ETV Bharat / sitara

ಕೊಡಗಿನ ಸಾಂಪ್ರದಾಯಿಕ ಉಡುಗೆಯಲ್ಲಿ ಅನಿರುದ್ಧ್, ಮೇಘನಾ ಶೆಟ್ಟಿ - Actor Anirudh n Kodagu traditional dress

ಜೊತೆಜೊತೆಯಲಿ ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟಿರುವ ವಿಷ್ಣುವರ್ಧನ್ ಅಳಿಯ ಅನಿರುದ್ಧ್ ಇಂದು ಆರ್ಯವರ್ಧನ್ ಆಗಿ ಕರ್ನಾಟಕದಾದ್ಯಂತ ಮನೆ ಮಾತಾಗಿದ್ದಾರೆ‌. ಇಷ್ಟು ದಿನ ನಟನೆಯ ಮೂಲಕ ಕಿರುತೆರೆ ಲೋಕದಲ್ಲಿ ಹೊಸ ಹವಾ ಸೃಷ್ಟಿ ಮಾಡಿರುವ ಆರ್ಯ ಇದೀಗ ಹೊಸ ಲುಕ್​ ಮೂಲಕ ಸುದ್ದಿಯಲ್ಲಿದ್ದಾರೆ.

Actor Anirudh and Meghna Shetty along with in Kodagu traditional dress
ಕೊಡಗಿನ ಸಂಪ್ರದಾಯಿಕ ಉಡುಗೆಯಲ್ಲಿ ನಟ ಅನಿರುದ್ಧ್ ಹಾಗೂ ಮೇಘನಾ ಶೆಟ್ಟಿ
author img

By

Published : Aug 5, 2020, 11:39 PM IST

ಅನಿರುದ್ಧ್ ಅವರು ಕೊಡಗಿನ ಕುವರನ ಧಿರಿಸಿನಲ್ಲಿ ಮಿಂಚುತ್ತಿದ್ದಾರೆ. ಅಂದು ಸಾಹಸಸಿಂಹ ವಿಷ್ಣುವರ್ಧನ್ ಕೊಡಗಿನ ಕುವರನ ಉಡುಗೆ ಧರಿಸಿ ಸಿನಿರಂಗದಲ್ಲಿ ಮೆರೆದಂತೆ ಇಂದು ಅವರ ಅಳಿಯ ಅನಿರುದ್ಧ್ ಕೂಡಾ ಅದೇ ಧಿರಿಸಿನಲ್ಲಿ ಕಂಗೊಳಿಸುತ್ತಿದ್ದಾರೆ.

Actor Anirudh and Meghna Shetty along with in Kodagu traditional dress
ನಟ ಅನಿರುದ್ಧ್ ಹಾಗೂ ಮೇಘನಾ ಶೆಟ್ಟಿ

ವಿಷ್ಣುವರ್ಧನ್ ಅವರು ಮುತ್ತಿನ ಹಾರ ಸಿನಿಮಾದಲ್ಲಿ ಮಡಿಕೇರಿ ಸಿಪಾಯಿಯ ಪಾತ್ರ ಮಾಡಿದ್ದರು. ಆಗ ಮಡಿಕೇರಿ ಕುವರನ ರೀತಿ ಪೋಷಾಕು ಧರಿಸಿದ್ದರು. ಇದೀಗ ಜೊತೆಜೊತೆಯಲಿ ಧಾರಾವಾಹಿ ತಂಡ ಈ ದೃಶ್ಯವನ್ನೇ ಮರುಸೃಷ್ಟಿ ಮಾಡುವ ಪ್ರಯತ್ನ ಮಾಡಿದೆ ಮತ್ತು ಅದರಲ್ಲಿ ಯಶಸ್ಸನ್ನು ಸಹ ಪಡೆದಿದ್ದಾರೆ.

ಆರ್ಯವರ್ಧನ್ ಅವರ ಹೊಸ ಅವತಾರವನ್ನು ಕಿರುತೆರೆ ಪ್ರಿಯರು ಮೆಚ್ಚಿಕೊಂಡಾಡಿದ್ದಾರೆ. ಎಥ್ನಿಕ್ ಡೇ ಸಲುವಾಗಿ ಹರ್ಷವರ್ಧನ್ ಆಫೀಸಿನಲ್ಲಿದ್ದವರಿಗೆ ಸಾಂಪ್ರದಾಯಿಕ ಉಡುಗೆ ತೊಟ್ಟು ಬರುವಂತೆ ಹೇಳಿದ್ದರು. ಅದರಂತೆ ಆರ್ಯವರ್ಧನ್ ಕೊಡಗಿನ ಕುವರನಾಗಿ ಮಿಂಚಿದರೆ ಅನು ಕೊಡಗಿನ ಹುಡುಗಿಯ ಪೋಷಾಕು ಧರಿಸಿದ್ದರು. ಉಳಿದಂತೆ ಮೀರಾ, ಝೇಂಡೆ ಎಲ್ಲರೂ ಸಾಂಪ್ರದಾಯಿಕ ಧಿರಿಸಿನಲ್ಲಿ ಕಂಗೊಳಿಸುತ್ತಿದ್ದರು‌.

ಇದರ ಜೊತೆಗೆ ಕೊಡಗಿನ ಕುವರನ ವೇಷ ಧರಿಸಿದ್ದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅನಿರುದ್ಧ್ ಹಂಚಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.