ಬೆಂಗಳೂರು: ಖ್ಯಾತ ನಿರ್ದೇಶಕ ಕಾಶಿನಾಥ್ ಪುತ್ರ ಅಭಿಮನ್ಯು ನಾಯಕನಾಗಿ ನಟಿಸಿರುವ, ಕಿರಣ್ ಸೂರ್ಯ ನಿರ್ದೇಶನದ 'ಎಲ್ಲಿಗೆ ಪಯಣ ಯಾವುದೋ ದಾರಿ' ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ.
ಬೆಂಗಳೂರು, ಮಡಿಕೇರಿ, ಚಿಕ್ಕಮಗಳೂರು, ದೊಡ್ಡಬಳ್ಳಾಪುರ ಮುಂತಾದ ಕಡೆ 108 ದಿನಗಳ ಕಾಲ ಚಿತ್ರೀಕರಣ ನಡೆದಿದೆ ಎಂದು ಚಿತ್ರತಂಡ ಹೇಳಿದೆ. ಥ್ರಿಲ್ಲರ್ ಕಥಾ ಹಂದರ ಹೊಂದಿರುವ ಈ ಚಿತ್ರಕ್ಕೆ ಕಿರಣ್ ಸೂರ್ಯ ಕಥೆ, ಚಿತ್ರಕಥೆ ಹಾಗು ಸಂಭಾಷಣೆ ಬರೆದಿದ್ದಾರೆ. ಸುದರ್ಶನ ಆರ್ಟ್ಸ್ ಲಾಂಛನದಲ್ಲಿ ಜತಿನ್.ಜಿ ಪಟೇಲ್ ಹಾಗು ಚೇತನ್ ಕೃಷ್ಣ ನಿರ್ಮಾಣ ಮಾಡುತ್ತಿದ್ದಾರೆ.
ಇದನ್ನೂ ಓದಿ: ಚಿತ್ರದ ಶೂಟಿಂಗ್ಗಾಗಿ ಲೊಕೇಶನ್ ಹುಡುಕಲು ಬುಲೆಟ್ ಏರಿ ಮಲೆನಾಡಿಗೆ ಹೊರಟ ಕಾಶಿನಾಥ್ ಪುತ್ರ
ಚಿತ್ರದಲ್ಲಿ ಎರಡು ಹಾಡುಗಳಿದ್ದು, ಅನಂತ ಕಾಮತ್ ಸಂಗೀತ ನೀಡುತ್ತಿದ್ದಾರೆ. ಒಂದು ಹಾಡನ್ನು ಕಿಚ್ಚ ಸುದೀಪ ಹಾಡಿದ್ದಾರೆ. ಆ ಹಾಡು ಸದ್ಯದಲ್ಲೇ ಬಿಡುಗಡೆಯಾಗಲಿದೆ. ಛಾಯಾಗ್ರಾಹಕರಾಗಿ ಸತ್ಯ, ಸಂಕಲನಕಾರನಾಗಿ ಗಣೇಶ್ ನಿರ್ಚಲ್ ಹಾಗು ಕಲಾ ನಿರ್ದೇಶನ ವಿಶ್ವ ಅವರ ಬೆಂಬಲ ಈ ಚಿತ್ರಕ್ಕಿದೆ. ನಾಯಕಿಯರಾಗಿ ಸ್ಫೂರ್ತಿ ಉಡಿಮನೆ ಹಾಗು ವಿಜಯಶ್ರೀ ಕಲಬುರ್ಗಿ ನಟಿಸಿದ್ದಾರೆ. ಬಲ ರಾಜವಾಡಿ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: ಹೆಬ್ಬಾವಿನ ದಾಳಿಯಿಂದ ಸ್ವಲ್ಪದರಲ್ಲೇ ಪಾರಾದ ನಾಯಕಿ ಸ್ಫೂರ್ತಿ ಉಡಿಮನೆ