ಕಲರ್ಸ್ ಕನ್ನಡ ವಾಹಿನಿಯಲ್ಲಿ ಇತ್ತೀಚೆಗಷ್ಟೇ ಪ್ರಸಾರ ಆರಂಭಿಸಿರುವ ಹೊಸ ಧಾರಾವಾಹಿ 'ಹೂಮಳೆ' ಕಿರುತೆರೆಯಲ್ಲಿ ಪ್ರಸಾರವಾಗುವ ಮೊದಲೇ ವೀಕ್ಷಕರಲ್ಲಿ ಕುತೂಹಲ ಮೂಡಿಸಿದ್ದಂತೂ ನಿಜ. ವಿಭಿನ್ನ ರೀತಿಯ ಕಥಾಹಂದರವಿರುವ ಹೂಮಳೆ ಧಾರಾವಾಹಿ ಇದೀಗ ವೀಕ್ಷಕರಿಗೆ ದುಪ್ಪಟ್ಟು ಮನರಂಜನೆ ನೀಡಲು ತಯಾರಾಗಿದೆ.
ಇದನ್ನೂ ಓದಿ: ಗ್ರೀನ್ ಇಂಡಿಯಾ ಚಾಲೆಂಜ್: ಗಿಡ ನೆಟ್ಟ ಅಜಯ್ ದೇವಗನ್
ಕಲರ್ಸ್ ಕನ್ನಡದ ಜನಪ್ರಿಯ ಕಾರ್ಯಕ್ರಮ ಮಜಾ ಟಾಕೀಸ್ನಲ್ಲಿ ಅನುಬಂಧ ಸ್ಪೆಷಲ್ ಕಾರ್ಯಕ್ರಮ ನಡೆಯುತ್ತಿದ್ದು ಈ ವಾರಾಂತ್ಯದಲ್ಲಿ ಹೂಮಳೆ ತಂಡ ಭಾಗವಹಿಸಲಿದೆ. ಚಂದನಾ ಅನಂತಕೃಷ್ಣ, ಸುಜಾತಾ ಅಕ್ಷಯ, ಯಶವಂತ, ಶ್ರೀರಾಮ್, ವಿಕಾಸ ಗೌಡ ಹೀಗೆ ಹೂಮಳೆಯ ಎಲ್ಲಾ ಕಲಾವಿದರು ಮಜಾ ಟಾಕೀಸ್ನಲ್ಲಿ ಕಾಣಿಸಿಕೊಳ್ಳಲಿದ್ದು ವೀಕ್ಷಕರಿಗೆ ಮಜಾ ನೀಡಲು ತಯಾರಾಗಿದ್ದಾರೆ. ಇಷ್ಟು ದಿನ ನಟನೆಯ ಮೂಲಕ ವೀಕ್ಷಕರನ್ನು ರಂಜಿಸುತ್ತಿದ್ದ ಹೂ ಮಳೆ ಕಲಾವಿದರು ಈ ವಾರಾಂತ್ಯದಲ್ಲಿ ಮೋಜಿನ ಮೂಲಕ ರಂಜಿಸಲಿದ್ದಾರೆ. ಕನ್ನಡದ ಖ್ಯಾತ ಹಾಸ್ಯ ಶೋ ಎನಿಸಿಕೊಂಡಿರುವ ಮಜಾ ಟಾಕೀಸ್ನಲ್ಲಿ ಹಾಸ್ಯ , ಮನರಂಜನೆಗೆ ಒತ್ತು ನೀಡಲಾಗುತ್ತಿರುವುದು ಎಲ್ಲರಿಗೂ ತಿಳಿದೇ ಇದೆ. ಕಳೆದ ವಾರ ಮಜಾ ಟಾಕೀಸ್ನಲ್ಲಿ 'ಕನ್ನಡತಿ' ಧಾರಾವಾಹಿಯ ಕಲಾವಿದರು ಭಾಗವಹಿಸಿದ್ದರು. ಸೃಜನ್ ಸಾರಥ್ಯದ ಈ ಕಾರ್ಯಕ್ರಮದಲ್ಲಿ ಅಪರ್ಣಾ, ಶ್ವೇತಾ ಚಂಗಪ್ಪ, ಪವನ್, ಸನಾತನಿ, ರವಿಶಂಕರ ಗೌಡ, ಮಂಡ್ಯ ರಮೇಶ್ ಇಂದ್ರಜಿತ್ ಲಂಕೇಶ್ ಭಾಗವಹಿಸುತ್ತಿದ್ದಾರೆ