ಇದೇ ಮೊದಲ ಬಾರಿಗೆ ಅರವಿಂದ್ ಮಾಡಿದ ತಪ್ಪುಗಳನ್ನು ದಿವ್ಯಾ ಉರುಡುಗ ನೇರವಾಗಿ ಹೇಳಿದ್ದಾರೆ. ಇಬ್ಬರ ಮಧ್ಯೆ ಪ್ರೀತಿ ಇದ್ದರೂ ತಂಡಕ್ಕಾಗಿ ತಪ್ಪುಗಳನ್ನು ತಿದ್ದಿ ಹೇಳುವ ಗುಣವನ್ನು ದಿವ್ಯ ಉರುಡುಗ ತೋರಿಸಿದ್ದಾರೆ.
ಮೊನ್ನೆ (ಬುಧವಾರ) ನಿಧಿ ಬಗ್ಗೆ ಅರವಿಂದ್ ಮಾತಾಡಿದ್ದು ತಪ್ಪು ಎಂದು ದಿವ್ಯಾ ನೇರವಾಗಿ ಹೇಳಿದ್ದಾರೆ. ಅಲ್ಲದೇ, ಆ ಸ್ಥಾನದಲ್ಲಿ ನಾನೇ ಇದ್ದಿದ್ದರೂ ಅದನ್ನು ಸ್ವೀಕರಿಸುತ್ತಿರಲಿಲ್ಲ. ನಮ್ಮ ತಂಡದ ಸದಸ್ಯರು ಅದನ್ನು ಒಪ್ಪುತ್ತಿರಲಿಲ್ಲ. ಆ ರೀತಿ ಮಾತನಾಡಿದ್ದು, ಅವರಿಗೆ ತುಂಬಾ ನೋವಾಗಿದೆ ಎಂದರು.
ಆ ನಂತರ ನಿನ್ನೆ (ಗುರುವಾರ) ನಡೆದ ಹಾಡಿನ ಟಾಸ್ಕ್ನಲ್ಲಿ ಬಜರ್ ಒತ್ತುವುದರಲ್ಲಿ ಸೂರ್ಯ ಸೇನೆ ತಂಡ ಸೋತಿತ್ತು. ನಾವು ತಂಡಗೋಸ್ಕರ ಆಡ್ತಾ ಇದ್ವಿ. ನೀವು ಮೊದಲೇ ಬಜರ್ ಪ್ರೆಸ್ ಮಾಡಿದ್ರೆ, ನಾವೂ ಹಾಡನ್ನು ಹಾಡಬಹುದಿತ್ತು. ತಪ್ಪಾಗಿದ್ರೂ ನಮಗೇನು ಲಾಸ್ ಆಗ್ತಾ ಇರಲಿಲ್ಲ. ಆದರೆ, ನೀವು 'ಕಾನ್ಫಿಡೆನ್ಸ್' ಇಲ್ಲ ಅಂತ ಬಜರ್ ಒತ್ತಲಿಲ್ಲ. ಆ ಪಾಯಿಂಟ್ ನನಗೆ ಬೇಜಾರ್ ಆಯ್ತು ಎಂದರು. ಅದು ಅರವಿಂದ್ ಅವರಿಗೆ ಬೇಸರ ಮಾಡಿತ್ತು. ಆ ವೇಳೆ ಅರವಿಂದ್ ಕಣ್ಣೀರು ಹಾಕಿದರು. ಬಳಿಕ ದಿವ್ಯಾ ಹಾಗೂ ತಂಡದ ಸದಸ್ಯರು ಅರವಿಂದ್ ಅವರನ್ನು ಸಮಾಧಾನ ಪಡಿಸಿದರು.
ಅದಾದ ಬಳಿಕ ಎಲ್ಲಾ ಸದಸ್ಯರು ಮುಂದಿನ ಟಾಸ್ಕ್ನಲ್ಲಿ ಚೆನ್ನಾಗಿ ಆಡಬೇಕು ಎಂದು ಮುಂದಿನ ಆಟಕ್ಕೆ ತಯಾರಾದರು. ಮುಂದಿನ ಟಾಸ್ಕ್ನಲ್ಲಿ 2 ಸೆಕೆಂಡ್ಗಳ ಕಾಲ ಚೆಂಡನ್ನು ಇರಿಸಬೇಕಾಗಿತ್ತು. ಇದನ್ನು ದಿವ್ಯ ಉರುಡುಗ ಹಲವು ಬಾರಿ ಹೇಳಿದರೂ ಅರವಿಂದ್ ಹಾಗೂ ಶಮಂತ್ ಅದನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ. ಹೆಚ್ಚು ಆಡಿದ್ದರೂ ಫೌಲ್ ಕಾರಣ ಸೂರ್ಯಸೇನೆ ತಂಡ ಸೋತಿತು.
ನೆನಪಿರಲಿ ಟಾಸ್ಕ್ನಲ್ಲಿ ಚಕ್ರವರ್ತಿ ಚಂದ್ರಚೂಡ ಮಾಡಿದ ತಪ್ಪಿನಿಂದ ತಂಡ ಸೋಲಬೇಕಾಯಿತು. ಇಂದು ಹೆಚ್ಚು ಟಾಸ್ಕ್ಗಳನ್ನು ಗೆದ್ದಿರುವ ತಂಡ ಕ್ಯಾಪ್ಟನ್ಸಿಗಾಗಿ ಸೆಣಸಲಿವೆ.
ಇದನ್ನೂ ಓದಿ: ಬಿಗ್ಬಾಸ್ ಟ್ರೋಫಿಗಿಂತ ಒಲವಿನ ಗೆಳೆಯನನ್ನು ಪಡೆದಿದ್ದೇನೆ: ದಿವ್ಯಾ ಉರುಡುಗ