ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ಹತ್ತಿರ ಬಂದಿದೆ. ಅನೇಕ ಗಣ್ಯ ವ್ಯಕ್ತಿಗಳು ಅಧ್ಯಕ್ಷರ ಪಟ್ಟಕ್ಕೆ ಸೆಣಸಾಡಲಿದ್ದಾರೆ. ಅದರಲ್ಲಿ ಈ ಬಾರಿ ಅಧ್ಯಕ್ಷರ ಪಟ್ಟಕ್ಕೆ ದೂರದರ್ಶನದ ಮಾಜಿ ನಿರ್ದೇಶಕ ಮಹೇಶ್ ಜೋಷಿ ಕೂಡಾ ಸ್ಪರ್ಧೆಗೆ ಇಳಿದಿದ್ದಾರೆ.
ಮಹೇಶ್ ಜೋಷಿ ಈಗಾಗಲೇ ಚುನಾವಣೆ ಪ್ರಚಾರ ಪ್ರಾರಂಭ ಮಾಡಿದ್ದಾರೆ. 'ಕರ್ನಾಟಕದ ವಿವಿಧ ಭಾಗಗಳಲ್ಲಿರುವ ನನ್ನ ಹಿತೈಷಿಗಳು, ನಾನು ಅವರ ಸ್ಥಳಗಳಿಗೆ ಯಾವಾಗ ಭೇಟಿ ನೀಡುವೆನೋ ಎಂದು ಕಾಯುತ್ತಿದ್ದಾರೆ. ಆದರೆ ಈ ಕೊರೊನಾ ವೈರಸ್ ಭೀತಿ ನಡುವೆ ನಾನು ಅಷ್ಟು ದೂರು ಪ್ರಯಾಣ ಮಾಡುವುದು ಹೇಗೆ ಎಂದು ಯೋಚಿಸುತ್ತಿದ್ದೇನೆ' ಎಂದು ಮಹೇಶ್ ಜೋಷಿ ಹೇಳಿದ್ದಾರೆ.
'ಚುನಾವಣಾ ಪ್ರಚಾರಕ್ಕಿಂತ ನನ್ನ ಹಿತೈಷಿಗಳ ಆರೋಗ್ಯ ಹಾಗೂ ಅವರ ಸುರಕ್ಷತೆ ಅತಿ ಮುಖ್ಯ. ಈಗಾಗಲೇ ನನ್ನ ಹಿತೈಷಿಗಳೊಂದಿಗೆ ದೂರವಾಣಿ ಹಾಗೂ ಸಾಮಾಜಿಕ ಜಾಲತಾಣದ ಮೂಲಕ ಸಂಪರ್ಕದಲ್ಲಿ ಇದ್ದೇನೆ. ಚುನಾವಣೆ ದಿನಾಂಕ ಇನ್ನೂ ನಿರ್ಧಾರ ಆಗಿಲ್ಲ. ಈ ಹಿನ್ನೆಲೆಯಲ್ಲಿ ನಾನು ಸೂಕ್ತ ಸಮಯದಲ್ಲಿ ಸರಳವಾಗಿ ಅಧಿಕೃತ ಪ್ರಚಾರ ಆರಂಭಿಸುತ್ತೇನೆ. ಇದಕ್ಕೆ ನಿಮ್ಮ ಬೆಂಬಲ ಹಾಗೂ ಸಹಕಾರ ಬೇಕು ಎಂದು ಮಹೇಶ್ ಜೋಷಿ ತಮ್ಮ ಹಿತೈಷಿಗಳ ಬಳಿ ಮನವಿ ಮಾಡಿದ್ದಾರೆ.