ETV Bharat / sitara

ನಾಟಕ, ಆ್ಯಕ್ಟಿಂಗ್​​ ಮಾತ್ರವಲ್ಲ ನಿರೂಪಣೆಗೂ ಸೈ ಅಂದ್ರು ಚಂದನ್ ಆಚಾರ್​​​

author img

By

Published : Mar 11, 2020, 11:35 PM IST

ನೈಜ ಕಥೆಗಳನ್ನು ವೀಕ್ಷಕರ ಮುಂದೆ ಎಳೆಎಳೆಯಾಗಿ ತರುವ 'ಶಾಂತಂ ಪಾಪಂ' ನಿರೂಪಣೆಯನ್ನು ಚಂದನ್​​ ಸೊಗಸಾಗಿ ಮಾಡುತ್ತಿದ್ದಾರೆ. ಚಂದನ್​ 'ಕಿರಿಕ್ ಪಾರ್ಟಿ' ಮೂಲಕ ನಟನಾ ರಂಗಕ್ಕೆ ಕಾಲಿಟ್ಟವರು. ನಿರೂಪಣೆ ಜೊತೆಗೆ 'ಮಂಗಳವಾರ ರಜಾದಿನ' ಸಿನಿಮಾದಲ್ಲಿ ನಾಯಕನಾಗಿ ನಟಿಸುತ್ತಿರುವ ಚಂದನ್, ಬಾಲ್ಯದಿಂದಲೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಒಂದು ಕೈ ಮುಂದು.

Chandan Achar
ಚಂದನ್ ಆಚಾರ್​​​

ಬಿಗ್ ಬಾಸ್ ಸೀಸನ್ 7 ಸ್ಪರ್ಧಿಯಾಗಿದ್ದ ಕಿರಿಕ್ ಪಾರ್ಟಿ ಖ್ಯಾತಿಯ ಚಂದನ್ ಆಚಾರ್ ಇದೀಗ ನಿರೂಪಕರಾಗಿ ಕಾಣಿಸಿಕೊಂಡಿದ್ದಾರೆ. ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರತಿ ರಾತ್ರಿ 8 ಗಂಟೆಗೆ ಪ್ರಸಾರವಾಗುತ್ತಿರುವ 'ಶಾಂತಂ ಪಾಪಂ' ನಿರೂಪಕರಾಗಿ ಚಂದನ್ ಹೊಸ ಕೆಲಸ ಆರಂಭಿಸಿದ್ದಾರೆ.

ನೈಜ ಕಥೆಗಳನ್ನು ವೀಕ್ಷಕರ ಮುಂದೆ ಎಳೆಎಳೆಯಾಗಿ ತರುವ 'ಶಾಂತಂ ಪಾಪಂ' ನಿರೂಪಣೆಯನ್ನು ಚಂದನ್​​ ಸೊಗಸಾಗಿ ಮಾಡುತ್ತಿದ್ದಾರೆ. ಚಂದನ್​ 'ಕಿರಿಕ್ ಪಾರ್ಟಿ' ಮೂಲಕ ನಟನಾ ರಂಗಕ್ಕೆ ಕಾಲಿಟ್ಟವರು. ನಿರೂಪಣೆ ಜೊತೆಗೆ 'ಮಂಗಳವಾರ ರಜಾದಿನ' ಸಿನಿಮಾದಲ್ಲಿ ನಾಯಕನಾಗಿ ನಟಿಸುತ್ತಿರುವ ಚಂದನ್, ಬಾಲ್ಯದಿಂದಲೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಒಂದು ಕೈ ಮುಂದು. ನಾಟಕ, ನೃತ್ಯ ಎಲ್ಲದರಲ್ಲೂ ಇವರದ್ದು ಎತ್ತಿದ ಕೈ. ಮಂಡ್ಯ ರಮೇಶ್ ನಿರ್ದೇಶನದ 'ಆಲಿಬಾಬ ಮತ್ತು ನಲವತ್ತು ಮಂದಿ ಕಳ್ಳರು' ನಾಟಕ ನೋಡಿದ ಚಂದನ್​​​ ನಾಟಕದ ವೇದಿಕೆ, ವಸ್ತ್ರವಿನ್ಯಾಸ, ಬೆಳಕು ನೋಡಿ ಮಾರು ಹೋದರು. ಅದೇ ಸಮಯದಲ್ಲಿ ನಾನೂ ಕೂಡಾ ನಾಟಕಗಳಲ್ಲಿ ನಟಿಸಬೇಕು ಎಂದು ದೃಢನಿರ್ಧಾರ ಮಾಡಿದರು.

Chandan Achar
ಚಂದನ್ ಆಚಾರ್​​​

10 ನೇ ತರಗತಿ ಮುಗಿದು ಪಿಯುಸಿಗೆ ಕಾಲಿಟ್ಟಿದ್ದೇ ತಡ, ಚಂದನ್​​ ನಟನಾ ರಂಗ ಸೇರಿದರು. ವಿದ್ಯಾಭ್ಯಾಸದ ಜೊತೆಗೆ ರಂಗಭೂಮಿಯ ಪಾಠಗಳನ್ನು ಕಲಿತರು. ರಂಗತಯಾರಿ, ಬರವಣಿಗೆ, ರಂಗಸಂಗೀತಗಳಲ್ಲಿ ಪರಿಣಿತಿ ಪಡೆದಿರುವ ಈತ ಬಣ್ಣ ಹಚ್ಚಿದ ಮೊದಲ ಧಾರಾವಾಹಿ ಸಂಕ್ರಾತಿ. ರಂಗಭೂಮಿ, ನಾಟಕಗಳಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿದ ಚಂದನ್ ಆಚಾರ್, ಕಿರಿಕ್ ಪಾರ್ಟಿ ಮೂಲಕ ನಟನಾ ಪಯಣ ಆರಂಭಿಸಿದರು. ನಂತರ 'ಮುಗುಳು ನಗೆ' ಸಿನಿಮಾದಲ್ಲಿ ನಟಿಸಿದ ಚಂದನ್ ಆಚಾರ್ ಅವರಿಗೆ ಹೆಸರು ತಂದುಕೊಟ್ಟದ್ದು ಬಿಗ್ ಬಾಸ್‌. ಇದೀಗ ಹಿರಿತೆರೆಯಲ್ಲಿ ಬ್ಯುಸಿಯಾಗಿರುವ ಚಂದನ್, ಬಿಡುವಿದ್ದಾಗ ನಿರೂಪಣೆ ಮಾಡುತ್ತಾ ಅದರಲ್ಲೂ ಸೈ ಎನಿಸಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.