ಕೊಡಗಿನ ಕುವರ ತಾರಕ್ ಪೊನ್ನಪ್ಪ ಅವರು ರಾಧಿಕಾ ಎಂಬ ಹುಡುಗಿಯ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೊಡಗಿನ ಸಂಪ್ರದಾಯದಂತೆ ಇಂದು ವೈವಾಹಿಕ ಜೀವನಕ್ಕೆ ಮುನ್ನುಡಿ ಬರೆದಿದ್ದಾರೆ. ರಾಜಾ ರಾಣಿ ಧಾರಾವಾಹಿಯ ಮೂಲಕ ಕಿರುತೆರೆ ಪ್ರಿಯರಿಗೆ ಮನರಂಜನೆಯ ಮಹಾಪೂರವನ್ನೇ ಉಣಬಡಿಸಿದ ತಾರಕ್ ಪೊನ್ನಪ್ಪ ಬೆಳ್ಳಿತೆರೆಯಲ್ಲೂ ತಮ್ಮ ನಟನಾ ಕಂಪನ್ನು ಪಸರಿಸಿದ್ದರು. ಕೆಜಿಎಫ್ 1 ರಲ್ಲಿ ನಟಿಸಿರುವ ಇವರು ಅಧ್ಯಕ್ಷ ಇನ್ ಅಮೇರಿಕಾ, 6 ಟು 6 ಸಿನಿಮಾದಲ್ಲಿ ಕೂಡ ಅಭಿನಯಿಸಿದ್ದಾರೆ.
ಇನ್ನು ಇದೇ ದಿನದಂದು ದೇವಿ, ಮಹಾದೇವಿ ಧಾರಾವಾಹಿಗಳಲ್ಲಿ ನಟಿಸಿರುವ ಸೂರ್ಯ, ಶುಭಶ್ರೀ ಅವರನ್ನು ವರಿಸಿದ್ದಾರೆ. ಇಷ್ಟು ದಿನ ಪ್ರೇಮಿಗಳಾಗಿದ್ದ ಸೂರ್ಯ ಮತ್ತು ಶುಭಶ್ರೀ ಇಂದು ಸತಿ ಪತಿಗಳಾಗಿದ್ದಾರೆ. ಇವರಿಬ್ಬರ ಮನೆ ಸಮೀಪದಲ್ಲಿದ್ದು ಇವರಿಬ್ಬರೂ ಒಬ್ಬರನ್ನೊಬ್ಬರು ಇಷ್ಟಪಟ್ಟಿದ್ದರಂತೆ. ಇದೀಗ ಈ ಜೋಡಿಯು ಕೂಡಾ ವೈವಾಹಿಕ ಜೀವನಕ್ಕೆ ಕಾಲಿರಿಸಿದೆ.
ಕಿರುತೆರೆಯಲ್ಲಿ ಮೋಡಿ ಮಾಡಿದ ಸೂರ್ಯ, ರತ್ನಜ ನಿರ್ದೇಶನದ 'ಪ್ರೀತಿಯಲ್ಲಿ ಸಹಜ' ಸಿನಿಮಾದಲ್ಲಿ ನಟಿಸಿದ್ದಾರೆ. ಇದಲ್ಲದೇ ಇವರ ಕಟ್ಟುಕಥೆ ಸಿನಿಮಾ ಕೂಡ ಇತ್ತೀಚೆಗಷ್ಟೇ ಬಿಡುಗಡೆಯಾಗಿತ್ತು.