ETV Bharat / sitara

ಅಜಾಗರೂಕತೆ, ರ‍್ಯಾಶ್ ಡ್ರೈವಿಂಗ್; ಟಾಲಿವುಡ್‌ ನಟ ಸಾಯಿ ಧರಂತೇಜ್‌ ವಿರುದ್ಧ ಕೇಸ್‌ ದಾಖಲು - ತೆಲಂಗಾಣ

ಬೈಕ್‌ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಟಾಲಿವುಡ್‌ ನಟ ಸಾಯಿ ಧರಂ ತೇಜ್‌ ವಿರುದ್ಧ ಹೈದರಾಬಾದ್‌ನ ರಾಯ್‌ದುರ್ಗಂ ಪೊಲೀಸರು ಅಜಾಗರೂಕತೆ ಹಾಗೂ ರ‍್ಯಾಶ್ ಡ್ರೈವಿಂಗ್ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಪೋರ್ಟ್ಸ್‌ ಬೈಕ್‌ ಅಪಘಾತದಲ್ಲಿ ಸಾಯಿ ಧರಂ ತೇಜ್‌ ಗಂಭೀರವಾಗಿ ಗಾಯಗೊಂಡಿದ್ದರು.

case registered against Sai Dharam Tej and reckless and rash driving
ಟಾಲಿವುಡ್‌ ನಟನ ಬೈಕ್‌ ಅಪಘಾತ ಪ್ರಕರಣ; ಸಾಯಿ ಧರಂ ತೇಜ್‌ ವಿರುದ್ಧ ಕೇಸ್‌ ದಾಖಲು
author img

By

Published : Sep 11, 2021, 3:18 PM IST

Updated : Sep 11, 2021, 3:33 PM IST

ಹೈದರಾಬಾದ್‌: ಟಾಲಿವುಡ್‌ ನಟ ಸಾಯಿ ಧರಂ ತೇಜ್ ಬೈಕ್‌ ಅಪಘಾತ ಸಂಬಂಧ ಅಜಾಗರೂಕತೆ ಹಾಗೂ ರ‍್ಯಾಶ್ ಡ್ರೈವಿಂಗ್ ಆರೋಪದಲ್ಲಿ ಸಾಯಿ ಧರಂ ತೇಜ್‌ ವಿರುದ್ಧ ರಾಯ್‌ದುರ್ಗಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಐಪಿಸಿಸಿ ಸೆಕ್ಷನ್‌ 336, 184 ಎಂಪಿ ಕಾಯ್ದೆಯಡಿ ಕೇಸ್‌ ದಾಖಲಿಸಿದ್ದಾರೆ.

ನಿನ್ನೆ ರಾತ್ರಿ 8.05ರ ಬೈಕ್‌ ಅಪಘಾತವಾಗಿದೆ. ಸಿಸಿ ಕ್ಯಾಮರಾದಲ್ಲಿ ಅಪಘಾತದ ದೃಶ್ಯಗಳು ದಾಖಲಾಗಿವೆ ಎಂದು ಮಾಹಿತಿ ನೀಡಿರುವ ಪೊಲೀಸರು, ಸಾಯಿ ಅವರ ಸ್ಪೋರ್ಟ್ಸ್‌ ಬೈಕ್‌ ಅನ್ನು ಸೀಜ್‌ ಮಾಡಿ ರಾಯ್‌ದುರ್ಗಂ ಪೊಲೀಸ್‌ ಠಾಣೆಗೆ ತಂದಿದ್ದಾರೆ.

ದುರ್ಗಂ ಚೇರವು ಕೇಬಲ್‌ ಬ್ರಿಡ್ಜ್‌ ಮೇಲೆ ನಿನ್ನೆ ರಾತ್ರಿ ಸಾಯಿ ಧರಂ ತೇಜ್‌ ಅವರ ಸ್ಪೋರ್ಟ್ಸ್‌ ಬೈಕ್‌ ಅಪಘಾತವಾಗಿತ್ತು. ದುರಂತದಲ್ಲಿ ತೇಜ್‌ ಗಂಭೀರವಾಗಿ ಗಾಯಗೊಂಡು ಪ್ರಜ್ಞೆ ಕಳೆದುಕೊಂಡಿದ್ದರು. ಸುದ್ದಿ ತಿಳಿದು ಸ್ಥಳಕ್ಕೆ ದೌಡಾಯಿಸಿದ್ದ ಪೊಲೀಸರು ಕೂಡಲೇ ಅವರನ್ನು ಮೆಡಿಕವರ್‌ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದರು.

ಇದನ್ನೂ ಓದಿ: ಟಾಲಿವುಡ್​ ನಟ ಸಾಯಿ ಧರಂತೇಜ್ ಆರೋಗ್ಯ ಬುಲೆಟಿನ್ ಬಿಡುಗಡೆ: ಆಸ್ಪತ್ರೆಗೆ ನಟರ ದಂಡು

ಹೆಲ್ತ್‌ ಬುಲೆಟಿನ್‌ ಬಿಡುಗಡೆ

ಹೆಚ್ಚಿನ ಚಿಕಿತ್ಸೆಗಾಗಿ ಸದ್ಯ ಅಪೋಲೋ ಆಸ್ಪತ್ರೆಯಲ್ಲಿ ಸಾಯಿ ಧರಂ ತೇಜ್‌ಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಆಸ್ಪತ್ರೆಯ ವೈದ್ಯರು ಹೆಲ್ತ್‌ ಬುಲೆಟಿನ್‌ ಬಿಡುಗಡೆ ಮಾಡಿದ್ದಾರೆ. ತೇಜ್‌ ಅವರ ಆರೋಗ್ಯ ಸ್ಥಿರವಾಗಿದ್ದು, ಎಲ್ಲ ಅಂಗಾಂಗಳ ಪ್ರಕ್ರಿಯೆ ಉತ್ತಮವಾಗಿಯೇ ಇದೆ ಎಂದು ಹೇಳಿದ್ದಾರೆ. ಐಸಿಯುನಲ್ಲಿ ಚಿಕಿತ್ಸೆ ಮುಂದುವರೆದಿದ್ದು, ಅವರ ಆರೋಗ್ಯದ ಬಗ್ಗೆ ನಿಗಾ ವಹಿಸಿದ್ದಾರೆ. ಮುಂದಿನ ಮೆಡಿಕಲ್‌ ವರದಿ ನಾಳೆ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ.

ಮೆಗಾಸ್ಟಾರ್‌ ಚಿರಂಜೀವಿ ದಂಪತಿ, ಮೆಗಾ ಪವರ್‌ ಸ್ಟಾರ್‌ ರಾಮ್‌ಚರಣ್‌ ಮತ್ತವರ ಪತ್ನಿ ಉಪಾಸನ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ಬಹುಭಾಷಾ ನಟ ಪ್ರಕಾಶ್‌ ರಾಜ್‌, ನಟ ಶ್ರೀಕಾಂತ್‌ ಕೂಡ ಆಸ್ಪತ್ರೆ ಭೇಟಿ ನೀಡಿ ತೇಜ್‌ ಆರೋಗ್ಯ ವಿಚಾರಿಸಿದ್ದಾರೆ.

Last Updated : Sep 11, 2021, 3:33 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.