ETV Bharat / sitara

ಬಿಗ್ ಬಾಸ್ ಸೀಸನ್ 8 : ದೊಡ್ಮನೆಗೆ ಕಾಲಿಟ್ಟ 17 ಸ್ಪರ್ಧಿಗಳ ಮಾಹಿತಿ ಇಲ್ಲಿದೆ.. - Bigg Boss season 8 News 2021'

ಬಿಗ್ ಬಾಸ್ ಸೀಸನ್-8ರ ಆರಂಭವೂ ಗ್ರ್ಯಾಂಡ್ ಆಗಿ ಆಗಿದ್ದು, ಒಟ್ಟು 17 ಮಂದಿ ದೊಡ್ಡಮನೆಗೆ ಕಾಲಿಟ್ಟಿದ್ದಾರೆ..

Bigg Boss season 8
ಬಿಗ್ ಬಾಸ್ ಸೀಸನ್ 8
author img

By

Published : Mar 1, 2021, 8:45 AM IST

ಮೊದಲ ಬಾರಿಗೆ ವೇದಿಕೆ ಮೇಲೆ ನಟ ಸುದೀಪ್​​ಗೆ ಟ್ವಿಸ್ಟ್ ನೀಡುವ ಮೂಲಕ ಬಿಗ್​ಬಾಸ್​ ಕಾರ್ಯಕ್ರಮ ಪ್ರಾರಂಭವಾಯಿತು. ನಂತರ ಸುದೀಪ್‌ ಬಿಗ್ ಬಾಸ್ ಮನೆ ಪ್ರವೇಶಿಸಿ ಮನೆ ತೋರಿಸಿದರು. ಟಿಕ್ ಟಾಕ್ ಸ್ಟಾರ್ ಧನುಶ್ರೀ ಸೀಸನ್-8ರ ಮೊದಲ ಸ್ಪರ್ಧಿಯಾಗಿ‌ ಪ್ರವೇಶಿಸಿದರು. ಇವರ ಜೊತೆ ಅವರ ಅಮ್ಮ, ಅಪ್ಪ, ಅಣ್ಣ ಆಗಮಿಸಿದ್ದರು.

ಎರಡನೇ ಸ್ಪರ್ಧಿಯಾಗಿ ಶುಭಾ ಪೂಂಜಾ ಆಗಮಿಸಿದ್ದು, ಅವರಿಗೆ ಉಪ್ಪಿನಕಾಯಿ ಇಷ್ಟ ಅಂತೆ. ಅವರ ಜೊತೆ ತಾಯಿ, ನಿಶ್ಚಿತಾರ್ಥವಾದ ಹುಡುಗ ಹಾಗೂ ನಿರ್ದೇಶಕಿ ಸುಮನಾ ಕಿತ್ತೂರು ಆಗಮಿಸಿದ್ದರು. ಮೂರನೇ ಸ್ಪರ್ಧಿಯಾಗಿ ಶಂಕರ್ ಅಶ್ವತ್ಥ್ ಎಂಟ್ರಿ ನೀಡಿದ್ದಾರೆ.

ಹಿರಿಯ ನಟ ಅಶ್ವತ್ಥ್ ಅವರ ಮಗ ಇವರು. ಇವರೊಂದಿಗೆ 90 ವರ್ಷ ದಾಟಿದ ತಾಯಿ, ಪತ್ನಿ ಹಾಗೂ ಪುತ್ರ ಬಂದಿದ್ದರು. ಪ್ರಸ್ತುತ ಮೈಸೂರಿನಲ್ಲಿ ಟ್ಯಾಕ್ಸಿ ಡ್ರೈವರ್​ ಆಗಿ ಇವರು ಕಾರ್ಯ ನಿರ್ವಹಿಸುತ್ತಿದ್ದಾರೆ.

ಈ ಶೋನಲ್ಲಿ 19 ವರ್ಷದ ಸಿಂಗರ್ ವಿಶ್ವನಾಥ್ ನಾಲ್ಕನೇ ಸ್ಪರ್ಧಿಯಾಗಿದ್ದಾರೆ. ಮನೆಯಲ್ಲಿ ಅತ್ಯಂತ ಕಿರಿಯ ಸ್ಪರ್ಧಿಯಾಗಿ ಮನೆ ಪ್ರವೇಶಿಸಿದ್ದಾರೆ. ಧಾರವಾಡದ ಗಾಯಕ ಕನ್ನಡ ಕೋಗಿಲೆಯಲ್ಲಿ ಸ್ಪರ್ಧಿಸಿದ್ದರು. ಅಗ್ನಿಸಾಕ್ಷಿ ಧಾರಾವಾಹಿಯ ಸನ್ನಿಧಿ ಪಾತ್ರಧಾರಿ ವೈಷ್ಣವಿ ಗೌಡ ಐದನೇ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆ ಪ್ರವೇಶಿಸಿದ್ದಾರೆ. ಅವರ ತಂದೆ, ತಾಯಿ ಬಂದಿದ್ದರು.

ಬಿಗ್ ಬಾಸ್ ಕನ್ನಡ 8ನೇ ಆವೃತ್ತಿಯಲ್ಲಿ 6ನೇ ಸ್ಪರ್ಧಿಯಾಗಿ ರೇಸರ್ ಅರವಿಂದ್ ಎಂಟ್ರಿ ಕೊಟ್ಟಿದ್ದಾರೆ. ಅರವಿಂದ್ ಬೈಕ್ ರೇಸರ್, ಸಾಹಸ ಕಲಾವಿದ. ಹಲವು ಸಿನಿಮಾಗಳಲ್ಲಿ, ಜಾಹೀರಾತುಗಳಲ್ಲಿ ಸಾಹಸ ಕಲಾವಿದನಾಗಿ ಕಾಣಿಸಿದ್ದಾರೆ. ಸ್ಟಾರ್ ಕ್ರಿಕೆಟಿಗರಿಗೆ, ಸ್ಟಾರ್ ಹೀರೋಗಳಿಗೆ ಡೂಪ್ ಕಲಾವಿದನಾಗಿ ಕೆಲಸ ಮಾಡಿದ್ದಾರೆ.

ಏಳನೇ ಸ್ಪರ್ಧಿಯಾಗಿ ನಟಿ ನಿಧಿ ಸುಬ್ಬಯ್ಯ ಆಗಮಿಸಿದ್ದು, ನಟಿ ನಿಶ್ಚಿಕಾ ನಾಯ್ಡು ಡಾನ್ಸ್​ ಪ್ರದರ್ಶನದ ಮೂಲಕ ನಿಧಿ ಅವರನ್ನು ವೇದಿಕೆ ಮೇಲೆ ಬರ ಮಾಡಿಕೊಂಡರು. ಏಂಟನೇ ಸ್ಪರ್ಧಿಯಾಗಿ ಮನೆ ಪ್ರವೇಶ ಮಾಡಿದ್ದು ಬ್ರೋ ಗೌಡ. ಮೂಲ ಹೆಸರು ಶಮಂತಾ. ಆದರೆ, ಬ್ರೋ ಗೌಡ ಎಂದೇ ಖ್ಯಾತಿ ಗಳಿಸಿದ್ದಾರೆ. ವೆಬ್‌ ಸಿರೀಸ್‌ವೊಂದರಲ್ಲಿ ನಟಿಸಿದ್ದರಂತೆ. ಅಲ್ಲಿ ಬ್ರೋ ಗೌಡ ಎಂಬ ಪಾತ್ರ ನಿರ್ವಹಿಸಿದ್ದರು.

9ನೇ ಸ್ಪರ್ಧಿಯಾಗಿ ಗೀತಾ ಭಟ್ ಎಂಟ್ರಿ ಕೊಟ್ಟಿದ್ದು, ಹಾಡುಗಾರ್ತಿ ಕೂಡ ಆಗಿರುವ ಗೀತಾ ಭಟ್, ಬ್ರಹ್ಮಗಂಟು ಧಾರಾವಾಹಿ ಮೂಲಕ ಮನೆ ಮಾತಾಗಿದ್ದಾರೆ.

10ನೇ ಸ್ಪರ್ಧಿಯಾಗಿ ಮಜಾ ಭಾರತ ಖ್ಯಾತಿಯ ಕಾಮಿಡಿ ಸ್ಟಾರ್ ಮಂಜು ಪಾವಗಡ ಎಂಟ್ರಿ ಕೊಟ್ಟಿದ್ದಾರೆ. ತುಂಬಾ ಕಷ್ಟಪಟ್ಟು ನಟನ ವೃತ್ತಿಗೆ ಕಾಲಿಟ್ಟಿರುವ ಮಂಜು ಬಿಗ್ ಬಾಸ್ ಮನೆಯಲ್ಲಿ ಎಲ್ಲರನ್ನೂ ರಂಜಿಸಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕಿದೆ.

11ನೇ ಸ್ಪರ್ಧಿಯಾಗಿ ಕಿರುತೆರೆ ನಟಿ ಮತ್ತು ಮಾಡೆಲ್ ದಿವ್ಯಾ ರಾವ್ ಮನೆ ಪ್ರವೇಶಿಸಿದ್ದಾರೆ. ಧಾರಾವಾಹಿ ಮತ್ತು ಸಿನಿಮಾಗಳಲ್ಲಿ ನಟಿಸಿರುವ ದಿವ್ಯಾ, ತೆಲುಗು ಸಿನಿಮಾರಂಗದಲ್ಲೂ ಮಿಂಚಿದ್ದಾರೆ.

12ನೇ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಯೊಳಗೆ ಕಾಲಿಟ್ಟಿದ್ದು ಪುಟ್ಟ ಗೌರಿ ಮದುವೆಯ ಅಜ್ಜಮ್ಮ ಖ್ಯಾತಿಯ ಚಂದ್ರಕಲಾ ಮೋಹನ್. ರಂಗಭೂಮಿ, ನಾಟಕ, ಧಾರಾವಾಹಿಗಳಲ್ಲಿ ನಟಿಸಿ ಸೀರಿಯಲ್ ವೀಕ್ಷಕರ ಮನ ಸೆಳೆದಿರುವ ಚಂದ್ರಕಲಾ ಮೋಹನ್ ಇದೀಗ ಬಿಗ್ ಬಾಸ್ ಸ್ಪರ್ಧಿಯಾಗಿ ಕಾಣಿಸಿದ್ದಾರೆ. ಅವರನ್ನು ಬೀಳ್ಗೊಡಲು ಮಗ ಮತ್ತು ಸೊಸೆ ಬಂದಿದ್ದರು. ‌

ಚಂದ್ರಕಲಾ ಮೋಹನ್​
ಚಂದ್ರಕಲಾ ಮೋಹನ್​

13 ನೇ ಸ್ಪರ್ಧಿಯಾಗಿ ಬಿಗ್ ಬಾಸ್ ಕನ್ನಡ ಸೀಸನ್ 8ರ ಮನೆಗೆ ಪ್ರವೇಶಿಸಿದ್ದು ರಘು ಗೌಡ. ರಘು ವೈನ್​ ಸ್ಟೋರ್​ ಹೆಸರಿನ ಯೂಟ್ಯೂಬ್​ ಚಾನೆಲ್​ ಮೂಲಕವೇ ಖ್ಯಾತಿ ಪಡೆದವರು ಈ ರಘು. ಈಗ ಅಭ್ಯರ್ಥಿಯಾಗಿ ಕನ್ನಡದ ಬಿಗ್​ ಬಾಸ್​ ಮನೆ ಒಳಗೆ ತೆರಳಿದ್ದಾರೆ. ರಘು ಮೂಲತಃ ಐಟಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದವರು. ರಘು ವೈನ್​ ಸ್ಟೋರ್​ ಚಾನೆಲ್ ಬರೋಬ್ಬರಿ 1.69 ಲಕ್ಷ ಸಬ್​ಸ್ಕ್ರೈಬರ್​ಗಳನ್ನು ಹೊಂದಿದೆ. ರಘು ಅವರ ಜೊತೆ ಹೆಂಡತಿ, ಮಗು ಬಂದಿದ್ದು ಸಂತಸದಿಂದ ಮನೆಯೊಳಗೆ ಕಳಿಸಿಕೊಟ್ಟರು.

ರಘು ಗೌಡ
ರಘು ಗೌಡ

14ನೇ ಸ್ಪರ್ಧಿಯಾಗಿ ಪ್ರಶಾಂತ್ ಸಂಬರಂಗಿ ಬಿಗ್​ ಬಾಸ್​ ಮನೆಗೆ ಎಂಟ್ರಿಕೊಟ್ಟಿದ್ದಾರೆ. ಸಂಬರಂಗಿ ಅವರು ಇತ್ತೀಚೆಗಷ್ಟೇ ಡ್ರಗ್ಸ್ ವಿಚಾರದಲ್ಲಿ ಸಾಕಷ್ಟು ಸುದ್ದಿ ಮಾಡಿದ್ದರು. ಇವರನ್ನು ದೊಡ್ಮನೆಗೆ ಕಳಿಸಿಕೊಡಲು ಹೆಂಡತಿ, ಮಗ ಮತ್ತು ಮನೆಯವರು ಬಂದಿದ್ದರು. ಮೂಲತಃ ಬೆಳಗಾವಿಯವರಾಗಿರುವ ಸಂಬರಗಿ, ಬೆಳೆದಿದ್ದು ಬೆಂಗಳೂರಿನಲ್ಲಿ. ಪ್ರಶಾಂತ್ ಉದ್ಯಮಿ ಆಗಿದ್ದು, ಅರ್ಜುನ್ ಸರ್ಜಾ ಅವರಿಗೆ ಆಪ್ತರಾಗಿದ್ದಾರೆ. ಅಲ್ಲದೆ ಡಬ್ಬಿಂಗ್ ಪರ ಹೋರಾಡಿದವರಲ್ಲಿ ಪ್ರಶಾಂತ್ ಕೂಡ ಪ್ರಮುಖರು.

ಪ್ರಶಾಂತ್​ ಸಂಬರಗಿ
ಪ್ರಶಾಂತ್​ ಸಂಬರಗಿ

15ನೇ ಸ್ಪರ್ಧಿಯಾಗಿ ಅಂಬಾರಿ ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟು ಮುಂದೆ ಹಿರಿತೆರೆಯಲ್ಲೂ ಕಮಾಲ್ ಮಾಡಿದ ಚೆಂದುಳ್ಳಿ ಚೆಲುವೆ ದಿವ್ಯಾ ಉರುಡಗ ಆಗಮಿಸಿದ್ದಾರೆ. ಫೇಸ್‌ಬುಕ್‌ನಲ್ಲಿ ಅವರ ಫೋಟೋ ವೀಕ್ಷಿಸಿದ ಸೀರಿಯಲ್ ತಂತ್ರಜ್ಞರೊಬ್ಬರು ನಿರ್ದೇಶಕ ವಿನು ಬಳಂಜರಿಗೆ ದಿವ್ಯಾರನ್ನು ಪರಿಚಯಿಸಿದ್ದಾರೆ. ಅಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆ 'ಸಪ್ತಪದಿ' ಧಾರಾವಾಹಿಯಲ್ಲಿ ಮುಖ್ಯಪಾತ್ರಕ್ಕೇ ಅವರಿಗೆ ಕರೆ ಬಂದಿತ್ತು.

ದಿವ್ಯಾ ಉರುಡಗ
ದಿವ್ಯಾ ಉರುಡಗ

16ನೇ ಸ್ಪರ್ಧಿಯಾಗಿ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಮೂಲಕವೇ ಹೆಚ್ಚು ಗುರುತಿಸಿಕೊಂಡಿರುವ ರಾಜೀವ್ ಆಗಮಿಸಿದ್ದಾರೆ. ರಾಜೀವ್ ಹನು, CCLನಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ತಂಡದಲ್ಲಿ ಕಾಣಿಸಿಕೊಂಡವರು.

ರಾಜೀವ್
ರಾಜೀವ್

ಇನ್ನು, ಬಿಗ್ ಬಾಸ್ ಕನ್ನಡ ಸೀಸನ್ 8ರ 17ನೇ ಅಭ್ಯರ್ಥಿಯಾಗಿ ಅಂದರೆ ಕೊನೆಯ ಅಭ್ಯರ್ಥಿಯಾಗಿ ನಿರ್ಮಲಾ ಮನೆಗೆ ಆಗಮಿಸಿದ್ದಾರೆ. ಪೂರ್ಣ ಚಂದ್ರ ತೇಜಸ್ವಿಯವರ ಕಿರಗೂರಿನ ಗೈಯಾಳಿಗಳು ಕಾದಂಬರಿ ಆಧಾರಿತ ಚಿತ್ರಕ್ಕೆ ಡಬ್ಬಿಂಗ್​ ಕಲಾವಿದೆಯಾಗಿ ಸಹ ಕೆಲಸ ಮಾಡಿದ್ದಾರೆ. ಟಿವಿ ಕಾರ್ಯಕ್ರಮಗಳನ್ನು ನಿರ್ದೇಶಿಸುವುದರ ಜೊತೆಗೆ, ಅವರು ಅದ್ಭುತ ಡಬ್ಬಿಂಗ್ ಕಲಾವಿದೆ ಮತ್ತು ನಟಿ ಕೂಡ ಆಗಿದ್ದಾರೆ.

ನಿರ್ಮಲಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.