ಹನಿ ಸಿಂಗ್ ತಮ್ಮ 'ಮಖ್ನಾ' ಸಾಂಗ್ನಲ್ಲಿ ಅಶ್ಲೀಲ ಪದಗಳನ್ನು ಬಳಸಿದ್ದಾರೆ. ಇದರಿಂದ ಮಹಿಳೆಯರಿಗೆ ಅಗೌರವ ತೋರಿದಂತಾಗಿದೆ ಎಂದು ಪಂಜಾಬ್ನ ಮಹಿಳಾ ಆಯೋಗ ಅಲ್ಲಿಯ ಸರ್ಕಾರ ಹಾಗೂ ಪೊಲೀಸ್ ಕಮಿಷನರ್ಗೆ ಪತ್ರ ಬರೆದಿತ್ತು. ಈ ಹಿನ್ನೆಲೆ ಮೊಹಾಲಿ ಪೊಲೀಸರು ಗಾಯಕ ಹನಿ ಸಿಂಗ್ ಹಾಗೂ ಟಿ-ಸೀರಿಸ್ ಕಂಪನಿ ಮಾನೇಜರ್ ಭೂಷಣ್ ಕುಮಾರ್ ವಿರುದ್ಧ ಐಪಿಸಿ ಸೆಕ್ಷನ್ 294, 509, 67 ಹಾಗೂ 2000ನಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಹಿಳಾ ಆಯೋಗದ ಅಧ್ಯಕ್ಷೆ ಮನೀಷಾ ಗುಲಾಟಿ ಅವರು ಹನಿಸಿಂಗ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಜುಲೈ 3 ರಂದು ಪಂಜಾಬ್ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಪಂಜಾಬ್ ಡಿಜಿಪಿ, ಮತ್ತು ಐಜಿಗೆ ಪತ್ರ ಬರೆದು ಒತ್ತಾಯಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಸದ್ಯ ಹನಿಸಿಂಗ್ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.