ಕನ್ನಡ ಚಿತ್ರರಂಗದಲ್ಲಿ ಕೃಷ್ಣ ಲೀಲಾ, ಇಷ್ಟಕಾಮ್ಯ, ಗಣಪ, ರುಸ್ತುಂ ಸಿನಿಮಾಗಳ ಮೂಲಕ ತನ್ನದೇ ಐಡೆಂಟಿಟಿಯನ್ನು ಕ್ರಿಯೇಟ್ ಮಾಡಿಕೊಂಡಿರುವವರು ನಟಿ ಮಯೂರಿ ಕ್ಯಾತರಿ.
ಸಿನಿಮಾ ರಂಗದಲ್ಲಿ ಬ್ಯುಸಿಯಾಗಿದ್ದ ಮಯೂರಿ, ಬಹುಕಾಲದ ಗೆಳೆಯ ಅರುಣ್ ಜೊತೆ ಜೂನ್ 12ರಂದು ಬೆಂಗಳೂರಿನ ಜೆ.ಪಿ.ನಗರದ ತಿರುಮಲಗಿರಿ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಹಸೆಮಣೆ ಏರಿದ್ದರು.
ಕೆಲವು ತಿಂಗಳ ಹಿಂದೆ ಇವರು ಪ್ರೆಗ್ನೆನ್ಸಿ ಫೊಟೋ ಶೂಟ್ ಮಾಡಿಸಿದ್ದರು.
ಮಗನ ಕೈ ಹಿಡಿದಿರುವ ಫೊಟೋ ಹಾಕಿರುವ ಮಯೂರಿ, ನಮಗೆ ಗಂಡು ಮಗ ಆಗಿದೆ. ಮದುವೆಯ ಮತ್ತೊಂದು ಜರ್ನಿ ಶುರುವಾಗಿದೆ. ಆದರೆ ಅದನ್ನು ಹೇಳೋದಕ್ಕೆ ಪದಗಳೇ ಇಲ್ಲ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದಿದ್ದಾರೆ.