ETV Bharat / sitara

ಭಾನು ವೆಡ್ಸ್ ಭೂಮಿ ವಿಮರ್ಶೆ: ಮೊದಲರ್ಧ ಸಹನೆ ಪರೀಕ್ಷೆ ಆಮೇಲೆ ಹುಸಿಯಾಗದ ನಿರೀಕ್ಷೆ - ರಂಗಾಯಣ ರಘು

ಭಾನು ವೆಡ್ಸ್ ಭೂಮಿ
author img

By

Published : Aug 2, 2019, 4:36 PM IST

ಇಂದು ರಾಜ್ಯಾದ್ಯಂತ ತೆರೆಕಂಡಿರುವ ಭಾನು ವೆಡ್ಸ್​​ ಭೂಮಿ ಚಿತ್ರ ಪ್ರೇಕ್ಷಕರಿಂದ ಉತ್ತಮ ಪ್ರಶಂಸೆ ಪಡೆಯುತ್ತಿದೆ. ಈ ಚಿತ್ರದ ವಿಮರ್ಶೆ ಇಲ್ಲಿದೆ ನೋಡಿ..

ಯಾರು ಈ ಭೂಮಿ?

ನಾಯಕಿ ಭೂಮಿ ಮನೆಯಿಂದ ಓಡಿಬಂದು ಮೈಸೂರಿನಲ್ಲಿ ತನ್ನ ಪ್ರಿಯಕರ ಪ್ರಭು ಅನ್ನು ಹುಡುಕುತ್ತಿರುತ್ತಾಳೆ. ಅಪರಿಚಿತ ಜಾಗದಲ್ಲಿ ಅವಳಿಗೆ ನಾಯಕ ಭಾನು ಸಿಗುತ್ತಾನೆ. ತನ್ನ ಪ್ರಿಯಕರ ಹುಡುಕಾಟಕ್ಕೆ ಈತನ ಸಹಾಯ ಕೋರುತ್ತಾಳೆ. ಈ ಓಡಾಟದಲ್ಲಿ ಭಾನು ಹಾಗೂ ಭೂಮಿ ಸ್ನೇಹ ಬೆಳೆದು ಪ್ರೀತಿಗೆ ಬಡ್ತಿ ಪಡೆಯುತ್ತದೆ. ಆದರೆ, ಈ ಪ್ರಭು ಕಥೆ ಏನಾಗುತ್ತದೆ ಎಂಬುದಕ್ಕೆ ಉತ್ತರ ಚಿತ್ರ ನೋಡಿದರೆ ಗೊತ್ತಾಗುತ್ತೆ.

ಕತ್ತರಿ ಹಾಕಬೇಕಿತ್ತು :

ಮೊದಲ ಭಾಗದಲ್ಲಿ ಕೆಲವು ಅನಾವಶ್ಯಕ ಸನ್ನಿವೇಶಗಳನ್ನು ನಿರ್ದೇಶಕರು ಬಿಟ್ಟು ಬಿಡಬಹುದಿತ್ತು. ಪ್ರಭು ಪಾತ್ರದ ಹುಡುಕಾಟಕ್ಕೆ ಮತ್ತಷ್ಟು ಕೌತುಕ ಸನ್ನಿವೇಶಗಳನ್ನು ತುಂಬ ಬಹುದಿತ್ತು.

ಇನ್ನು ಮೊದಲ ಸಿನಿಮಾದಲ್ಲೇ ನಟ ಸೂರ್ಯ ಪ್ರಭು ಸಾಹಸ ಸನ್ನಿವೇಶಗಳಲ್ಲಿ ಸೈ ಅನ್ನಿಸಿಕೊಂಡಿದ್ದಾರೆ. ರಕ್ಷಿತಾ ಮಲ್ನಾಡ್ ಮುದ್ದಾಗಿ ಕಾಣುವುದರ ಜತೆಗೆ ಅಭಿನಯದಲ್ಲೂ ಮೆಚ್ಚುಗೆ ಪಡೆಯುತ್ತಾರೆ. ಮಿಕ್ಕಂತೆ ಚಿತ್ರದಲ್ಲಿ ಇಷ್ಟ ಆಗುವುದು ಶೋಭರಾಜ್ ಅವರ ಪೊಲೀಸ್ ಪಾತ್ರ. ಇಲಾಖೆಯಲ್ಲಿ ಪ್ರೇಮಿಗಳಿಗೆ ಮದುವೆ ಮಾಡಿಸಿದರೆ ಪ್ರೋಮೋಷನ್ ಮತ್ತು ಮನೆಯಲ್ಲಿ ಮಡದಿಯ ಮೆಚ್ಚುಗೆ ಪಡೆಯುವ ಪೋರ್ಷನ್ ಚನ್ನಾಗಿ ಮೂಡಿ ಬಂದಿದೆ. ರಂಗಾಯಣ ರಘು ಅವರ ಉಪಕಥೆ ಪ್ರೇಮಿಗಳಿಗೆ ಒಂದು ಪುಷ್ಟಿ ನೀಡುವುದು. ಹಾಗೆ ರಂಗಾಯಣ ರಘು ಅವರ ಕಲರ್ ಕಲರ್ಸ್ ಹಾಡಿಗೆ ಶೋಭಾರಾಜ್ ಕುಣಿದಿದ್ದಾರೆ ಮಜಬೂತಾಗಿದೆ. ಎ.ಎಂ.ನೀಲ್ ಅವರ ಎರಡು ಮಧುರ ಗೀತೆಗಳು ಮತ್ತು ಗಣೇಶ್ ಹೆಗ್ಡೆ ಛಾಯಾಗ್ರಹಣ ಭೇಷ್ ಅನ್ನಿಸಿಕೊಳ್ಳುತ್ತವೆ.

ಭೂಮಿ ಹಾಗೂ ಭಾನು ಒಟ್ಟಿಗೆ ಸೇರುವರೇ? ಎಂಬುದನ್ನು ನೋಡಲು ಪ್ರೇಕ್ಷಕರಿಗೆ ಸಹನೆ ಅಗತ್ಯ. ಪ್ರಥಮ ನಿರ್ದೇಶನದಲ್ಲಿ ಜೆ.ಕೆ.ಆದಿ ದ್ವಿತೀಯಾರ್ಧದಲ್ಲಿ ತೋರದ ಲಗುಬಗೆ ಮೊದಲಾರ್ಧದಲ್ಲಿ ತೋರಿದ್ದರೆ ಚಿತ್ರ ಸಹನೀಯ ಆಗಿರುತ್ತಿತ್ತು. ಆದರೂ ಚಿತ್ರದಲ್ಲಿ ಬರುವ ಉಪ ಕಥೆಗಳು - ಶೋಭಾರಾಜ್ ಹಾಗೂ ರಂಗಾಯಣ ರಘು ಅವರ ಭಾಗ ಚಿತ್ರಕ್ಕೆ ಒಂದು ಗತ್ತು ತಂದುಕೊಟ್ಟಿದೆ.

ಭಾನು ವೆಡ್ಸ್ ಭೂಮಿ ಚಿತ್ರ ವಿಮರ್ಶೆ

ಅವದಿ – 130 ನಿಮಿಷ, ಕ್ಯಾಟಗರಿ – ಲವ್ ಸ್ಟೋರಿ, ರೇಟಿಂಗ್ – 2.5/5

ಮೊದಲರ್ಧ ಸಹನೆ ಪರೀಕ್ಷೆ ಆಮೇಲೆ ಹುಸಿಯಾಗದ ನಿರೀಕ್ಷೆ

ಚಿತ್ರ – ಭಾನು ವೆಡ್ಸ್ ಭೂಮಿ, ನಿರ್ಮಾಪಕ – ಕಿಶೋರ್ ಶೆಟ್ಟಿ, ನಿರ್ದೇಶಕ – ಜೆ ಕೆ ಆದಿ, ಸಂಗೀತ – ಎ ಎಂ ನೀಲ್, ಛಾಯಾಗ್ರಹಣ – ಗಣೇಶ್ ಹೆಗ್ಡೆ, ತಾರಾಗಣ – ಸೂರ್ಯ ಪ್ರಭು, ರಕ್ಷತಾ ಮಲ್ನಾಡ್, ಶೋಭಾರಾಜ್, ರಂಗಾಯಣ ರಘು, ಗಿರೀಷ್, ಮೈಕೊ ಮಂಜು, ಸಿಲ್ವ ಮೂರ್ತಿ, ಹಂಸ, ಸೂರ್ಯ ಕಿರಣ್, ಪಲ್ಲವಿ ಶೆಟ್ಟಿ, ಎಚ್ ಎಸ್ಮ್ ಟಿ ವಿಜಿ, ಪ್ರವೀಣ್, ಮಿಮಿಕ್ರಿ ರಾಜು ಹಾಗೂ ಇತರರು.

ಭೂಮಿ ಹಾಗೂ ಭಾನು ಒಟ್ಟಿಗೆ ಸೇರುವುದ? ಅದನ್ನು ನೋಡಬೇಕು ಅಂದರೆ ನಿಮಗೆ ಸಹನೆ ಅಗತ್ಯ. ಪ್ರಥಮ ನಿರ್ದೇಶನದಲ್ಲಿ ಜೆ ಕೆ ಆದಿ ದ್ವಿತೀಯಾರ್ಧದಲ್ಲಿ ತೋರಿದೆ ಲಗು ಬಗೆ ಮೊದಲಾರ್ಧದಲ್ಲಿ ತೋರಿದ್ದರೆ ಚಿತ್ರ ಸಹನೀಯ ಆಗಿರುತ್ತಾ ಇತ್ತು. ಆದರೂ ಚಿತ್ರದಲ್ಲಿ ಬರುವ ಉಪ ಕಥೆಗಳು -  ಶೋಭಾರಾಜ್ ಹಾಗೂ ರಂಗಾಯಣ ರಘು ಅವರ ಭಾಗ ಚಿತ್ರಕ್ಕೆ ಒಂದು ಗತ್ತನ್ನು ತಂದುಕೊಟ್ಟಿದೆ.

ಯಾರು ಈ ಭೂಮಿ? ಮನೆಯಿಂದ ಓಡಿಬಂದು ಮೈಸೂರಿನಲ್ಲಿ ತನ್ನ ಪ್ರಿಯಕರ ಪ್ರಭು ಅನ್ನು ಹುಡುಕುತ್ತಾ ಇರುವವಳು. ಅಪರಿಚಿತ ಜಾಗದಲ್ಲಿ ಅವಳಿಗೆ ನಾಯಕ ಭಾನು ಸಿಕ್ಕುತ್ತಾನೆ. ಭಾನು ಸಹಾಯ ಕೋರಿದ ಭೂಮಿ ತನ್ನ ಪ್ರಿಯಕರ ಪ್ರಭು ಹುಡುಕಾಟದಲ್ಲಿ ತೊಡಗುತ್ತಾಳೆ. ಈ ಓಡಾಟದಲ್ಲಿ ಭಾನು ಹಾಗೂ ಭೂಮಿ ಸ್ನೇಹ ಬೆಳೆದು ಪ್ರೀತಿಗೂ ಅದು ಕನ್ವರ್ಟ್ ಆಗುತ್ತದೆ. ಆದರೆ ಈ ಪ್ರಭು ಕಥೆ? ಆಗ ನಿರ್ದೇಶಕರು ಪ್ರಭು ಪಾತ್ರಕ್ಕೆ ಕಳಂಕದ ಮಸಿ ಅಂಟಿಸುವುದು ಭೂಮಿ ತನ್ನ ಯೋಚನೆಯನ್ನು ಸಂಪೂರ್ಣವಾಗಿ ಬದಲಿಸಲು ದಾರಿ ಮಾಡಿಕೊಡುತ್ತದೆ. ಆಮೇಲೆ ಭೂಮಿ ಹಾಗೂ ಭಾನು ಅವರಿಗೆ ದಾರಿ ಸಲೀಸು.

ಕೆಲವು ಅನಾವಶ್ಯಕ ಸನ್ನಿವೇಶಗಳನ್ನು ನಿರ್ದೇಶಕರು ಮೊದಲ ಭಾಗದಲ್ಲಿ ಬಿಟ್ಟು ಬಿಡಬಹುದಿತ್ತು. ಅದರ ಬದಲು ಪ್ರಭು ಪಾತ್ರದ ಹುಡುಕಾಟಕ್ಕೆ ಮತ್ತಷ್ಟು ಕೌತುಕ ಸನ್ನಿವೇಶಗಳನ್ನು ತುಂಬಬಹುದಿತ್ತು.

ಮೊದಲ ಸಿನಿಮಾದಲ್ಲಿ ಸೂರ್ಯ ಪ್ರಭು ಸಾಹಸ ಸನ್ನಿವೇಶಗಳಲ್ಲಿ ಸೈ ಅನ್ನಿಸಿಕೊಂಡಿದ್ದಾರೆ. ರಕ್ಷತಾ ಮಲ್ನಾಡ್ ಮುದ್ದಾಗಿ ಕಾಣುವುದಷ್ಟೇ ಅಲ್ಲ ಅಭಿನಯದಲ್ಲೂ ಸಹ ಮೆಚ್ಚುಗೆ ಗಳಿಸುತ್ತಾರೆ. ಮಿಕ್ಕಂತೆ ಇಷ್ಟ ಆಗುವುದು ಶೋಭರಾಜ್ ಅವರ ಪೊಲೀಸ್ ಇಲಾಖೆಯಲ್ಲಿ ಪ್ರೇಮಿಗಳಿಗೆ ಮದುವೆ ಮಾಡಿಸಿದರೆ ಪ್ರೋಮೋಷನ್ ಮತ್ತು ಮನೆಯಲ್ಲಿ ಮಡದಿಯ ಮೆಚ್ಚುಗೆ ಪೋರ್ಷನ್ ಚನ್ನಾಗಿದೆ. ರಂಗಾಯಣ ರಘು ಅವರ ಉಪಕಥೆ ಪ್ರೇಮಿಗಳಿಗೆ ಒಂದು ಪುಷ್ಟಿ ನೀಡುವುದು. ಹಾಗೆ ರಂಗಾಯಣ ರಘು ಅವರ ಕಲರ್ ಕಲಾರ್ಸ್....ಹಾಡಿಗೆ ಶೋಭಾರಾಜ್ ಕುಣಿದಿದ್ದಾರೆ.

ಎ ಎಂ ನೀಲ್ ಅವರ ಎರಡು ಮಧುರ ಗೀತೆಗಳು ಮತ್ತು ಗಣೇಶ್ ಹೆಗ್ಡೆ ಛಾಯಾಗ್ರಹಣ ಬೇಷ್ ಅನ್ನಿಸಿಕೊಳ್ಳುವ ವಿಚಾರಗಳು. 

ETV Bharat Logo

Copyright © 2025 Ushodaya Enterprises Pvt. Ltd., All Rights Reserved.