ಬಿಗ್‌ಬಾಸ್ ಸೀಸನ್ 7 ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ. ಈಗಾಗಲೇ ಕಲರ್ಸ್ ಕನ್ನಡ ಬಿಡುಗಡೆ ಮಾಡಿರುವ ಮೂರು ಪ್ರೋಮೋಗಳು ಪ್ರೇಕ್ಷಕರ ನಿದ್ದೆಗೆಡಿಸಿದೆ. ಈ ಬಾರಿ 17 ಮಂದಿ ಬಿಗ್‌ಬಾಸ್ ಮನೆ ಪ್ರವೇಶಿಸಲಿದ್ದಾರೆ. ಕಿಚ್ಚ ಸುದೀಪ್ ನಿರೂಪಣೆಯನ್ನು ಮತ್ತೊಮ್ಮೆ ನೋಡಲು ವೀಕ್ಷಕರು ಕಾದು ಕುಳಿತಿದ್ದಾರೆ.
ಕುರಿ ಪ್ರತಾಪ್, ಜೈ ಜಗದೀಶ್, ರಾಜಾ-ರಾಣಿ ಧಾರಾವಾಹಿಯ ಚುಕ್ಕಿ ಪಾತ್ರಧಾರಿ ಚಂದನ ಅನಂತಕೃಷ್ಣ, ಹಾಸ್ಯನಟ ರಾಜು ತಾಳಿಕೋಟೆ, ಕಿನ್ನರಿ ಧಾರಾವಾಹಿಯ ಭೂಮಿ ಶೆಟ್ಟಿ ಹಾಗೂ ಕಿರಣ್ ರಾಜ್, ನಾಗಿಣಿ ಧಾರಾವಾಹಿ ಖ್ಯಾತಿಯ ದೀಪಿಕಾ ದಾಸ್, ಗಾಯಕ-ನಟ ವಾಸುಕಿ ವೈಭವ್, ದುನಿಯಾ ರಶ್ಮಿ, ಪಂಕಜ್ ಎಸ್. ನಾರಾಯಣ್, ನಿರೂಪಕಿ ಚೈತ್ರಾ ವಾಸುದೇವನ್, ರಾಧಾ ರಮಣ ವಿಲನ್ ಸುಜಾತ, ರವಿ ಬೆಳಗೆರೆ ಹೆಸರು ದಟ್ಟವಾಗಿ ಕೇಳಿ ಬರುತ್ತಿದೆ. ಬಿಗ್‌ಬಾಸ್ ಕಂಟೆಸ್ಟಂಟ್ಗಳ ಬಗ್ಗೆ ವಾಹಿನಿ ಸೀಕ್ರೆಟ್ ಬಿಟ್ಟುಕೊಟ್ಟಿಲ್ಲ. ಕೊನೆ ಕ್ಷಣದವರೆಗೂ ಗೌಪ್ಯತೆ ಕಾಪಾಡಿಕೊಂಡು ಸರ್ಪ್ರೈಸ್ ನೀಡಲು ನಿರ್ಧರಿಸಿದೆ. ಈ ಸಲ ಒಟ್ಟು 17 ಸ್ಪರ್ಧಿಗಳು ಇರಲಿದ್ದಾರೆ ಎಂಬುದು ಮಾತ್ರ ಖಚಿತ. ಅಕ್ಟೋಬರ್ 13 ರಿಂದ ಅಂದರೆ ನಾಳೆಯಿಂದ ಕಲರ್ಸ್ ಕನ್ನಡದಲ್ಲಿ ಸಂಜೆ 6 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿವೆ. ಮುಂದಿನ ನೂರು ದಿನಗಳ ಕಾಲ ಪ್ರತಿದಿನ ರಾತ್ರಿ 8.30-9.30 ವರೆಗೆ ಬಿಗ್‌ಬಾಸ್ ಪ್ರಸಾರವಾಗಲಿದೆ.