ETV Bharat / sitara

ಬಿಗ್​ಬಾಸ್​ ಮನೆಯಲ್ಲಿ ನಾಮಿನೇಷನ್ ಬೆಂಕಿ: ಸುದೀಪ್ ಕಿವಿ ಮಾತಲ್ಲೂ ’ಮಹಾ’ ಪಂಚ್! - BIGG BOSS SEASON 8

ಕೋವಿಡ್ ಆರ್ಭಟದ ಕಾರಣ ಅರ್ಧಕ್ಕೆ ಮೊಟಕುಗೊಂಡಿದ್ದ ಬಿಗ್​ಬಾಸ್ ಸೀಸನ್ 8ರ ಮುಂದುವರಿದ ಭಾಗಕ್ಕೆ ಮಂಗಳವಾರ ಅಧಿಕೃತವಾಗಿ ಚಾಲನೆ ಸಿಕ್ಕಿದೆ. ಸ್ಪರ್ಧಿಗಳನ್ನು ವೇದಿಕೆಗೆ ಬರಮಾಡಿಕೊಂಡಿರುವ ಸುದೀಪ್, ಅವರನ್ನು ಮಾತನಾಡಿಸಿ ಬಿಗ್‌ಬಾಸ್ ಮನೆಗೆ ಕಳುಹಿಸಿಕೊಟ್ಟರು.

bigg-boss
ಬಿಗ್​ಬಾಸ್​ ಮನೆ
author img

By

Published : Jun 23, 2021, 4:00 PM IST

ಬಿಗ್‌ಬಾಸ್ ಸೆಕೆಂಡ್ ಇನ್ನಿಂಗ್ಸ್ ಅನ್ನೋದೇ ಒಂದು ವಿಶೇಷ. ಜಗತ್ತಿನ ಯಾವ ದೇಶದಲ್ಲೂ ಯಾವ ಭಾಷೆಯಲ್ಲೂ ನಡೆಯದಿರುವ ಸೆಕೆಂಡ್ ಇನ್ನಿಂಗ್ಸ್ ಇಂದು ಸಂಜೆ ಆರು ಗಂಟೆಗೆ ಕಲರ್ಸ್ ಕನ್ನಡದಲ್ಲಿ ಆರಂಭವಾಗಲಿದೆ. ರೋಚಕ ತಿರುವುಗಳ ಜೊತೆಗೆ ನಡೆಯುವ ಮೊದಲ ದಿನದ ಮಹಾಸಂಚಿಕೆ ಥ್ರಿಲ್ಲರ್ ಸಿನಿಮಾಗಳ ರೀತಿಯ ರೋಮಾಂಚನದ ಭರವಸೆ ನೀಡುತ್ತಿದೆ.

ಬಿಗ್​ಬಾಸ್​ ನಾಮಿನೇಷನ್​ ಪಂಚ್​

ಮನೆಯೊಳಗೆ ಎರಡನೇ ಬಾರಿಗೆ ಪ್ರವೇಶ ಪಡೆಯುತ್ತಿರುವ ಸ್ಪರ್ಧಿಗಳನ್ನು ಕಾರ್ಯಕ್ರಮದ ಹೋಸ್ಟ್ ಕಿಚ್ಚ ಸುದೀಪ್ ಮಾತನಾಡಿಸಿ ಕಳುಹಿಸಿಕೊಟ್ಟರು. ಮೊದಲ ಇನ್ನಿಂಗ್ಸ್‌ನ ಮಾತುಕತೆಗೆ ಹೋಲಿಸಿದರೆ ಈ ಬಾರಿಯ ಮಾತುಕತೆ ಬಹಳ ಭಿನ್ನವಾಗಿತ್ತು. ಏಕೆಂದರೆ, ಪ್ರತಿಯೊಬ್ಬರೂ ಹೊರಗೆ ಹೋಗಿ ಯಾರ್‍ಯಾರು ಏನೇನು ಮಾತನಾಡಿದ್ದಾರೆ, ಹೇಗೆ ಆಡಿದ್ದಾರೆ- ಹೀಗೆ ಎಲ್ಲವನ್ನೂ ನೋಡಿ, ಅಳೆದು ತೂಗಿ ತಮ್ಮದೇ ನಿರ್ಧಾರ ಮಾಡಿಕೊಂಡೇ ಬಂದಿದ್ದರು.

ಹಾಗಾಗಿ ಒಬ್ಬೊಬ್ಬರು ನೀಡಿದ ಉತ್ತರಗಳೂ ಮನೆಯೊಳಗೆ ಸೃಷ್ಟಿಯಾಗಲಿರುವ ಹೊಸ ಸ್ಪರ್ಧಾತ್ಮಕ ವಾತಾವರಣಕ್ಕೆ ದಿಕ್ಸೂಚಿಯಾಗಿದ್ದವು. 2ನೇ ಇನ್ನಿಂಗ್ಸ್‌ಗೆ ಸುದೀಪ್ ಕೂಡಾ ವಿಶಿಷ್ಟತೆಯ ಜೊತೆಗೆ ಆಗಮಿಸಿದ್ದಾರೆ. ಅವರ ಲುಕ್ ಪ್ರತಿ ಎಪಿಸೋಡಿಗೂ ಭಿನ್ನ. ಅದರ ಜೊತೆಗೆ ವಿಶಿಷ್ಟ ಪಂಚಿಂಗ್ ಕಿವಿಮಾತುಗಳು ಮೊದಲ ದಿನ ಮಹಾಸಂಚಿಕೆಯ ವಿಶೇಷ.

ಸ್ಪರ್ಧಿಗಳು ತಮ್ಮದೇ ರೀತಿಯ ಆಟಕ್ಕೆ ಸಿದ್ಧರಾದರೆ ಬಿಗ್‌ಬಾಸ್ ಅವರದೇ ರೀತಿಯಲ್ಲಿ ಸಿದ್ಧತೆ ಮಾಡಿಕೊಳ್ಳದೇ ಇರುತ್ತಾರೆಯೇ? ಅವರ ಸಿದ್ಧತೆಯೂ ವಿಶೇಷವಾಗಿತ್ತು. ಮನೆಯೊಳಗೆ ಹೋಗುವಾಗಲೇ ಒಂದೊಂದು ಟಾಸ್ಕ್.

ಹೋದ ಕೂಡಲೇ ಇನ್ನೊಂದು ಅಚ್ಚರಿ, ಒಂದು ಸ್ಫೋಟಕ ನಾಮಿನೇಷನ್- ಹೀಗೆ ಮೊದಲ ದಿನದ ಮಹಾ ಸಂಚಿಕೆ ಮೊದಲೇ ಹೇಳಿದಂತೆ ಎಲ್ಲ ವಿಧದಲ್ಲಿಯೂ ಒಂದು ಥ್ರಿಲ್ಲರ್. ಬ್ರೇಕ್‌ನ ನಂತರ ಬಿಗ್ಬಾಸ್ ಸ್ಪರ್ಧಿಗಳ ಲೆಕ್ಕಾಚಾರ ಹೇಗಿದೆ. ಯಾರ ಲೆಕ್ಕಾಚಾರ ವರ್ಕೌಟ್ ಆಗಲಿದೆ, ಯಾರ ಲೆಕ್ಕ ತಪ್ಪಲಿದೆ, ಬಿಗ್‌ಬಾಸ್ ಲೆಕ್ಕಾಚಾರ ಏನು? ಎಂಬುದು ಗೊತ್ತಾಗಲಿದೆ.

ಸ್ಪರ್ಧಿಗಳಲ್ಲಿ ಮಾತಿನ ಬೆಂಕಿ: ಸೆಕೆಂಡ್ ಇನ್ನಿಂಗ್ಸ್​ಗಾಗಿ ಬಿಗ್ ಬಾಸ್ ಮನೆ ಪ್ರವೇಶಿಸುತ್ತಿದ್ದಂತೆ ಸ್ಪರ್ಧಿಗಳಲ್ಲಿ ಮಾತಿನ ಬೆಂಕಿ ಹೊತ್ತಿಕೊಂಡಿದೆ. ಅದರಲ್ಲೂ ದಿವ್ಯಾ ಸುರೇಶ್ ಹಾಗೂ ದಿವ್ಯಾ ಉರುಡುಗ ಇಬ್ಬರು ಕಿತ್ತಾಡಿಕೊಂಡಿದ್ದಾರೆ.

ಸ್ಪರ್ಧಿಗಳಲ್ಲಿ ಮಾತಿನ ಬೆಂಕಿ

ಇದೇ ಮೊದಲ ಬಾರಿಗೆ ಈ ನಿಯಮ ಮುರಿಯಲ್ಪಟ್ಟಿದೆ. ಎಲ್ಲ ಸ್ಪರ್ಧಿಗಳು 75 ದಿನದ ಎಪಿಸೋಡ್​ಗಳನ್ನು ನೋಡಿ ಮತ್ತೆ ಬಿಗ್​ ಬಾಸ್​ ಮನೆ ಒಳಗೆ ಹೋಗಿದ್ದಾರೆ. ಪರಿಣಾಮ ಮನೆಯಲ್ಲಿ ಮೊದಲ ದಿನವೇ ದೊಡ್ಡ ಬೆಂಕಿ ಹೊತ್ತಿಕೊಂಡಿದೆ. ಮೊದಲ ದಿನದ ನಾಮಿನೇಷನ್ ಪ್ರಕ್ರಿಯೆಯಲ್ಲಿ ಮನೆಯ ವಾತಾವರಣವೇ ಬದಲಾಗಿದೆ. ನಿಧಿ ಸುಬ್ಬಯ್ಯ ಎಂದಿನಂತೆ ಪ್ರಶಾಂತ್ ಸಂಬರ್ಗಿ ವಿರುದ್ಧ ಕಿಡಿಕಾರಿದ್ದು, ನೀವು ನನ್ನ ಗೆಳೆಯರಲ್ಲ. ನಾನು ನಿಮ್ಮ ಗೆಳತಿಯಲ್ಲ ಎಂದು ಖಡಕ್ಕಾಗಿ ಉತ್ತರಿಸಿದ್ದಾರೆ.

ಕೆಪಿ ಅರವಿಂದ್ ಕೂಡ ಮಂಜು ಪಾವಗಡ ವಿರುದ್ಧ ತಿರುಗಿ ಬಿದ್ದಿದ್ದಾರೆ. ವೈಷ್ಣವಿ ಗೌಡ ಹಾಗೂ ರಘು ಇಬ್ಬರು ಚಂದ್ರಚೂಡ ವಿರುದ್ಧ ಕಿಡಿಕಾರಿದ್ದಾರೆ. ದಿವ್ಯಾ ಸುರೇಶ ಹಾಗೂ ದಿವ್ಯಾ ಉರುಡುಗ ಇಬ್ಬರೂ ಮನೆ ಪ್ರವೇಶಿಸುತ್ತಿದ್ದಂತೆಯೇ ಒಬ್ಬರಿಗೊಬ್ಬರು ಕಿತ್ತಾಡಿಕೊಂಡಿದ್ದಾರೆ.

ಬಿಗ್​ಬಾಸ್ ಸೀಸನ್​ 8 ಅರ್ಧಕ್ಕೆ ನಿಲ್ಲುವಾಗ ಮನೆಯೊಳಗೆ ಅರವಿಂದ್ ಕೆ.ಪಿ, ಮಂಜು ಪಾವಗಡ, ಶಮಂತ್ ಬ್ರೋ ಗೌಡ, ಚಕ್ರವರ್ತಿ ಚಂದ್ರಚೂಡ್, ರಘು ಗೌಡ, ಶುಭಾ ಪೂಂಜಾ, ವೈಷ್ಣವಿ ಗೌಡ, ದಿವ್ಯಾ ಸುರೇಶ್, ಪ್ರಿಯಾಂಕಾ ತಿಮ್ಮೇಶ್, ನಿಧಿ ಸುಬ್ಬಯ್ಯ, ಪ್ರಶಾಂತ್​ ಸಂಬರಗಿ ಹಾಗೂ ದಿವ್ಯಾ ಉರುಡುಗ ಸೇರಿ 12 ಸ್ಪರ್ಧಿಗಳು ಇದ್ದಾರೆ.

ಓದಿ: ಬಿಗ್​ಬಾಸ್ ಸೆಕೆಂಡ್ ಇನ್ನಿಂಗ್ಸ್ ಆರಂಭ ; ಸ್ಪರ್ಧಿಗಳ ರೀ ಎಂಟ್ರಿಯನ್ನು ಸಂಜೆ ವೀಕ್ಷಿಸಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.