ETV Bharat / sitara

ನಾವು ಕಾಣಿಸದೇ ಹೋದಾಗ ಜನ ನಮ್ಮನ್ನ ಮರಿತಾರೆ: ಲಾಕ್​​​​​ಡೌನ್ ಕಹಿ ಅನುಭವ ಬಿಚ್ಚಿಟ್ಟ ಐಶ್ವರ್ಯಾ - Actresses ishwarya baspure

ಕಳೆದ ವರ್ಷ ಲಾಕ್​​​ಡೌನ್ ಘೋಷಿಸಿದಾಗ ಟಿಆರ್ ಪಿಯಲ್ಲಿ ನಮ್ಮ ಧಾರಾವಾಹಿ 'ಯಾರೇ ನೀ ಮೋಹಿನಿ' ಉತ್ತಮವಾಗಿತ್ತು. ಜನರು ಇಷ್ಟಪಟ್ಟಿದ್ದರು. ಧಾರಾವಾಹಿ ಇನ್ನೆರಡು ವರ್ಷ ಪ್ರಸಾರವಾಗಬೇಕಿತ್ತು. ಲಾಕ್​​ಡೌನ್ ಎಲ್ಲವನ್ನೂ ಬದಲಾಯಿಸಿತು ಎಂದು ನಟಿ ಐಶ್ವರ್ಯಾ ತಮ್ಮ ಕಹಿ ಅನುಭವ ಹಂಚಿಕೊಂಡರು.

Actresses ishwarya baspure
Actresses ishwarya baspure
author img

By

Published : May 4, 2021, 3:09 PM IST

ಲಾಕ್​​ಡೌನ್ ನಿಂದಾಗಿ ಮನೆಯವರೊಂದಿಗೆ ಕಾಲ ಕಳೆಯುತ್ತಿರುವ ಕಿರುತೆರೆ ನಟಿ ಐಶ್ವರ್ಯಾ ಬಸ್ಪುರೆ ಲಾಕ್ ಡೌನ್ ತನ್ನ ಜೀವನದ ಮೇಲೆ ಬೀರಿರುವ ಪರಿಣಾಮಗಳ ಬಗ್ಗೆ ಹಂಚಿಕೊಂಡಿದ್ದಾರೆ.

ಕಳೆದ ವರ್ಷದ ಲಾಕ್ ಡೌನ್ ವಿಭಿನ್ನ ಕಥೆ ಹೊಂದಿತ್ತು. ನಾನು ಸೈಕಾಲಜಿಯಲ್ಲಿ ಪದವಿ ಪಡೆದವಳು. ಕಳೆದ ವರ್ಷ ಲಾಕ್ ಡೌನ್ ಘೋಷಣೆಯಾದಾಗ ಆತಂಕಕೊಳಗಾಗಿದ್ದೆ. ನಮ್ಮ ಶೋನ ಬ್ಯಾಂಕಿಂಗ್ ಕೂಡಾ ಇರಲಿಲ್ಲ. ಜೊತೆಗೆ ನಮ್ಮ ಕೆಲಸದ ಕುರಿತು ಆತಂಕಕೊಳಗಾಗಿದ್ದವು.

ಯಾಕೆಂದರೆ ಕಳೆದ ವರ್ಷ ಲಾಕ್ ಡೌನ್ ಘೋಷಿಸಿದಾಗ ಟಿಆರ್​​​ಪಿಯಲ್ಲಿ ನಮ್ಮ ಧಾರಾವಾಹಿ 'ಯಾರೇ ನೀ ಮೋಹಿನಿ' ಉತ್ತಮವಾಗಿತ್ತು. ಜನರು ಇಷ್ಟಪಟ್ಟಿದ್ದರು. ಧಾರಾವಾಹಿ ಇನ್ನೆರಡು ವರ್ಷ ಪ್ರಸಾರವಾಗಬೇಕಿತ್ತು. ಲಾಕ್​​ಡೌನ್ ಎಲ್ಲವನ್ನೂ ಬದಲಾಯಿಸಿತು ಎಂದು ಐಶ್ವರ್ಯಾ ತಮ್ಮ ಕಹಿ ಅನುಭವ ಹಂಚಿಕೊಂಡರು.

ಅಲ್ಲದೇ, ಇನ್ನು ಹೊಸ ಶೋಗಳು ಆರಂಭವಾಗಿರಲಿಲ್ಲ. ಜನರ ಎದುರು ಕಾಣಿಸುತ್ತಿದ್ದರೆ ಹೇಗೋ ಬದುಕುತ್ತೀರಿ, ಕಾಣಿಸದೇ ಹೋದಾಗ ಜನರು ನಿಮ್ಮನ್ನು ಮರೆಯುತ್ತಾರೆ. ಇಂಡಸ್ಟ್ರಿಯಲ್ಲಿ ನಿಮ್ಮ ಹಾಜರಿ ಒಂದು ವಿಷಯವೇ ಸರಿ. ಕಳೆದ ವರ್ಷ ಲಾಕ್ ಡೌನ್ ಘೋಷಿಸಿದಾಗ ನಾನು ಖಿನ್ನತೆಗೆ ಒಳಗಾಗಿದ್ದೆ. ಭಾವನಾತ್ಮಕ ಏರಿಳಿತಗಳನ್ನು ಅನುಭವಿಸಿದೆ. ನಾನು ಮಧ್ಯರಾತ್ರಿ ಎದ್ದು ಅತ್ತ ದಿನಗಳೂ ಇವೆ ಎಂದು ಹಳೆಯ ದಿನಗಳನ್ನು ಐಶ್ವರ್ಯಾ ಬಸ್ಪುರೆ ನೆನಪಿಸಿಕೊಂಡರು.

ಈಗ ಸಾಗುತ್ತಿರುವ ಲಾಕ್​​ಡೌನ್ ಕುರಿತು ಮಾತನಾಡಿರುವ ಐಶ್ವರ್ಯಾ, ಏಪ್ರಿಲ್ ಕೊನೆಯಲ್ಲಿ ನಾನು ಹೊಸ ಪ್ರಾಜೆಕ್ಟ್ ನಲ್ಲಿ ಬರಬೇಕಾಗಿತ್ತು. ಲಾಕ್ ಡೌನ್ ಹೇರಲಾಗಿದೆ. ಕಳೆದ ವರ್ಷವನ್ನು ನೋಡಿದರೆ ಶೋಗಳು ಪ್ರಸಾರವಾಗಲೇ ಇಲ್ಲ. ಈ ವರ್ಷ ಹೀಗಾಗಲಾರದು ಎಂಬ ನಂಬಿದ್ದೇನೆ. ಈ ಪರಿಸ್ಥಿತಿಯಲ್ಲಿ ಈ ಲಾಕ್​​ಡೌನ್ ನಿಯಂತ್ರಣಕ್ಕೆ ಬರಲು ಅಗತ್ಯವಾಗಿದೆ. ಈ ವರ್ಷದ ಲಾಕ್ ಡೌನ್ ಉತ್ತಮ ನಿರ್ಧಾರ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.