುಸ್ತಾದರು. ಭೂಲೋಕದ ಅಪ್ಸರೆಯಂತೆ ಎಲ್ಲೋ ಜಿನುಗುವ ನೀರೆ ಎನ್ನುತ್ತ ಅನು ಪ್ರೇಕ್ಷಕರನ್ನು ಸೆಳೆದರು.
ಇನ್ನು, ನಾಗರಹಾವು ಸಿನಿಮಾದ ಎವರ್ ಗ್ರೀನ್ ಸಾಂಗ್ ಹಾವಿನ ದ್ವೇಷದ ಮ್ಯೂಸಿಕ್ ಜತೆ ಅದ್ಧೂರಿ ಎಂಟ್ರಿ ಕೊಟ್ಟ ಅನಿರುದ್ಧ್ ಜನರಿಗೆ ಕೈ ಮುಗಿದರು. ಕಲ್ಲಾದರೆ ನಾನು ಹಾಡಿಗೂ ಹೆಜ್ಜೆ ಹಾಕಿ ವಿಷ್ಣುವರ್ಧನ್ ಅವರನ್ನು ದುರ್ಗಕ್ಕೆ ಕರೆ ತಂದರು. ಕೊನೆಗೆ ‘ಚೆಲುವೆ ನೀನು ನಕ್ಕರೆ’ ಹಾಡಿಗೆ ನೃತ್ಯ ಮಾಡಿ ಜೊತೆ ಜೊತೆಯಲಿ ಎನ್ನುತ್ತಲೆ ಆರ್ಯವರ್ಧನ್, ಅನು, ನಿರ್ದೇಶಕ ಆರೂರು ಜಗದೀಶ್ ಜೊತೆ ಧಾರಾವಾಹಿ ತಂಡ ದುರ್ಗದ ಜನರಿಗೆ ನಮಸ್ಕರಿಸಿ ಹೊಸ ವರ್ಷದ ಶುಭಾಶಯ ಹೇಳಿತು.
- " class="align-text-top noRightClick twitterSection" data="">