ETV Bharat / sitara

ಬಿಗ್ ಬಾಸ್ ಮನೆಗೆ ಜೈಜಗದೀಶ್ ಪ್ರವೇಶಿಸುವುದು ಖಚಿತ ಎನ್ನುತ್ತಿದೆ ಈ ವೈರಲ್​ ವಿಡಿಯೋ

author img

By

Published : Oct 13, 2019, 2:20 PM IST

Updated : Oct 13, 2019, 3:17 PM IST

ಬಿಗ್​ಬಾಸ್​ 7ನೇ ಆವೃತ್ತಿಯ ಅದ್ಧೂರಿ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಈ ಬಾರಿ ಬಿಗ್​ ಮನೆಯನ್ನು ಯಾರೆಲ್ಲಾ ಪ್ರವೇಶಿಸಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. ಈಗಾಗಲೇ ಕೆಲವರ ಹೆಸರು ಕೇಳಿಬಂದಿದ್ದರೂ ಅದೆಷ್ಟು ನಿಜವೋ ಗೊತ್ತಿಲ್ಲ. ಆದರೆ ಇದೀಗ ಸೆಲೆಬ್ರಿಟಿಯೊಬ್ಬರು ಬಿಗ್​ ಹೌಸ್​ ಪ್ರವೇಶಿಸುವ ಸುಳಿವು ಸಿಕ್ಕಿದೆ.

ಬಿಗ್ ಬಾಸ್

ಬೆಂಗಳೂರು: ಸೀಸನ್​ 7ರ ಬಿಗ್​ಬಾಸ್​ ಕನ್ನಡ ಅಧಿಕೃತ ಇನ್​ಸ್ಟಾಗ್ರಾಂ ಪೇಜ್​(biggbosskannadaofficial7)ನಲ್ಲಿ ವಿಡಿಯೋವೊಂದು ಅಪ್​ಲೋಡ್​ ಆಗಿದ್ದು, ಸ್ಯಾಂಡಲ್​​ವುಡ್​ ಹಿರಿಯ ನಟ ಜೈಜಗದೀಶ್​ ಅವರು ಬಿಗ್​ ಮನೆಯನ್ನು ಪ್ರವೇಶಿಸುವ ಸುಳಿವು ನೀಡಿದೆ.

ವಿಡಿಯೋದಲ್ಲಿ ಕುಟುಂಬದವರೆಲ್ಲರೂ ಜೈಗದೀಶ್​ ಅವರನ್ನು ಬೀಳ್ಕೊಡುತ್ತಿದ್ದು, ಹಿನ್ನೆಲೆಯಲ್ಲಿ ಬಿಗ್​ಬಾಸ್​ ಥೀಮ್​ ಸಾಂಗ್​ ಕೇಳುತ್ತದೆ. ಇದರಿಂದ ಜೈ ಜಗದೀಶ್ ಬಿಗ್​ಬಾಸ್​ ಮನೆ ಪ್ರವೇಶಿಸಬಹುದೆಂಬ ಸುಳಿವು ದೊರೆತರೂ ಇಂದು ಸಂಜೆ ನಡೆಯುವ ಕಾರ್ಯಕ್ರಮದಲ್ಲೇ ಖಚಿತವಾಗಲಿದೆ. ಏಕೆಂದರೆ, ಯಾವುದೇ ಸಂದರ್ಭದಲ್ಲಿ ಬಿಗ್​ಬಾಸ್​ ಟ್ವಿಸ್ಟ್​ ನೀಡುವ ಸಾಧ್ಯತೆಯೂ ಇದೆ.

ಏನೇ ಸುಳಿವು ಸಿಕ್ಕರೂ ಬಿಗ್​ಬಾಸ್​ ಗ್ರ್ಯಾಂಡ್​ ಓಪನಿಂಗ್​ ವೇದಿಕೆಯಲ್ಲಿ ಬದಲಾಗುವ ಸಾಧ್ಯತೆಯಿದೆ. ಹೀಗಾಗಿ ಇಂದು ನಡೆಯುವ ಕಾರ್ಯಕ್ರಮದಲ್ಲೇ ಸ್ಪರ್ಧಿಗಳ ಅಧಿಕೃತ ಪಟ್ಟಿ ಹೊರಬೀಳಲಿದೆ.

ಕುರಿಪ್ರತಾಪ್ ಬಿಗ್​​ಬಾಸ್​​ ಎಂಟ್ರಿಯನ್ನ ಸ್ಪಷ್ಟಪಡಿಸಿದ ಕಲರ್ಸ್ ಕನ್ನಡ:

ಸಾಕಷ್ಟು ಕುತೂಹಲ ಮೂಡಿಸಿರುವ ಬಿಗ್ ಬಾಸ್ ಸೀಸನ್ ಸವೆನ್ ಸ್ಪರ್ಧಿಯಾಗಿ ಬಿಗ್​ಬಾಸ್ ಮನೆಗೆ ಕಾಮಿಡಿಯನ್ ಕುರಿ ಪ್ರತಾಪ್ ಪ್ರವೇಶಿಸಿದ್ದಾರೆ. ಮೂಲತಃ ಮೈಸೂರಿನವರಾದ ಇವರು ನಟನೆಗಾಗಿ ಬೆಂಗಳೂರು ಪ್ರವೇಶಿಸಿದ್ದಾರೆ. ತುಂಬು ಕುಟುಂಬದಲ್ಲಿ ನೆಲೆಸಿ ಹಲವು ಸಿನಿಮಾ ಹಾಗೂ ಸೃಜನ್ ಲೋಕೇಶ್ ನಡೆಸಿಕೊಡುತ್ತಿದ್ದ ಮಜಾ ಟಾಕೀಸ್​ನಲ್ಲಿ ಪ್ರಮುಖ ಪಾತ್ರಧಾರಿಯಾಗಿ ಎಲ್ಲರನ್ನು ಆಕರ್ಷಿಸಿದ್ದಾರೆ.

Is Jai Jagadish Big Boss Going Home
ಬಿಗ್​​ಬಾಸ್​​ ಎಂಟ್ರಿಯನ್ನ ಸ್ಪಷ್ಟಪಡಿಸಿದ ಕಲರ್ಸ್ ಕನ್ನಡ

ಇದೀಗ ಬಿಗ್ ಬಾಸ್ ಮನೆಗೆ ಪ್ರವೇಶಿಸುವ ಮೂಲಕ ಅಲ್ಲೂ ಕೂಡ ಜನರನ್ನು ಕುರಿ ಮಾಡುತ್ತಾರಾ ಅಥವಾ ಅಭಿಮಾನಿಗಳನ್ನು ಪಡೆಯುವ ಮೂಲಕ ಎಷ್ಟು ದಿನ ಆ ಮನೆಯಲ್ಲಿರಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ. 17 ಮಂದಿ ಸ್ಪರ್ಧಿಗಳಲ್ಲಿ ಕುರಿ ಪ್ರತಾಪ್ ಹೋಗುತ್ತಿರುವುದನ್ನು ಕಲರ್ಸ್ ಕನ್ನಡ ವಾಹಿನಿ ಸ್ಪಷ್ಟಪಡಿಸಿದ್ದು, ಇವರ ಪ್ರೋಮೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

Intro:Body:ಬೆಂಗಳೂರು: ಬಿಗ್​ಬಾಸ್​ 7ನೇ ಆವೃತ್ತಿಯ ಅದ್ಧೂರಿ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಬಾರಿ ಬಿಗ್​ ಮನೆಯನ್ನು ಯಾರೆಲ್ಲಾ ಪ್ರವೇಶಿಸಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. ಈಗಾಗಲೇ ಕೆಲವರ ಹೆಸರು ಕೇಳಿಬಂದಿದ್ದರೂ ಅದೆಷ್ಟು ನಿಜವೋ ಗೊತ್ತಿಲ್ಲ. ಆದರೆ ಇದೀಗ ಸೆಲೆಬ್ರಿಟಿಯೊಬ್ಬರು ಬಿಗ್​ ಹೌಸ್​ ಪ್ರವೇಶಿಸುವ ಸುಳಿವು ಸಿಕ್ಕಿದೆ.

ಸೀಸನ್​ 7ರ ಬಿಗ್​ಬಾಸ್​ ಕನ್ನಡ ಅಧಿಕೃತ ಇನ್​ಸ್ಟಾಗ್ರಾಂ ಪೇಜ್​(biggbosskannadaofficial7)ನಲ್ಲಿ ವಿಡಿಯೋವೊಂದು ಅಪ್​ಲೋಡ್​ ಆಗಿದ್ದು, ಸ್ಯಾಂಡಲ್​​ವುಡ್​ ಹಿರಿಯ ನಟ ಜೈಜಗದೀಶ್​ ಅವರು ಮನೆಯನ್ನು ಪ್ರವೇಶಿಸುವ ಸುಳಿವು ನೀಡಿದೆ.

https://www.instagram.com/p/B3ix_n2g-4R/?utm_source=ig_web_copy_link

ವಿಡಿಯೋದಲ್ಲಿ ಕುಟುಂಬದವರೆಲ್ಲೂ ಜೈಗದೀಶ್​ ಅವರನ್ನು ಬೀಳ್ಕೊಡುತ್ತಿದ್ದು, ಹಿನ್ನೆಲೆಯಲ್ಲಿ ಬಿಗ್​ಬಾಸ್​ ಥೀಮ್​ ಸಾಂಗ್​ ಕೇಳುತ್ತದೆ. ಇದರಿಂದ ಜೈ ಜಗದೀಶ್ ಬಿಗ್​ಬಾಸ್​ ಮನೆ ಪ್ರವೇಶಿಸಬಹುದೆಂಬ ಸುಳಿವು ದೊರೆತರೂ ಇಂದು ಸಂಜೆ ನಡೆಯುವ ಕಾರ್ಯಕ್ರಮದಲ್ಲೇ ಖಚಿತವಾಗಲಿದೆ. ಏಕೆಂದರೆ, ಯಾವುದೇ ಸಂದರ್ಭದಲ್ಲಿ ಬಿಗ್​ಬಾಸ್​ ಟ್ವಿಸ್ಟ್​ ನೀಡುವ ಸಾಧ್ಯತೆ ಇದೆ.

https://www.instagram.com/p/B3jCpQVAYbQ/?utm_source=ig_web_copy_link
ಏನೇ ಸುಳಿವು ಸಿಕ್ಕರೂ ಬಿಗ್​ಬಾಸ್​ ಗ್ರ್ಯಾಂಡ್​ ಓಪನಿಂಗ್​ ವೇದಿಕೆಯಲ್ಲಿ ಬದಲಾಗುವ ಸಾಧ್ಯತೆ ಇದೆ. ಹೀಗಾಗಿ ಇಂದು ನಡೆಯುವ ಕಾರ್ಯಕ್ರಮದಲ್ಲೇ ಸ್ಪರ್ಧಿಗಳ ಅಧಿಕೃತ ಪಟ್ಟಿ ಹೊರಬೀಳಲಿದೆ.Conclusion:
Last Updated : Oct 13, 2019, 3:17 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.