ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕುಲವಧು' ಧಾರಾವಾಹಿಯ ಧನ್ಯಾ ಪಾತ್ರಧಾರಿಯನ್ನು ಮರೆಯುವುದುಂಟೆ? ಧಾರಾವಾಹಿ ಮುಗಿದಿದ್ದರೂ ದೀಪಿಕಾ ಈಗಲೂ ಧನ್ಯಾ ಎಂದೇ ಚಿರಪರಿಚಿತ. ಇದೀಗ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿರುವ 'ಆರತಿಗೊಬ್ಬ ಕೀರ್ತಿಗೊಬ್ಬ' ಧಾರಾವಾಹಿಯ ಮೂಲಕ ದೀಪಿಕಾ ಅವರು ಮತ್ತೆ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಅರಂಭಿಸಲಿದ್ದಾರೆ.
ಹೌದು, ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ದೀಪಿಕಾ ಅವರಿಗೆ ಬಾಲ್ಯದಿಂದ ನಟನೆಯತ್ತ ವಿಶೇಷ ಒಲವು. ಇದನ್ನು ಮನಗಂಡ ದೀಪಿಕಾ ಸ್ನೇಹಿತೆ ಆಡಿಶನ್ಗೆ ಹೋಗುವಂತೆ ಒತ್ತಾಯ ಮಾಡಿದ್ದರಂತೆ. ನಟನೆಯ ರೀತಿ ನೀತಿಗಳೇ ತಿಳಿಯದ ದೀಪಿಕಾ ಅವರಿಗೆ ಮೊದಲ ಧಾರಾವಾಹಿಯಲ್ಲೇ ಮುಖ್ಯ ಪಾತ್ರಕ್ಕೆ ಆಯ್ಕೆಯಾಗಿದ್ದು ಬಹಳ ಖುಷಿ ನೀಡಿತ್ತಂತೆ. ಮೊದಲ ಧಾರಾವಾಹಿಯಲ್ಲೇ ಪ್ರಮುಖ ಪಾತ್ರ ದೊರೆತಿದ್ದು ನನಗೆ ಬಹಳ ಸಂತಸ ನೀಡಿತ್ತು ಎಂದು ಈಗಲೂ ತಮ್ಮ ನಟನಾ ಪಯಣವನ್ನು ದೀಪಿಕಾ ಅವರು ನೆನಪಿಸಿಕೊಳ್ಳುತ್ತಾರೆ.
ಅದ್ಭುತ ನಟನೆಯ ಜೊತೆಗೆ ದೀಪಿಕಾ ಭರತನಾಟ್ಯ ಕಲಾವಿದೆಯೂ ಹೌದು. ಅನೇಕ ವೇದಿಕೆಗಳಲ್ಲಿ ತಮ್ಮ ನೃತ್ಯ ಪ್ರದರ್ಶನ ನೀಡಿರುವ ದೀಪಿಕಾ ಶಾಲಾ, ಕಾಲೇಜು ದಿನಗಳಿಂದಲೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. ಜನ ಇಂದು ನನ್ನನ್ನು ಗುರುತಿಸುತ್ತಿದ್ದಾರೆ ಎಂದರೆ ಅದಕ್ಕೆ 'ಕುಲವಧು' ಧಾರಾವಾಹಿಯೇ ಕಾರಣ. ನಾನೆಲ್ಲೇ ಹೋದರು ಜನ ಧನ್ಯಾ ಎಂದೇ ಮಾತನಾಡಿಸುತ್ತಾರೆ, ಬಹಳ ಸಂತಸವಾಗುತ್ತದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಇನ್ನು ಕಿರುತೆರೆಯ ಮುದ್ದಾದ ಜೋಡಿಗಳ ಪೈಕಿ ದೀಪಿಕಾ ಮತ್ತು ಆಕರ್ಷ್ ಜೋಡಿಯೂ ಒಂದು. ಬಹು ವರ್ಷಗಳಿಂದ ಸ್ನೇಹಿತರಾಗಿದ್ದ ದೀಪಿಕಾ ಮತ್ತು ಆಕರ್ಷ್ ಅವರನ್ನು ಒಂದುಗೂಡಿಸಿದ್ದು ಪ್ರೀತಿ. ಪ್ರೀತಿಯಲ್ಲಿ ಬಿದ್ದ ಅವರು ಹಿರಿಯರ ಆಶೀರ್ವಾದ ಪಡೆದ ಇದೀಗ ಸತಿಪತಿಗಳಾಗಿದ್ದಾರೆ. ಕುಲವಧು ಧಾರಾವಾಹಿಯಲ್ಲಿ ಹಿರಿ ಸೊಸೆ ಧನ್ಯಾ ಪಾತ್ರಧಾರಿಯಾಗಿ ದೀಪಿಕಾ ಅವರು ಮನೆ ಮಾತಾಗಿದ್ದಾರೆ. ಅದೇ ಧಾರಾವಾಹಿಯಲ್ಲಿ ಶರತ್ ಪಾತ್ರಕ್ಕೆ ಆಕರ್ಷ್ ಅವರು ಜೀವ ತುಂಬಿದ್ದರು. ರೀಲ್ ಲೈಫ್ನಲ್ಲಿ ಒಂದೇ ಧಾರಾವಾಹಿಯಲ್ಲಿ ನಟಿಸಿರುವ ಇವರು ಇದೀಗ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.
ವಿಶೇಷ ಅಂದ್ರೆ, ಇದೀಗ ದಂಪತಿಗಳಿಬ್ಬರೂ ಟಿಕ್‌ಟಾಕ್ ಮೂಲಕ ಇನ್ಸ್‌ಸ್ಟಾಗ್ರಾಂನಲ್ಲಿ ಸದ್ದು ಮಾಡುತ್ತಿದ್ದಾರೆ. ಇವರಿಬ್ಬರೂ ಮದುವೆಯಾದ ಮೇಲೆ ಜೊತೆಯಲ್ಲಿ ಟಿಕ್‌ಟಾಕ್ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಸುದ್ದು ಮಾಡುತ್ತಿದ್ದಾರೆ. ಮಾತ್ರವಲ್ಲ, ದೀಪಿಕಾ ಅವರು ತಮ್ಮ ಅತ್ತೆಯೊಂದಿಗೆ ಟಿಕ್ ಟಾಕ್ ಮಾಡಿದ್ದು, ಅತ್ತೆಯೊಂದಿಗೆ ಮೊದಲ ಟಿಕ್ ಟಾಕ್ ಎಂದು ಇನ್ ಸ್ಟಾಗ್ರಾಂ ಪೇಜ್ನಲ್ಲಿ ಬರೆದುಕೊಂಡಿದ್ದಾರೆ.
ಅತ್ತೆಯೊಂದಿಗೆ ದೀಪಿಕಾ ಅವರ ಟಿಕ್‌ಟಾಕ್
ಒಟ್ಟಿನಲ್ಲಿ ಈ ಜೋಡಿ ಸದಾ ಕಾಲ ಹೀಗೆ ಸಂತಸದಿಂದ ಇರಲಿ ಎಂಬುದೇ ಅಭಿಮಾನಿಗಳ ಹಾರೈಕೆ. ಇದೀಗ ಸ್ಟಾರ್ ಸುವರ್ಣ ವಾಹಿನಿಯ 'ಆರತಿಗೊಬ್ಬ ಕೀರ್ತಿಗೊಬ್ಬ' ಧಾರಾವಾಹಿಯ ಮೂಲಕ ಮತ್ತೊಮ್ಮೆ ಕಿರುತೆರೆಯಲ್ಲಿ ತಮ್ಮ ಛಾಪು ಮೂಡಿಸಲು ತಯಾರಾಗಿದ್ದಾರೆ.