ETV Bharat / sitara

ಪುನೀತ್‌ ರಾಜ್‌ಕುಮಾರ್‌ ಸಾವಿಗೆ ಜಿಮ್‌, ವರ್ಕೌಟ್‌ ಕಾರಣ ಅಲ್ಲ: ನಟ ಪ್ರೇಮ್‌

author img

By

Published : Nov 6, 2021, 6:18 PM IST

Updated : Nov 6, 2021, 6:34 PM IST

ಅಪ್ಪು ಸಾವಿಗೆ ಜಿಮ್‌ ಕಾರಣ ಎಂದು ಸಾಮಾಜಿಕ ಮಾಧ್ಯಮದಲ್ಲಿ ಸುದ್ದಿ ಹಬ್ಬಿಸಲಾಗುತ್ತಿದೆ. ಅವರ ಸಾವಿಗೆ ಜಿಮ್‌, ವರ್ಕೌಟ್‌ ಕಾರಣ ಅಲ್ಲ ಎಂದು ನಟ ಪ್ರೇಮ್‌ ಮಂಡ್ಯದಲ್ಲಿ ಹೇಳಿದರು.

Gym, Workout not a reason for Puneeth Rajkumar's death: Actor Prem
ಪುನೀತ್‌ ರಾಜ್‌ಕುಮಾರ್‌ ಸಾವಿಗೆ ಜಿಮ್‌, ವರ್ಕೌಟ್‌ ಕಾರಣ ಅಲ್ಲ: ನಟ ಪ್ರೇಮ್‌

ಮಂಡ್ಯ: ಯುವರತ್ನ ಪುನೀತ್‌ ರಾಜ್‌ಕುಮಾರ್‌ ಅವರ ಸಾವಿಗೆ ಜಿಮ್‌, ವರ್ಕೌಟ್‌ ಕಾರಣ ಅಲ್ಲ ಎಂದು ನಟ ಪ್ರೇಮ್‌ ಹೇಳಿದ್ದಾರೆ.

ಪುನೀತ್‌ ಅವರ ನಿಧನಕ್ಕೆ ಸಂತಾಪ ಸೂಚಿಸಿ ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಪ್ಪು ಸಾವಿಗೆ ಜಿಮ್‌ ಕಾರಣ ಎಂದು ಸಾಮಾಜಿಕ ಮಾಧ್ಯಮದಲ್ಲಿ ಸುದ್ದಿ ಹಬ್ಬಿಸಲಾಗುತ್ತಿದೆ. ಇದರಿಂದ ಜಿಮ್‌ನಲ್ಲಿ ವರ್ಕೌಟ್ ಮಾಡುವವರಿಗೆ ಆತಂಕ ಶುರುವಾಗಿದೆ. ಬಹುತೇಕ ನಗರಗಳಲ್ಲಿ ಜಿಮ್‌ಗೆ ಶೇ.90ರಷ್ಟು ದಾಖಲಾತಿ ಕಡಿಮೆಯಾಗಿದೆ. ಈ ರೀತಿಯಾಗಿ ಜಿಮ್ ಬಗ್ಗೆ ತಪ್ಪು ಅಭಿಪ್ರಾಯ ಸರಿಯಲ್ಲ ಎಂದರು.

ಅಪ್ಪು ಅವರು ತೀರಿಕೊಂಡ ಮೇಲೆ ನನಗೆ ಹಲವರಿಂದ ಕರೆ ಬಂದಿತ್ತು. ಜಿಮ್ ಮಾಡುವುದನ್ನು ಬಿಟ್ಟು ಬಿಡಿ ಎನ್ನುತ್ತಿದ್ದರು. ಜಿಮ್‌ನಿಂದಲೇ ಅಪ್ಪು ನಿಧನರಾದರು ಎನ್ನುವುದು ತಪ್ಪು ಕಲ್ಪನೆ. ನನಗೆ ಹಾಗೂ ನನ್ನ ಕುಟುಂಬಕ್ಕೆ ಆತ್ಮೀಯವಾದ ಗೆಳೆಯ ಅಪ್ಪು. ನನ್ನ ಮಕ್ಕಳ ಹುಟ್ಟುಹಬ್ಬದ ದಿನ ನೆನಪಿಟ್ಟಿಕೊಂಡು ಫೋನ್ ಮಾಡಿದ್ದರು. ಬಹಳ ಆತ್ಮೀಯ ಗೆಳೆಯನ ಸಾವಿನಿಂದ ಚಿತ್ರರಂಗಕ್ಕೆ ತುಂಬಾಲಾರದ ನಷ್ಟವಾಗಿದೆ. ಕನ್ನಡ ಚಿತ್ರರಂಗದ ದೊಡ್ಡ ಆಸ್ತಿಯನ್ನು ನಾವು ಕಳೆದಕೊಂಡಿದ್ದೇವೆಂದು ಭಾವುಕರಾದರು.

Last Updated : Nov 6, 2021, 6:34 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.