ETV Bharat / sitara

ಸಿನಿರಸಿಕರಿಗೆ 'ಪೈಲ್ವಾನ್​' ಪಂಚಾಮೃತ; ಅಭಿನಯ ಚಕ್ರವರ್ತಿ ನಟನೆಗೆ ಫ್ಯಾನ್ಸ್ ಫಿದಾ - ಕಬೀರ್ ದುಹಾನ್ ಸಿಂಗ್

'ಪೈಲ್ವಾನ್​'
author img

By

Published : Sep 12, 2019, 5:19 PM IST

ಬಹುನಿರೀಕ್ಷಿತ, ಬಹುಕೋಟಿ ವೆಚ್ಚದ ಕಿಚ್ಚ ಸುದೀಪ್ ಅವರ ಪ್ಯಾನ್ ಇಂಡಿಯಾ ಸಿನಿಮಾ 'ಪೈಲ್ವಾನ್' ಇಂದು ಬಿಡುಗಡೆಯಾಗಿದೆ. ಈ ಸಿನಿಮಾ ಅಭಿನಯ ಚಕ್ರವರ್ತಿ ಅಭಿಮಾನಿಗಳ ಪಾಲಿಗೆ ಹಬ್ಬದೂಟ ಎಂದರೆ ತಪ್ಪಾಗುವುದಿಲ್ಲ. ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಸಾಹಸ, ಸೆಂಟಿಮೆಂಟ್, ಕಾಮಿಡಿ, ಪ್ರೀತಿ, ತ್ಯಾಗ....ಹೀಗೆ ಒಂದು ಪಕ್ಕಾ ಕಮರ್ಷಿಯಲ್ ಸಿನಿಮಾಕ್ಕೆ ಬೇಕಾದ ಎಲ್ಲಾ ಸರಕನ್ನು ನಿರ್ದೇಶಕ ಎಸ್​.ಕೃಷ್ಣ 'ಪೈಲ್ವಾನ್' ಚಿತ್ರದಲ್ಲಿ ಒದಗಿಸಿದ್ದಾರೆ. ಪ್ರತಿ ದೃಶ್ಯವೂ ಶ್ರೀಮಂತವಾಗಿ ಕಾಣಲು ಅದಕ್ಕೆ ತಕ್ಕಂತೆ ತಾಂತ್ರಿಕ ಸ್ಪರ್ಶ ನೀಡಲಾಗಿದೆ. ಯಾವುದೇ ಕಲಾವಿದನಾಗಲೀ ಶ್ರದ್ಧೆಯನ್ನು ಧಾರೆ ಎರೆಯಬೇಕು ಎಂಬುದಕ್ಕೂ ಕಿಚ್ಚ ಸುದೀಪ್ ಉದಾಹರಣೆಯಾಗಿ ನಿಲ್ಲುತ್ತಾರೆ. ಸುದೀಪ್ ಸಿನಿಮಾ ಕರಿಯರ್​​​​​​ನಲ್ಲಿ ಅತ್ಯಂತ ಶ್ರಮ ವಹಿಸಿದ ಚಿತ್ರ ಇದು ಎಂಬುದನ್ನು ಸಾಬೀತುಪಡಿಸಿದ್ದಾರೆ.

ಅನಾಥ ಹುಡುಗ ಕೃಷ್ಣ (ಸುದೀಪ್)ನ ಕಿಚ್ಚನ್ನು ನೋಡಿದ ಗಜೇಂದ್ರಗಢ್ ಎಂಬ ಊರಿನ ಸರ್ಕಾರ್ (ಸುನಿಲ್ ಶೆಟ್ಟಿ) ಆ ಹುಡುಗನನ್ನು ತನ್ನ ಗರಡಿಯಲ್ಲಿ ಬೆಳೆಸುತ್ತಾನೆ. ಚೂಟಿ ಹುಡುಗ ಕೃಷ್ಣ ತನ್ನ ಜೀವನವನ್ನು ಸರ್ಕಾರ್ ಸೇವೆಗೆ ಮುಡುಪಾಗಿಡುತ್ತಾನೆ. ಕೃಷ್ಣ ರಾಷ್ಟ್ರಮಟ್ಟದ ಕುಸ್ತಿಯಲ್ಲಿ ಹೆಸರು ಮಾಡಬೇಕು ಎನ್ನುವುದು ಸರ್ಕಾರ್ ಮಹದಾಸೆ. ಆದರೆ ಇದಕ್ಕೆ ಕೃಷ್ಣನಿಗೆ ಪ್ರೇಯಸಿ ರುಕ್ಮಿಣಿ (ಆಕಾಂಕ್ಷ ಸಿಂಗ್), ರಾಣಾ ( ಸುಶಾಂತ್ ಸಿಂಗ್) ಇಬ್ಬರೂ ಅಡ್ಡಗಾಲಾಗುತ್ತಾರೆ. ರುಕ್ಮಿಣಿಯನ್ನು ಕೃಷ್ಣ ವಿವಾಹವಾಗುವುದು ಸರ್ಕಾರ್​​ಗೆ ಇಷ್ಟವಿರುವುದಿಲ್ಲ. ಈ ಕಾರಣಕ್ಕೆ ಕೃಷ್ಣ ಊರನ್ನೇ ಬಿಡಬೇಕಾದ ಪರಿಸ್ಥಿತಿ ಬಂದೊದಗುತ್ತದೆ. ಸರ್ಕಾರ್ ಕಲಿಸಿದ ವಿದ್ಯೆಯನ್ನು ನಾನು ಎಂದಿಗೂ ಉಪಯೋಗಿಸುವುದಿಲ್ಲ ಎಂದು ಕೃಷ್ಣ ಭಾಷೆ ನೀಡಿ ಅಲ್ಲಿಂದ ಹೊರಡುತ್ತಾನೆ. ಅಲ್ಲಿಂದ ಮುಂದೆ ಸಿನಿಮಾ ಒಂದು ತಿರುವು ಪಡೆದುಕೊಳ್ಳುತ್ತದೆ.

ಇದು ಕಿಚ್ಚ ಸುದೀಪ್ ಅವರ ಇಮೇಜ್​ಗೆ ಬಹಳ ಹೊಂದಿಕೊಳ್ಳುವ ಸಿನಿಮಾ. ಸಾಹಸ, ಸೆಂಟಿಮೆಂಟ್, ಕಾಮಿಡಿ ಸನ್ನಿವೇಶ ಪ್ರತಿಯೊಂದರಲ್ಲೂ ಸುದೀಪ್ ಬಹಳ ಚೆನ್ನಾಗಿ ಅಭಿನಯಿದ್ದಾರೆ. ಸುನಿಲ್ ಶೆಟ್ಟಿ ಅಭಿನಯ ಈ ಚಿತ್ರದಲ್ಲಿ ತಣ್ಣನೆ ಗಾಳಿಯಂತೆ ಹಾದು ಹೋಗುತ್ತದೆ. ನಾಯಕಿ ಆಕಾಂಕ್ಷ ಸಿಂಗ್ ಸುದೀಪ್ ಎತ್ತರಕ್ಕೆ ಮ್ಯಾಚ್ ಆಗುತ್ತಾರೆ ಮತ್ತು ಕೊಟ್ಟ ಪಾತ್ರವನ್ನು ಸಲೀಸಾಗಿ ನಿಭಾಯಿಸಿದ್ದಾರೆ. ಅಪ್ಪಣ್ಣ ಕಾಮಿಡಿ ಇಷ್ಟ ಆಗುತ್ತದೆ. ಕಬೀರ್ ದುಹಾನ್ ಸಿಂಗ್ ಹಾಗೂ ಸುಶಾಂತ್ ಸಿಂಗ್ ಗುಡುಗು, ಶರತ್ ಲೋಹಿತಾಶ್ವ ಹಾಗೂ ಅವಿನಾಶ್ ಅವರ ಗಾಂಭೀರ್ಯದ ನಟನೆ ಕೂಡಾ ಮೆಚ್ಚುಗೆಯಾಗುತ್ತದೆ.

ಅರ್ಜುನ್ ಜನ್ಯ ಸಂಗೀತ ನಿರ್ದೇಶನದಲ್ಲಿಎರಡು ಹಾಡುಗಳನ್ನು ಮತ್ತೆ ಮತ್ತೆ ಕೇಳಬಹುದು. ಸಿನಿಮಾ ಹಿನ್ನೆಲೆ ಸಂಗೀತ ಜೋಡಣೆ ಸಮೃದ್ಧವಾಗಿದೆ. ತಾಂತ್ರಿಕವರ್ಗ ಚಪ್ಪಾಳೆ ಗಿಟ್ಟಿಸುವಂತ ದೃಶ್ಯಗಳನ್ನು ವೈಭವೀಕರಿಸಿದೆ. ಚಿತ್ರದ ಅವಧಿಯನ್ನು ಕಡಿಮೆ ಮಾಡಬಹುದಿತ್ತು ಎನ್ನಿಸುತ್ತದೆ. ಹೀಗೆ 'ಪೈಲ್ವಾನ್' ಸಿನಿರಸಿಕರಿಗೆ ಪಂಚಾಮೃತ ಎಂದರೆ ತಪ್ಪಿಲ್ಲ.

ಪೈಲ್ವಾನ್ ಚಿತ್ರ ವಿಮರ್ಶೆ

ಪೈಲ್ವಾನ್ ಚಿತ್ರ ರಸಿಕರಿಗೆ ಪಂಚಾಮೃತ!

ಅವದಿ – 165 ನಿಮಿಷ 57 ಸೆಕಂಡ್, ಕ್ಯಾಟಗರಿ – ಸಾಹಸ, ರೇಟಿಂಗ್ – 4/5

ಚಿತ್ರ – ಪೈಲ್ವಾನ್, ನಿರ್ಮಾಪಕರು – ಸ್ವಪ್ನ ಕೃಷ್ಣ, ನಿರ್ದೇಶನ – ಎಸ್ ಕೃಷ್ಣ, ಸಂಗೀತ – ಅರ್ಜುನ್ ಜನ್ಯ, ಛಾಯಾಗ್ರಹಣ – ಕರುಣಾಕರ್, ತಾರಾಗಣ – ಕಿಚ್ಚ ಸುದೀಪ್, ಆಕಾಂಕ್ಷ ಸಿಂಗ್, ಸುನಿಲ್ ಶೆಟ್ಟಿ, ಕಬೀರ್ ದುಹಾನ್ ಸಿಂಗ್, ಸುಶಾಂತ್ ಸಿಂಗ್,ಅವಿನಾಶ್, ಶರತ್ ಲೋಹಿತಾಶ್ವ, ಅಪ್ಪಣ್ಣ, ಕೃಷ್ಣ ನಾಡಿಗ್, ರಾಜೇಂದ್ರ ಕಾರಂತ್ ಹಾಗೂ ಇತರರು.

ಬಹು ನಿರೀಕ್ಷಿತ, ಬಹು ಕೋಟಿ ವೆಚ್ಚದ ಕಿಚ್ಚ ಸುದೀಪ್ ಅವರ ಬಹು ಭಾಷಾ ಚಿತ್ರ ಬಿಡುಗಡೆ ಆಗಿದೆ. ಶ್ರೀ ಅನಂತ ಪದ್ಮನಾಭ ಹಬ್ಬದಂದು ಬಿಡುಗಡೆ ಆಗಿರುವ ಈ ಸಿನಿಮಾ ಅಭಿನಯ ಚಕ್ರವರ್ತಿ ಅಭಿಮಾನಿಗಳಿಗೆ ಪಾಲಿಗೆ ಹಬ್ಬದ ಊಟವೆ ಸರಿ. ಇದರ ಜೊತೆಗೆ ಪಂಚಾಮೃತ! ಅರ್ಥಾತ್ – ಆಗಾಗ್ಗೆ ಪಂಚ್ ನೀಡುವ ನಾಯಕ ಸಾಹಸ ಪ್ರಿಯರಿಗೆ ಅಮೃತ ಸವಿದ ಹಾಗೆ.

ಪೈಲ್ವಾನ್ ಪಕ್ವವಾದ ಮಿಶ್ರಣ. ಸಾಹಸ, ಸೆಂಟಿಮೆಂಟ್, ಕಾಮಿಡಿ, ಪ್ರೀತಿ, ತ್ಯಾಗ, ಮಿಡಿಯುವ ಹೃದಯಗಳು....ಹೀಗೆ ಒಂದು ಪಕ್ಕ ಕಮರ್ಷಿಯಲ್ ಸಿನಿಮಾಕ್ಕೆ ಬೇಕಾದ ಎಲ್ಲ ಸರಕನ್ನು ನಿರ್ದೇಶನ ಎಸ್ ಕೃಷ್ಣ ಒದಗಿಸಿದ್ದಾರೆ. ಪ್ರತಿ ದೃಷ್ಯವೂ ಶ್ರೀಮಂತವಾಗಿ ಕಾಣುವುದಕ್ಕೆ, ತಾಂತ್ರಿಕ ಸೌಲಭ್ಯವನ್ನು ನೀಡಿದ್ದಾರೆ. ಹಾಗೆ ನೋಡಿದರೆ ಈ ಚಿತ್ರದಲ್ಲಿ ಕಥಾ ನಾಯಕ ಬಡ ಮಕ್ಕಳ ಬಗ್ಗೆ ಪೊರೆಯುವ ಮನಸ್ಸು ಹಾಗೂ ಅದಕ್ಕಾಗಿ ತೊಡುವ ಪಣ ಅಂತಹ ಹೊಸದೆನಲ್ಲ. ಆದರೆ ಕುಸ್ತಿ ಪಟು ಬಾಕ್ಸಿಂಗ್ ಪಟು ಆಗಿ ಮಾರ್ಪಾಟು ಆಗಿ ಕಿಚ್ಚ ಸುದೀಪ್ ಅವರ ಜೀವಮಾನದ ಅತ್ಯಂತ ಶ್ರಮ ವಹಿಸಿದ ಚಿತ್ರ ಇದು ಎಂದು ತೋರ್ಪಡಿಸಿದ್ದಾರೆ. ಕಲಾವಿದರು ತಮ್ಮ ಕಥಾ ವಸ್ತುವನ್ನು ಅರಗಿಸಿಕೊಂಡು ಅಭಿನಯಿಸಬೇಕು, ಶ್ರದ್ದೆಯನ್ನು ದಾರೆ ಎರೆಯಬೇಕು ಎಂಬುದಕ್ಕೂ ಸಹ ಕಿಚ್ಚ ಸುದೀಪ್ ಉದಾಹರಣೆ ಆಗಿ ನಿಲ್ಲುತ್ತಾರೆ.

ಅವನು ಅನಾಥ ಹುಡುಗ ಕೃಷ್ಣ. ಜೀವನದಲ್ಲಿ ಹಸಿವಿನಿಂದ ಇರುವವನು. ಈ ಹುಡುಗನ ಕಿಚ್ಚನ್ನು ಕಂಡು ಗಜೇಂದ್ರಗಡ್ ಎಂಬ ಊರಿನ ಸರ್ಕಾರ್ (ಸುನಿಲ್ ಶೆಟ್ಟಿ) ತನ್ನ ಗರಡಿಯಲ್ಲಿ ಬೆಳಸುತ್ತಾನೆ. ಚೂಟಿ ಹುಡುಗ ಪ್ರೀತಿಯಿಂದ ಬೆಳದವನು ತನ್ನ ಜೀವನವನ್ನೇ ಮುಡುಪಾಗಿ ಸರ್ಕಾರ್ ಸೇವೆಯಲ್ಲಿ ತೊಡಗಿಸುತ್ತಾನೆ. ಆದರೆ ಸರ್ಕಾರ್ ಆಸೆ ಕೃಷ್ಣ (ಸುದೀಪ್) ರಾಷ್ಟ್ರ ಮಟ್ಟದ ಕುಸ್ತಿ ಪ್ರಶಸ್ತಿ ಪಡೆಯಬೇಕು ಎಂದು. ಆದರೆ ಇದಕ್ಕೆ ಎರಡು ವಿಚಾರಗಳು ಕೃಷ್ಣನಿಗೆ ಅಡ್ಡಿ ಆಗುತ್ತದೆ. ಅದೇ ಪ್ರೀತಿ ಹಾಗೂ ಮತ್ತೊಬ್ಬ ಎದುರಾಳಿ ರಾಣಾ (ಸುಶಾಂತ್ ಸಿಂಗ್). ಕೃಷ್ಣ ಪ್ರೇಮಿಸಿ ರುಕ್ಮಿಣಿ (ಆಕಾಂಕ್ಷ ಸಿಂಗ್) ವಿವಾಹ ಆಗುವುದು ಸರ್ಕಾರ್ ಸ್ವಲ್ಪವೂ ಇಷ್ಟ ಪಡುವುದಿಲ್ಲ. ಇದಕ್ಕಾಗೆ ಕೃಷ್ಣ ತನ್ನ ಊರನ್ನೆ ಬಿಡಬೇಕಾಗುತ್ತದೆ. ಆಗಲೇ ಸರ್ಕಾರ್ ಕಲಿಸಿದ ವಿಧ್ಯೆ ಕುಸ್ತಿಯನ್ನು ಎಂದಿಗೂ ಉಪಯೋಗಿಸುವುದಿಲ್ಲ ಎಂದು ಭಾಷೆ ಸಹ ಕೃಷ್ಣ ನೀಡುತ್ತಾನೆ.

ಅತ್ತ ರಾಣಾ ಸೋಲನ್ನು ಎಂದಿಗೂ ಒಪ್ಪಿಕೊಳ್ಳದ ವ್ಯಕ್ತಿ ಕೃಷ್ಣ ತನ್ನನ್ನು ಸೋಲಿಸುವ ವ್ಯಕ್ತಿ ಅಂತ ರೊಚ್ಚಿಗೇಳುತ್ತಾನೆ. ಹಾಗೆ ಬಾಕ್ಸಿಂಗ್ ಕ್ರೀಡೆಯಲ್ಲಿ ಡೆಂಜರ್ ವ್ಯಕ್ತಿ ಟೋನಿ (ಕಬೀರ್ ದುಹಾನ್ ಸಿಂಗ್) ಸಹ ಕೃಷ್ಣ ಎದುರಿಸುವ ಸನ್ನಿವೇಶ ಒದಗಿ ಬರುತ್ತದೆ. ಅದಕ್ಕೆ ಕಾರಣ ಕೃಷ್ಣ ನೋಡಿದ ಬಡ ಮಕ್ಕಳ ಬೇಗುದಿ.

ಈಗ ಸರ್ಕಾರ್ ಮೊದಲಿನಂತೆ ಕೃಷ್ಣನಿಗೆ ಪ್ರೀತಿ ತೋರಿಸಬೇಕು, ರಾಣಾ ಹಾರಾಟವನ್ನು ಬಗ್ಗು ಬಡಿಯಬೇಕು ಮತ್ತು ಟೋನಿ ಅನ್ನು ಬಾಕ್ಸಿಂಗ್ ರಿಂಗ್ ಅಲ್ಲಿ ಸೋಲಿಸಿ 10 ಕೋಟಿ ಹಣವನ್ನು ಕೃಷ್ಣ ಹೇಗೆ ಬಡ ಪ್ರತಿಭಾವಂತ ಮಕ್ಕಳಿಗೆ ಪಡೆಯುವುದು ಎಂಬುದನ್ನೂ ನೀವು ತೆರೆಯ ಮೇಲೆ ನೋಡಬೇಕು.

ಒಂದಂತು ನಿಜ. ಭಲ ಪ್ರದರ್ಶನ ಮಾಡೋನು ರೌಡಿ, ಆದರೆ ಭಲವಾದ ಕಾರಣಕ್ಕೆ ಹೊಡೆದಾದುವವ ಯೋಧ. ನಾಯಕ ಕೃಷ್ಣ ಎರಡನೇ ಗುಂಪಿಗೆ ಸೇರಿದವ.

ಇದು ಕಿಚ್ಚ ಸುದೀಪ್ ಅವರ ಇಮೇಜಿಗೆ ಪರ್ಫೆಕ್ಟ್ ಆಗಿ ಸೂಟ್ ಆಗಿರುವ ಚಿತ್ರ. ಎಲ್ಲ ಪ್ರಾಕಾರಗಳಲ್ಲೂ ಸಹ ಅವರು ಮಿಂಚಿದಿದ್ದಾರೆ. ಸಾಹಸದಲ್ಲಿ, ಮನ ಮಿಡಿಯುವ ದೃಶ್ಯಗಳಲ್ಲಿ, ಕಾಮಿಡಿ ಸನ್ನಿವೇಶಗಳಲ್ಲಿ, ಎದುರಾಳಿಗೆ ಜವಾಬು ನೀಡುವ ಸಮಯದಲ್ಲೇ ಆಗಲಿ – ಕಿಚ್ಚ ಸುದೀಪ್ ಸೂಪರ್ಬ್.

ಸುನಿಲ್ ಶೆಟ್ಟಿ ಅವರ ಅಭಿನಯ ಈ ಚಿತ್ರದಲ್ಲಿ ತಣ್ಣನೆ ಗಾಳಿಯಂತೆ ಹಾದು ಹೋಗುತ್ತದೆ. ಕೃಷ್ಣನ್ನು ಬೆಳೆಸುವ ವ್ಯಕ್ತಿ. ಆದರೆ ಅವರ ಮೇಕಪ್ ಅಲ್ಲಿ ಹೆಚ್ಚು ಬದಲಾವಣೆ ಇಲ್ಲದೆ ಇರುವುದು ಆಭಾಸ ಆಗಿದೆ.

ಆಕಾಂಕ್ಷ ಸಿಂಗ್ ಸುದೀಪ್ ಎತ್ತರಕ್ಕು ಸೆಟ್ ಆಗ್ತಾರೆ ಮತ್ತು ಕೊಟ್ಟ ಪಾತ್ರವನ್ನು ಸಲೀಸಾಗಿ ಸಹ ಮಾಡಿದ್ದಾರೆ. ಅಪ್ಪಣ್ಣ ಕಾಮಿಡಿ ಇಷ್ಟ ಆಗುತ್ತದೆ. ಕಭೀರ್ ದುಹಾನ್ ಸಿಂಗ್ ಹಾಗೂ ಸುಶಾಂತ್ ಸಿಂಗ್ ಗುಡುಗು, ಶರತ್ ಲೋಹಿತಾಶ್ವ ಹಾಗೂ ಅವಿನಾಶ್ ಅವರ ಗಾಂಭೀರ್ಯದ ಜೊತೆಗೆ ಗದರುವ ಶಕ್ತಿ ಮೆಚ್ಚಿಕೊಳ್ಳಬೇಕು.

ಅರ್ಜುನ್ ಜನ್ಯ ಅವರ ಸಂಗೀತದಲ್ಲಿ ಎರಡು ಹಾಡುಗಳು ಮತ್ತೆ ಕೇಳಬಹುದು. ಚಿತ್ರದ ಹಿನ್ನಲೆ ಸಂಗೀತ ಜೋಡಣೆ ಸಮೃದ್ದವಾಗಿದೆ. ತಾಂತ್ರಿಕ ಸೌಲಭ್ಯದ ಟೀಮ್ ಚಪ್ಪಾಳೆ ಗಿಟ್ಟಿಸುವ ಹಾಗೂ ದೃಶ್ಯಗಳನ್ನು ವೈಭವಿಕರಿಸಿದ್ದಾರೆ. ಚಿತ್ರದ ಅವದಿಯಲ್ಲಿ ಮತ್ತಷ್ಟು ಕತ್ತರಿ ಪ್ರಯೋಗ ಬೇಕಿತ್ತು.

ಪೈಲ್ವಾನ್ ಚಿತ್ರ ರಸಿಕರಿಗೆ ಪಂಚಾಮೃತ! 

ETV Bharat Logo

Copyright © 2025 Ushodaya Enterprises Pvt. Ltd., All Rights Reserved.