ಒಂದು ವಾರದ ಕಾಲ ಶಾಂತವಾಗಿದ್ದ ಬಿಗ್ಬಾಸ್ ಮನೆಯಲ್ಲಿ ಇದೀಗ ಮೆಲ್ಲಗೆ ಗಲಾಟೆ ಆರಂಭವಾಗುತ್ತಿದೆ. ಅದಕ್ಕೆ ಕಾರಣ ಒಂದು ಸೇಬು. ಚೈತ್ರ ಕೊಟ್ಟೂರು, ಸುಜಾತಾ ಮತ್ತು ಚಂದನ್ ಆಚಾರ್ ನಡುವೆ ನಿನ್ನೆ ಸೇಬಿನ ವಿಚಾರವಾಗಿ ಮನೆಯಲ್ಲಿ ಜಗಳ ನಡೆದಿದೆ.

ಮೊನ್ನೆ ರಾತ್ರಿ ಚೈತ್ರ ಕೊಟ್ಟೂರು, ಕಿಚನ್ ಡಿಪಾರ್ಟ್ಮೆಂಟ್ನಲ್ಲಿ ಒಬ್ಬರಾದ ಚಂದನ್ ಆಚಾರ್ ಅವರ ಪರ್ಮಿಷನ್ ಪಡೆದು ಒಂದು ಸೇಬು ತಿಂದಿದ್ದಾರೆ. ಚೈತ್ರಾ ಒಬ್ಬರೇ ಸೇಬು ತಿನ್ನದೆ ಚಂದನ್ ಆಚಾರ್, ಪ್ರತಾಪ್, ರಾಜು ತಾಳಿಕೋಟೆ ಅವರಿಗೂ ಹಂಚಿದ್ದಾರೆ. ಅಡುಗೆ ಕೋಣೆಯ ಸಂಪೂರ್ಣ ಜವಾಬ್ದಾರಿ ಸುಜಾತಾ ಅವರದ್ದು. ಅಡುಗೆ ಕೋಣೆಯಿಂದ ಏನನ್ನಾದರೂ ತೆಗೆದುಕೊಳ್ಳಬೇಕೆಂದರೆ ಸುಜಾತಾ ಅವರ ಪರ್ಮಿಶನ್ ಬಹಳ ಮುಖ್ಯ. ಆದರೆ ಸುಜಾತಾ ಮಲಗಿದ್ದರಿಂದ ಚೈತ್ರಾ, ಚಂದನ್ ಅವರ ಬಳಿ ಕೇಳಿದ್ದಾರೆ.
- " class="align-text-top noRightClick twitterSection" data="">
ಆದರೆ ನಂತರ ಈ ವಿಚಾರವಾಗಿ ಸುಜಾತಾ ಗರಂ ಆಗಿದ್ದಾರೆ. 'ಅಡುಗೆ ಮನೆಯಿಂದ ರಾತ್ರಿ ಯಾರೋ ಸೇಬನ್ನು ಕದ್ದು ತಿಂದಿದ್ದಾರೆ. ಇನ್ನು ಮುಂದೆ ಯಾರೂ ಅಡುಗೆ ಮನೆಗೆ ಪರ್ಮಿಶನ್ ಇಲ್ಲದೇ ಬರಬಾರದು ಎಂದು ರೇಗಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಚೈತ್ರಾ, ನಾನೊಬ್ಬಳೇ ತಿಂದಿಲ್ಲ ಎಲ್ಲರಿಗೂ ಕೊಟ್ಟು ತಿಂದಿದ್ದೇನೆ ಎಂದರೂ ಸುಜಾತ ಮಾತ್ರ ಚೈತ್ರಾ ಅವರನ್ನೇ ಟಾರ್ಗೆಟ್ ಮಾಡಿದ್ದಾರೆ. ಚೈತ್ರಾ ಎಲ್ಲರೊಂದಿಗೆ ಬೆರೆಯಲು ಎಷ್ಟು ಪ್ರಯತ್ನ ಪಟ್ಟರೂ ಕೆಲವರು ಅವರೊಂದಿಗೆ ಅಷ್ಟಕಷ್ಟೇ. ಆದ್ದರಿಂದ ಮನೆಮಂದಿಯೆಲ್ಲಾ ಚೈತ್ರಾ ಮೇಲೆ ತಿರುಗಿಬಿದ್ದಿದ್ದಾರೆ. ಒಟ್ಟಾರೆ ಒಂದು ಸೇಬಿನಿಂದ ಮನೆ ಹೋಳಾಗಲು ಆರಂಭವಾಗಿದೆ.