ನಿಮಗೆ ಜಾಕ್ ಪಾಟ್ ಜರ್ನಿ ಬಗ್ಗೆ ತಿಳಿದಿದೆಯಾ...? ಕಿರುತೆರೆ ವೀಕ್ಷಕರು ಖಂಡಿತ ಇದರ ಬಗ್ಗೆ ತಿಳಿಯಲೇಬೇಕು. ಕಳೆದ 25 ವರ್ಷಗಳಿಂದ ನಾನಾ ನಮೂನೆಯ ಕಾರ್ಯಕ್ರಮಗಳ ಮೂಲಕ ಪ್ರೇಕ್ಷಕರ ಮನ ಸೆಳೆಯುತ್ತಿದ್ದ ಮತ್ತು ಇನ್ನೂ ಸೆಳೆಯುತ್ತಲೇ ಇರುವ ಉದಯ ವಾಹಿನಿಯಲ್ಲಿ ಆರಂಭವಾಗುತ್ತಿರುವ ಹೊಸ ಶೋ ಹೆಸರೇ ಜಾಕ್ಪಾಟ್ ಜರ್ನಿ.
- " class="align-text-top noRightClick twitterSection" data="
">
ಒಂದು ಕಾರು, ಅದರಲೊಬ್ಬರು ನಿರೂಪಕಿ, ಹಾಗೂ ನಿಮ್ಮ ನೆಚ್ಚಿನ ನಟ-ನಟಿಯರು ಇದ್ದರೆ ಹೇಗಿರುತ್ತದೆ ಊಹಿಸಿಕೊಳ್ಳಿ. ಊಹಿಸಿಕೊಳ್ಳುವುದನ್ನು ಬಿಡಿ, ಅದನ್ನೇ ನೀವು ನೋಡಬಹುದು ಕೂಡಾ. ಕಳೆದ ವಾರವಷ್ಟೇ ಆರಂಭವಾಗಿರುವ ಈ ಶೋನಲ್ಲಿ ಮೊದಲ ಎಪಿಸೋಡ್ನಲ್ಲಿ 'ಬೆಲ್ ಬಾಟಂ' ಖ್ಯಾತಿಯ ರಿಷಬ್ ಶೆಟ್ಟಿ ಕಾಣಿಸಿಕೊಂಡಿದ್ದರು. ಇನ್ನು ಈ ವಾರ ಭರಾಟೆ ಸಿನಿಮಾ ನಾಯಕಿ, ಚೆಂದುಳ್ಳಿ ಚೆಲುವೆ ಶ್ರೀಲೀಲಾ ಜಾಕ್ ಪಾಟ್ ಜರ್ನಿಯ ಮೂಲಕ ಕಿರುತೆರೆಗೆ ಬರಲಿದ್ದಾರೆ. ಈಗಾಗಲೇ ಚಿಣ್ಣರ ಚಿಲಿಪಿಲಿ, ತುತ್ತಾಮುತ್ತಾ ಸೀಸನ್ 2ನ್ನು ಅದ್ದೂರಿಯಾಗಿ ಆರಂಭಿಸಲಿದ್ದ ಉದಯಟಿವಿ, ಪ್ರೇಕ್ಷಕರ ಮನ ಸೆಳೆಯಲು ಜಾಕ್ ಪಾಟ್ ಜರ್ನಿ ಎಂಬ ಕಾರ್ಯಕ್ರಮವನ್ನು ಆರಂಭಿಸಿದೆ. ಮಾತ್ರವಲ್ಲ ಕಿರುತೆರೆ ವೀಕ್ಷಕರ ನೆಚ್ಚಿನ ನಟ ನಟಿಯರ ಇಷ್ಟಕಷ್ಟಗಳ ಬಗ್ಗೆ ಇಲ್ಲಿಯೇ ನೋಡಬಹುದು, ಜೊತೆಗೆ ಅವರಾಡುವ ಮಾಡುಗಳನ್ನು ಕೇಳಿ ಆನಂದಿಸಲೂಬಹುದು. ನಿರೂಪಕಿ ಹಾಗೂ ಕಾರ್ಯಕ್ರಮದ ಅತಿಥಿ ಕಾರಿನಲ್ಲಿ ಇರುತ್ತಾರೆ. ಕಾರಿನಲ್ಲೇ ಹಾಗೆ ನಗರವೆಲ್ಲಾ ಸುತ್ತುತ್ತಾ ನಿರೂಪಕಿ ಕೇಳಿದ ಪ್ರಶ್ನೆಗೆ ಸೆಲಬ್ರಿಟಿಗಳು ಉತ್ತರ ಕೊಡುತ್ತಾ ಹೊಗುತ್ತಾರೆ. ಈ ಕಾರ್ಯಕ್ರಮವನ್ನು ನೀವು ಭಾನುವಾರ ಬೆಳಗ್ಗೆ 11 ಗಂಟೆಗೆ ನೋಡಬಹುದು.