ಟಿಕ್ಟಾಕ್ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟ ಭವ್ಯಾಗೌಡ 'ಗೀತಾ' ಮೂಲಕ ಕನ್ನಡಿಗರ ಮನ ಗೆಲ್ಲುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟಿವ್ ಆಗಿರುವ ಸುಂದರಿ ಭವ್ಯಾ ತನ್ನ ಬಾಲ್ಯದ ಫೋಟೋಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದು, ಮುದ್ದು ಮೊಗದ ಚೆಲುವೆಯ ಸೌಂದರ್ಯಕ್ಕೆ ಫ್ಯಾನ್ಸ್ ಪುಲ್ ಫಿದಾ ಆಗಿದ್ದಾರೆ.
ಕೆ.ಎಸ್. ರಾಮ್ ಜಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ 'ಗೀತಾ' ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುತ್ತಿರುವ ಭವ್ಯಾ ತನ್ನ ಅಭಿನಯದ ಮೂಲಕ ಅಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ಇದರ ಜೊತೆಗೆ ವಿಸ್ಮಯ ಗೌಡ ನಿರ್ದೇಶನದ 'ಡಿಯರ್ ಕಣ್ಮಣಿ' ಸಿನಿಮಾದಲ್ಲಿ ಡಾಕ್ಟರ್ ಪಾತ್ರದ ಮೂಲಕ ಭವ್ಯಾ ಗೌಡ ಬಿಗ್ ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳಲು ರೆಡಿಯಾಗಿದ್ದಾರೆ.
'ಡಿಯರ್ ಕಣ್ಮಣಿ'ಯಲ್ಲಿ ನಾನು ವಯಸ್ಸಿಗೂ ಮೀರಿದ ಪಾತ್ರ ನಿರ್ವಹಿಸಿದ್ದೇನೆ. ಮೊದಲ ಪ್ರಯತ್ನದಲ್ಲಿಯೇ ನನಗೆ ಸಿನಿಮಾದಲ್ಲಿ ಒಂದು ಒಳ್ಳೆ ಪಾತ್ರ ಸಿಕ್ಕಿದ್ದಕ್ಕೆ ತುಂಬಾ ಸಂತೋಷವಾಗಿದೆ ಅಂತಾರೆ ಭವ್ಯಾ ಗೌಡ.