ETV Bharat / sitara

ಫೆಬ್ರವರಿಯಲ್ಲಿ ಬರಲಿದೆಯಂತೆ ಬಿಗ್​ಬಾಸ್ ಸೀಸನ್-8 - ಬಿಗ್​ಬಾಸ್ ಸೀಸನ್ 8

ಎಲ್ಲವೂ ಅಂದುಕೊಂಡಂತೆ ಆದರೆ‌ ಶೀಘ್ರವೇ ಕನ್ನಡದ ಅತ್ಯಂತ ದೊಡ್ಡ ರಿಯಾಲಿಟಿ ಶೋ ಬಿಗ್​ಬಾಸ್​ ನಿಮ್ಮ ಮುಂದೆ ಪ್ರಸಾರವಾಗಲಿದೆ.

bigg-boss-season-8-likely-to-launch-in-february
ಗ್​ಬಾಸ್ ಸೀಸನ್ 8
author img

By

Published : Jan 26, 2021, 4:13 AM IST

ಬಿಗ್​ಬಾಸ್ ಸೀಸನ್‌-8ಕ್ಕೆ‌ ಮುಹೂರ್ತ ಕೂಡಿ ಬಂದಿದೆ. ಎಲ್ಲವೂ ಅಂದುಕೊಂಡಂತೆ ಆದರೆ‌ ಶೀಘ್ರವೇ ಕನ್ನಡದ ಅತ್ಯಂತ ದೊಡ್ಡ ರಿಯಾಲಿಟಿ ಶೋ ಬಿಗ್​ಬಾಸ್​ ನಿಮ್ಮ ಮುಂದೆ ಪ್ರಸಾರವಾಗಲಿದೆ.

ಹೌದು, ಅಂತೆ ಕಂತೆಗಳಿಗೆ ವಿರಾಮ‌ ಇಡಲು ಮುಂದಾಗಿರುವ ಕಲರ್ಸ್​ ವಾಹಿನಿ ‌ಶೀಘ್ರವೇ ಆರಂಭಿಸುವ ಮುನ್ಸೂಚನೆ ನೀಡಿದೆ. ಕಳೆದ ಎರಡು ತಿಂಗಳಿಂದ ಹರಿದಾಡುತ್ತಿರುವ ಸುದ್ದಿಗೆ ವಾಹಿನಿಯ ಮುಖ್ಯಸ್ಥರಿಂದಲೇ ಉತ್ತರ ಬಂದಿದೆ. ಬಿಗ್‌ಬಾಸ್ ಫೆಬ್ರವರಿಯಲ್ಲಿ ಲಾಂಚ್ ಆಗಲಿದೆ. ಫೆಬ್ರವರಿ ಮೊದಲ ಅಥವಾ ಎರಡನೇ ವಾರದಲ್ಲಿಯೇ ಬಿಗ್‌ಬಾಸ್ ಸೀಸನ್‌-8 ಲಾಂಚ್ ಆಗಲಿದೆ ಎನ್ನಲಾಗುತ್ತಿದೆ.

ಕೆಲವೇ ದಿನಗಳಲ್ಲಿ ಬಿಗ್‌ಬಾಸ್ ಪ್ರೋಮೊ ಬಿಡುಗಡೆ ಆಗಲಿದ್ದು, ಅದೇ ದಿನವೇ ಬಿಗ್‌ಬಾಸ್ ಲಾಂಚ್ ದಿನಾಂಕವೂ ಘೋಷಣೆ ಆಗಲಿದೆ. ಕಿಚ್ಚ ಸುದೀಪ್​ ತಮ್ಮ ಹಳೆಯ ಸ್ಟೈಲ್‌ನಲ್ಲಿ ಬಿಗ್‌ಬಾಸ್ ಕಾಫಿ ಕಪ್ ಹಿಡಿದು ಪ್ರೋಮೊ ಚಿತ್ರೀಕರಣ ಪ್ರಗತಿಯಲ್ಲಿದೆ ಎಂದು ಬರೆದುಕೊಂಡಿದ್ದರು. ಸೀಸನ್​-8ರಲ್ಲಿ ಯಾರೆಲ್ಲ ಸ್ಪರ್ಧಿಗಳು ಇರಲಿದ್ದಾರೆ ಎಂಬುದು ಎಲ್ಲರ ಕುತೂಹಲವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.