ಬಿಗ್ಬಾಸ್ ಸೆಕೆಂಡ್ ಇನಿಂಗ್ಸ್ ಮೊದಲ ದಿನದ ಮಹಾಸಂಚಿಕೆ ನೋಡಿದ ಮೇಲೆ ವೀಕ್ಷಕರಿಗೆ ಸ್ಪರ್ಧಿಗಳ ಮೇಲೆ ಇರುವ ಅಭಿಪ್ರಾಯ ಬದಲಾಗಿದೆ. ಹಾಗೆಯೇ ಈಗಾಗಲೇ ಬಿಗ್ಬಾಸ್ ಮನೆಯೊಳಗೆ ತೆರಳಿರುವ ಸ್ಪರ್ಧಿಗಳ ಮನಸ್ಥಿತಿಯೂ ಬದಲಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.
ಕೆಲವರು ಎಂದಿನಂತೆ ತಮ್ಮ ಸ್ನೇಹವನ್ನು ಮುಂದುವರೆಸಿಕೊಂಡು ಹೋದರೆ, ಮತ್ತೆ ಕೆಲವರು ಅಸಲಿ ಆಟ ಇನ್ನು ಮುಂದೆ ಶುರು ಎನ್ನುವ ಲೆಕ್ಕದಲ್ಲಿ ಮನೆಯೊಳಗೆ ಕಾಲಿಟ್ಟಿದ್ದಾರೆ. ಇನ್ನು ಸ್ಪರ್ಧಿಗಳ ಮಾತು ಕೇಳಿಸಿಕೊಂಡ ವೀಕ್ಷಕರು, “ಹಾಗಾದರೆ ಇಷ್ಟು ದಿನ ಮಾಡಿದ್ದು ಡ್ರಾಮಾ, ಈಗ ರಿಯಲ್ ಆಗಿ ನಡೆದುಕೊಳ್ಳುತ್ತಿದ್ದೀರಾ” ಎಂದು ಪ್ರಶ್ನಿಸುತ್ತಿದ್ದಾರೆ.
ಬಿಗ್ಬಾಸ್ ಮೊದಲ ಇನ್ನಿಂಗ್ಸ್’ನಲ್ಲಿ ಮುಂಜು-ಪಾವಗಡ ಮತ್ತು ದಿವ್ಯಾ ಸುರೇಶ್, ದಿವ್ಯಾ ಉರುಡುಗ ಮತ್ತು ಅರವಿಂದ್ ಕೆಪಿ ಜೋಡಿ ಭಾರೀ ಸುದ್ದಿ ಮಾಡಿತ್ತು. ಹಾಗೆಯೇ ವೈಷ್ಣವಿ-ರಘು ಅವರು ಒಟ್ಟಿಗೆ ಇರುವುದನ್ನು ನೋಡಿ ಕೆಲವು ಸ್ಪರ್ಧಿಗಳು ತಮಾಷೆ ಮಾಡಿದರೆ, ಮತ್ತೆ ಕೆಲವರು ಬೇರೆಯದೇ ರೀತಿ ಮಾತನಾಡಿದ್ದರು. ಈ ಎಲ್ಲಾ ವಿಚಾರಗಳು ಇದೀಗ ವೈಷ್ಣವಿ ಅವರ ಗಮನಕ್ಕೆ ಬಂದಿದ್ದು, ಚಕ್ರವರ್ತಿ ಚಂದ್ರಚೂಡ್ ಅವರಿಗೆ ವೈಷ್ಣವಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಬಿಗ್ಬಾಸ್ ಮನೆಯಲ್ಲಿ 3 ಜೋಡಿಗಳಿದ್ದಾರೆ. ನಾನೇ ತಾಳಿ ತಂದುಕೊಡ್ತಿದ್ದೆ ಎಂದು ನೀವು ಹೇಳಿದ್ದೀರಿ' ಎಂಬುದಾಗಿ ಚಕ್ರವರ್ತಿ ಚಂದ್ರಚೂಡ್ ಬಳಿ ವೈಷ್ಣವಿ ವಾದಿಸಿದರು. ಆದರೆ, ಇದನ್ನು ಚಕ್ರವರ್ತಿ ಒಪ್ಪಿಕೊಳ್ಳಲಿಲ್ಲ. 'ನಾನು ದಿವ್ಯಾ ಮಾತನಾಡುತ್ತಿದ್ದೇವೆ ಎಂದರೆ ನಮಗೆ ಸಂಬಂಧ ಇದೆ ಎಂದರ್ಥವಲ್ಲ. ನೀವು ಮನೆಯಲ್ಲಿ ಕೆಲವರ ಜತೆ ಆಪ್ತರಾಗಿದ್ದೀರಿ. ಅಂದ ಮಾತ್ರಕ್ಕೆ ನೀವಿಬ್ಬರು ಜೋಡಿ ಎಂದು ನಾವು ಕರೆಯಬಹುದಾ' ಎಂದು ಚಕ್ರವರ್ತಿಗೆ ಖಡಕ್ ಆಗಿ ಉತ್ತರಿಸಿದ್ದಾರೆ.
ಸ್ಪರ್ಧೆ ಕಠಿಣವಾಗಿರಲಿದೆ ಎಂಬುದರ ಸುಳಿವು: ಬಿಗ್ಬಾಸ್ ಕನ್ನಡ ಸೀಸನ್ 8 ರ 2ನೇ ಇನ್ನಿಂಗ್ಸ್ ಹೆಚ್ಚು ಇಂಟ್ರೆಸ್ಟಿಂಗ್ ಆಗಿದೆ ಎಂಬುದು ಮೊದಲ ದಿನದ ಮಹಾಸಂಚಿಕೆ ನೋಡಿದವರಿಗೆ ಗೊತ್ತಿರುತ್ತದೆ. ಮತ್ತೆ ಬಿಗ್ಬಾಸ್ ಮನೆಗೆ ಪ್ರವೇಶಿಸಿದ ಹನ್ನೆರಡು ಸ್ಪರ್ಧಿಗಳು, ಈ ಬಾರಿ ಸ್ಪರ್ಧೆ ಕಠಿಣವಾಗಿರಲಿದೆ ಎಂಬುದರ ಸುಳಿವನ್ನು ಈಗಾಗಲೇ ಪಡೆದುಕೊಂಡಿದ್ದಾರೆ.
ಕೆಲವು ದಿನಗಳ ನಂತರ ಸ್ಪರ್ಧಿಗಳು ಮತ್ತೆ ಬಿಗ್ಬಾಸ್ ಮನೆಯೊಳಗೆ ಕಾಲಿಟ್ಟಿರುವುದಕ್ಕೆ ಸಂತಷ ವ್ಯಕ್ತಪಡಿಸಿದ್ದಾರೆ. ಬಿಗ್ಬಾಸ್ ಕೂಡ ಸ್ಪರ್ಧಿಗಳು ಮೊನೆಯೊಳಗೆ ಕಾಲಿಡುತ್ತಿದ್ದಂತೆ ಟಾಸ್ಕ್ ನೀಡಿದ್ದರು. ಈ ಟಾಸ್ಕ್’ನಲ್ಲಿ ಗೆದ್ದವರು ಮತ್ತು ಸೋತವರು ಎಂದು ಕ್ರಮವಾಗಿ ಎರಡು ತಂಡಗಳಾಗಿ ವಿಂಗಡಿಸಲಾಯಿತು.
ಕೆಲವರಿಗೆ ಬಿಗ್ಬಾಸ್ ವೇದಿಕೆಯ ಮೇಲೆಯೇ ಟಾಸ್ಕ್ ನೀಡಿದರೆ, ಮತ್ತೆ ಕೆಲವರಿಗೆ ಮನೆಗೆ ಪ್ರವೇಶಿಸಿದ ನಂತರ ಮನೆಯೊಳಗೆ ಕಾಲಿಡುತ್ತಿದ್ದಂತೆ ನೀಡಿದರು. ಈ ಸ್ಪರ್ಧೆಯಲ್ಲಿ ಇಬ್ಬರು ಸ್ಪರ್ಧಿಗಳು ಮಾತ್ರ ಭಾಗವಹಿಸಲು ಅವಕಾಶವಿತ್ತು. ವಿಜೇತ ಸ್ಪರ್ಧಿಯನ್ನು 'ಲೀಡರ್ಸ್' ತಂಡಕ್ಕೆ ಗೊತ್ತುಪಡಿಸಿದರೆ, ಸೋತ ಸ್ಪರ್ಧಿಯನ್ನು 'ಚಾಲೆಂಜರ್ಸ್' ತಂಡಕ್ಕೆ ಕಳುಹಿಸಲಾಯಿತು.
ದಿವ್ಯಾ ಉರುಡುಗ, ಮಂಜು ಪಾವಗಡ, ಅರವಿಂದ್ ಕೆಪಿ, ಶಮಂತ್ ಗೌಡ, ರಘು ಗೌಡ ಮತ್ತು ಪ್ರಿಯಾಂಕಾ ತಿಮ್ಮೇಶ್ ತಮ್ಮ ಎದುರಾಳಿಗಳನ್ನು ಸೋಲಿಸುವಲ್ಲಿ ವಿಫಲರಾದರು. ಆದ್ದರಿಂದ ಅವರು 'ಚಾಲೆಂಜರ್ಸ್' ತಂಡವನ್ನು ಸೇರಿದರು. ಮತ್ತೊಂದೆಡೆ, ದಿವ್ಯಾ ಸುರೇಶ್, ವೈಷ್ಣವಿ, ಶುಭಾ ಪೂಂಜ, ಪ್ರಶಾಂತ್ ಸಂಬರ್ಗಿ ವಿಜಯಶಾಲಿಗಳಾಗಿ ಹೊರಹೊಮ್ಮಿ, 'ಲೀಡರ್ಸ್' ತಂಡ ಸೇರಿದರು.
ಓದಿ: ದೇಶದ್ರೋಹಿ ಹೇಳಿಕೆ ಆರೋಪ ಕೇಸ್: 3ನೇ ದಿನವೂ ವಿಚಾರಣೆಗೆ ಹಾಜರಾದ ಆಯಿಷಾ