ETV Bharat / sitara

ಮಾಡಿದ ತಪ್ಪಿಗೆ ಪ್ರಾಯಶ್ಚಿತ... ನಾಯಕನ ದೊಡ್ಡ ಗುಣ.. ಜನರನ್ನು ಗೆದ್ದ 'ಆಯುಷ್ಮಾನ್​ಭವ' - ಆಯುಷ್ಮಾನ್​ಭವ ಸಿನಿಮಾ ರಿವ್ಯೂ

'ಆಯುಷ್ಮಾನ್​ಭವ'
author img

By

Published : Nov 15, 2019, 9:20 PM IST

ಪಿ. ವಾಸು ನಿರ್ದೇಶನದಲ್ಲಿ ಸೆಂಚುರಿ ಸ್ಟಾರ್ ಶಿವರಾಜ್​ಕುಮಾರ್ ಹಾಗೂ ರಚಿತಾ ರಾಮ್ ಅಭಿನಯದ 'ಆಯುಷ್ಮಾನ್​ಭವ' ಸಿನಿಮಾ ಇಂದು ರಾಜ್ಯಾದ್ಯಂತ ಸುಮಾರು 200 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ಜನರು ಸಿನಿಮಾವನ್ನು ಸಂತೋಷದಿಂದ ಬರಮಾಡಿಕೊಂಡಿದ್ದಾರೆ. ಇನ್ನು ಚಿತ್ರ ನೋಡಿ ಅಭಿಮಾನಿಗಳು ಫಿದಾ ಆಗಿರುವುದು ಗ್ಯಾರಂಟಿ.

ಎಂತ ದೊಡ್ಡ ಶ್ರೀಮಂತ ಆದರೂ ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಂಡರೆ ಮಾತ್ರ ನೆಮ್ಮದಿಯಾಗಿ ಬದುಕಲು ಸಾಧ್ಯ ಎಂಬ ಸಂದೇಶವನ್ನು ಪಿ. ವಾಸು ಚಿತ್ರದಲ್ಲಿ ತೋರಿಸಿದ್ದಾರೆ. ವಾಸು ಅವರ ಪಾತ್ರವರ್ಗದ ಆಯ್ಕೆ, ಚಿತ್ರಕ್ಕೆ ಬೇಕಾದ ಅದ್ಭುತ ಲೋಕೇಶನ್ ಹಾಗೂ ತಾಂತ್ರಿಕ ವರ್ಗ ನಿಜಕ್ಕೂ ಚಿತ್ರವನ್ನು ಗೆಲ್ಲಿಸಿದೆ ಎನ್ನಬಹುದು. ಇನ್ನು 'ಆಯುಷ್ಮಾನ್​ಭವ' ಎಂಬ ಪದಕ್ಕೆ ಅರ್ಥ ಸಿಗುವುದು ಚಿತ್ರದ ಕೊನೆಯ ಸನ್ನಿವೇಶದಲ್ಲಿ.

Ayushman Bhava movie review, ಆಯುಷ್ಮಾನ್​ಭವ ಸಿನಿಮಾ ರಿವ್ಯೂ
ಶಿವರಾಜ್​ಕುಮಾರ್, ಪ್ರಭು

ನಿಶ್ಚಿತಾರ್ಥ ಕಾರ್ಯಕ್ರಮ ಜರುಗಲಿರುವ ದೊಡ್ಡ ಕುಟುಂಬವೊಂದಕ್ಕೆ ನಾಯಕ ಕೃಷ್ಣನ ( ಶಿವರಾಜ್​​ಕುಮಾರ್​) ಆಗಮನವಾಗುತ್ತದೆ. ಈತ ವಧು-ವರ, ಎರಡೂ ಕುಟುಂಬಗಳಿಗೆ ಸಂಬಂಧಿಸಿದ ವ್ಯಕ್ತಿಯಲ್ಲ. ಆದರೆ ನಿಶ್ಚಿತಾರ್ಥ ಮುಗಿಯುವುದರೊಳಗೆ ಮನೆಗೆ ಒಡೆಯ ಗೋಪಿ ( ಅನಂತ್​ನಾಗ್​​​) ಹೃದಯ ಗೆದ್ದಿರುತ್ತಾನೆ ಕೃಷ್ಣ. ಅದೇ ಮನೆಯಲ್ಲಿ ಲಕ್ಷ್ಮಿ ( ರಚಿತಾ ರಾಮ್​​) ಕೂಡಾ ಇರುತ್ತಾಳೆ. ಕೃಷ್ಣ ಯಾರು..? ಯಾವ ಕಾರಣಕ್ಕೆ ಆತ ಆ ಕುಟುಂಬಕ್ಕೆ ಬರುತ್ತಾನೆ..? ಕೃಷ್ಣ ಯಾರು ಎಂದು ತಿಳಿದ ನಂತರ ಆ ಕುಟುಂಬದ ಪ್ರತಿಕ್ರಿಯೆ ಏನು ಎಲ್ಲವನ್ನೂ ನೀವು ತೆರೆ ಮೇಲೆ ನೋಡಬೇಕು.

ಶಿವರಾಜ್​ಕುಮಾರ್ ಅವರ ಭಾವನೆ ತುಂಬಿದ ಅಭಿನಯಕ್ಕೆ ಅಭಿಮಾನಿಗಳು ಮಾರುಹೋಗಿದ್ದಾರೆ. ಒಂದು ಸಂದರ್ಭದಲ್ಲಿ ರಚಿತಾ ರಾಮ್ ಅವರನ್ನು ಸಲಹುವಾಗ ಅವರಂತೂ ಥೇಟ್ ಅಣ್ಣಾವ್ರ ಹಾಗೆ ಕಂಗೊಳಿಸಿ ಭಾವನೆಗಳನ್ನೂ ಹೊರ ಹಾಕುತ್ತಾರೆ. ಅನಂತ್ ​​ನಾಗ್​​​​​ ಅಭಿನಯದ ಬಗ್ಗೆ ಎರಡು ಮಾತಿಲ್ಲ. ರಚಿತಾ ರಾಮ್ ಮಾನಸಿಕ ಅಸ್ವಸ್ಥೆ ಪಾತ್ರದಲ್ಲಿ ಚೆನ್ನಾಗಿ ನಟಿಸಿದ್ದಾರೆ. ರಮೇಶ್ ಭಟ್ ಕೇವಲ ಕಥಾ ನಾಯಕನ ಹಿಂದಿನ ಪರಿಚಯ ಮಾಡಿಸುವಲ್ಲಿ ಅವರ ಅಭಿನಯ ಚಾತುರ್ಯ ವ್ಯಕ್ತಪಡಿಸಿದ್ದಾರೆ. ಅನಂತ ವೇಲು, ಬಾಬು ಹಿರಣ್ಣಯ್ಯ, ಸುಂದರ್ ವೀಣ, ವೀಣಾ ಸುಂದರ್,ಅವಿನಾಶ್, ಯಶಸ್ ಶೆಟ್ಟಿ ಅಭಿನಯದಲ್ಲೂ ಕೂಡಾ ಪಕ್ವತೆ ಇದೆ.

Ayushman Bhava
'ಆಯುಷ್ಮಾನ್​ಭವ' ಚಿತ್ರದ ದೃಶ್ಯ

ಇದು ಗುರುಕಿರಣ್ ಅವರ 100 ಸಂಗೀತದ ಸಿನಿಮಾ. ಎರಡು ಹಾಡುಗಳು ಕೇಳಲು ಬಹಳ ಇಂಪಾಗಿವೆ. ಪಿ.ಕೆ.ಹೆಚ್​. ದಾಸ್​​ ಛಾಯಾಗ್ರಹಣ ಕೂಡಾ ಕಣ್ಣಿಗೆ ಕಟ್ಟುವಂತಿದೆ. ಒಟ್ಟಿನಲ್ಲಿ ಮನೆ ಮಂದಿಯೆಲ್ಲಾ ಕುಳಿತು ನೋಡಬಹುದಾದ ಸಿನಿಮಾ ಇದು.

ಆಯುಷ್ಮಾನ್ ಭವ – ಭಾವನೆಗಳ ಮೆರವಣಿಗೆ

ಅವದಿ – 145 ನಿಮಿಷ, ಕ್ಯಾಟಗರಿ – ಸಾಂಸಾರಿಕ, ರೇಟಿಂಗ್ – 4/5

ಚಿತ್ರ – ಆಯುಷ್ಮಾನ್ ಭವ, ನಿರ್ಮಾಪಕರು – ದ್ವಾರಕೀಶ್ ಹಾಗೂ ಯೋಗೀಶ್, ನಿರ್ದೇಶನ – ಪಿ ವಾಸು, ಸಂಗೀತ – ಗುರುಕಿರಣ್, ಛಾಯಾಗ್ರಹಣ – ಪಿ ಕೆ ಎಚ್ ದಾಸ್, ತಾರಾಗಣ – ಡಾ ಶಿವರಾಜಕುಮಾರ್, ರಚಿತ ರಾಮ್, ಅನಂತ್ ನಾಗ್, ಅವಿನಾಷ್, ರಮೇಶ್ ಭಟ್, ಅನಂತ ವೇಲು, ವೀಣ ಸುಂದರ್, ಸುಂದರ್ ವೀಣ, ನಿನಾಸಮ್ ಅಶ್ವಥ್, ನಿಧಿ ಸುಬ್ಬಯ್ಯ, ಸುಹಾಸಿನಿ, ಶಿವಾಜಿ ಪ್ರಭು, ಸಾಧು ಕೋಕಿಲ, ರಂಗಾಯಣ ರಘು, ಯಷ್ ಶೆಟ್ಟಿ ಹಾಗೂ ಇತರರು ಇದ್ದಾರೆ.

ನಿರ್ದೇಶಕ ಪಿ ವಾಸು ಮತ್ತೊಂದು ಸಾಂಸಾರಿಕ ಚಿತ್ರ ಸುಧೀರ್ಘವಾದ ಆವದಿಯಲ್ಲಿ ಹೇಳಿದ್ದಾರೆ. ಎಂತಹ ಶ್ರೀಮಂತ ಆದರೂ ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಂಡರೆ ಮಾತ್ರ ನಿರ್ಮಲವಾಗಿ ಬದುಕಲು ಸಾಧ್ಯ ಎಂದು ಎತ್ತಿ ತೋರಿಸುವ ಚಿತ್ರ ನಿಜಕ್ಕೂ ಮನೆ ಮಂದಿಯೆಲ್ಲಾ ಕುಳಿತು ನೋಡಬಹುದು. ಆದರೂ ಚಿತ್ರದ ಆವದಿಗೆ ಸ್ವಲ್ಪ ಕತ್ತರಿ ಹಾಕಬಹುದಿತ್ತು. ಅದರಲ್ಲಿ ಸಾಧು ಕೋಕಿಲ ಕೆಲವು ಭಾಗಗಳು ಮತ್ತು ಕಾಡಿನಲ್ಲಿ ಕಂಡುಬರುವ ದೃಶ್ಯಗಳು ಮೊಟಕು ಮಾಡಬಹುದಿತ್ತು. ಪೂರ್ತಿ ನಂಬಿದ ವ್ಯಕ್ತಿ ಪೂರ್ತಿ ಮೋಸ ಹೋಗುವ ಸಂದರ್ಭ ಬಂದಾಗ ಮನಸಿನ ತಾಕಲಾಟಗಳ ಪರಿಚಯ ಮೆಚ್ಚುವಂತೆ ಸೆರೆ ಹಿಡಿದ್ದಾರೆ ನಿರ್ದೇಶಕರು. ಕುಟುಂಬ ಅಂದರೆ ಅದು ಒಂದು ದೇಶಕ್ಕೆ ಸಮಾನ ಎಂದು ನಿರ್ದೇಶಕರು ಪ್ರತಿಪಾದಿಸಿದ್ದಾರೆ.

ಪಿ ವಾಸು ಅವರ ಸ್ವಂತ ಜೀವನದ ಕಥೆ ಇದು ಅನ್ನುವಷ್ಟರ ಮಟ್ಟಿಗೆ ಅವರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರ ಪಾತ್ರವರ್ಗ, ತಾಂತ್ರಿಕತೆ ಆಯ್ಕೆ, ಚಿತ್ರಕ್ಕೆ ಬೇಕಾದ ಅದ್ಬುತ ಲೋಕೇಶನ್ ಚಿತ್ರವನ್ನ ಶ್ರೀಮಂತಗೊಳಿಸಿದೆ.

ಆಯುಷ್ಮಾನ್ ಭವ ಪದಗಳಿಗೆ ಅರ್ಥ ಸಿಗುವುದು ಚಿತ್ರದ ಕಟ್ಟ ಕಡೆಯ ಸನ್ನಿವೇಶದಲ್ಲಿ. ಆದರೆ ಅದು ವರೆವಿಗೂ ಕಣ್ಣ ಮುಂದೆ ಒಂದು ದೊಡ್ಡ ಕುಟುಂಬ ಕಾಣಿಸುತ್ತದೆ. ಆ ಮನೆಯಲ್ಲಿ ಒಂದು ನಿಶ್ಚಿತಾರ್ಥ ಏರ್ಪಾಡು ಆಗಿದೆ. ಅಲ್ಲಿಗೆ ಬರುವವನೇ ಕೃಷ್ಣ (ಡಾ ಶಿವರಾಜಕುಮಾರ್). ಆದರೆ ಈ ಸ್ನೇಹ ಜೀವಿ ಎರಡು ಕುಟುಂಬಗಳಿಗೆ ಸಂಬಂದಿಸಿದವರಲ್ಲ. ಆ ನಿಶ್ಚಿತಾರ್ಥ ಮುಗಿಯುವಷ್ಟರಲ್ಲಿ ಮನೆಯ ಒಡೆಯ ಗೋಪಿ (ಅನಂತ್ ನಾಗ್) ಹೃದಯ ಗೆದ್ದು ಬಿಟ್ಟಿರುತ್ತಾನೆ. ಆದಕ್ಕೆ ಅವನ ಲವಲವಿಕೆ, ತಿಲವಳಿಕೆ, ಜ್ಞಾನ, ಧೈರ್ಯ ಹಾಗೂ ತಾನು ಬಂದಿರುವ ವಿಚಾರವನ್ನು ಪೂರ್ತಿ ಮಾಡುವುದಕ್ಕೆ ತೋರುವ ಜಾಣ್ಮೆ.

ಅಸಲಿಗೆ ಕೃಷ್ಣ ಈ ಮನೆಗೆ ಬಂದಿರುವುದು ಲಕ್ಷ್ಮಿಯನ್ನು (ರಚಿತ ರಾಮ್) ಗುಣ ಪಡಿಸಲು. ಒಂದು ದೊಡ್ಡ ಆಘಾತದಿಂದ ಲಕ್ಷ್ಮಿ ಹುಚ್ಚಿ ಆಗಿಬಿಟ್ಟಿದ್ದಾಳೆ. ಅವಳನ್ನು ಒಂದು ಔಟ್ ಹೌಸ್ ಅಲ್ಲಿ ಬಂದಿಯಾಗಿ ಇಡಲಾಗಿದೆ. ಅವಳನ್ನು ಗುಣ ಮುಖ ಮಾಡಲು ಇರುವ ಏಕೈಕ ಶಕ್ತಿ ಅಂದರೆ ಸಂಗೀತ. ಅದು ಕೃಷ್ಣಣಿಗು ಒಳಿದಿದೆ. ಈ ಸಂಗೀತದ ಮೂಲಕ ಕೃಷ್ಣ ಹಾಗೂ ಲಕ್ಷ್ಮಿ ಮನೆ ಮಂದಿಗೆಲ್ಲ ಮತ್ತೆ ಹಳೆಯ ದಿವಸಗಳು ಜ್ಞಾಪಕಕ್ಕೆ ಬರುತ್ತದೆ. ಆದರೆ ಕೃಷ್ಣ ಹಾಗೂ ಲಕ್ಷ್ಮಿ ನಾಪತ್ತೆ ಆಗುವ ಸಂದರ್ಭ ಸಹ ಬರುತ್ತದೆ. ಅದಕ್ಕೆ ಕಾರಣ ಲಕ್ಷ್ಮಿ ಇನ್ನೂ ಗುಣ ಮುಖ ಆಗದೆ ಅವಳಿಗೆ ಮದುವೆ ನಿಶ್ಚಯ ಮಾಡುವುದು. ಇದನ್ನು ಒಪ್ಪದ ಕೃಷ್ಣ ಇಡೀ ಕುಟುಂಬಕ್ಕೆ ವಿಲನ್ ಆಗಿ ಬಿಡುತ್ತಾನೆ.

ಆದರೆ ಅಸಲಿ ವಿಚಾರವೇ ಬೇರೆ. ಮ್ಯೂಜಿಕ್ ತೆರಪಿ ಇಂದ ಕೃಷ್ಣ ಗುಣ ಮಾಡುವುದಕ್ಕೂ ಮೊದಲು ಲಕ್ಷ್ಮಿ ಅಲ್ಲಿ ಅಡಗಿರುವ ಭಯ ಹಾಗೂ ಗಾಬರಿಯನ್ನು ದೂರ ಮಾಡುತ್ತಾನೆ. ಆಮೇಲೆ ಅವಳನ್ನು ಒಂದು ಸಂಗೀತದ ಶಾಲೆಯಲ್ಲಿ ಕರೆತಂದು ಅವಳನ್ನು ಯಥಾ ಸ್ಥಿತಿಗೆ ತರುತ್ತಾನೆ.

ಕುಪಿತಗೊಂಡ ಲಕ್ಷ್ಮಿ ಕುಟುಂಬಕ್ಕೆ ಅವಳನ್ನು ಕರೆತಂದು ಕೃಷ್ಣ ಬಿಡುವ ಹೊತ್ತಿಗೆ ಯಾರು ಈ ಕೃಷ್ಣ ಎಂಬ ಫ್ಲ್ಯಾಶ್ ಬ್ಯಾಕ್ ಸಹ ಓಪೆನ್ ಆಗುತ್ತದೆ. ಕೃಷ್ಣ ಬೇರಾರೂ ಅಲ್ಲ ಆಗರ್ಭ ಶ್ರೀಮಂತ ಡಾ ಶಿವರಾಮ್. ಅವನು ಏತಕ್ಕೆ ಲಕ್ಷ್ಮಿ ಕುಟುಂಬಕ್ಕೆ ಬಂದ ಎಂಬುದಕ್ಕೆ ಒಂದು ಬಲವಾದ ಕಾರಣ ಇದೆ. ಅದನ್ನು ನೀವು ತೆರೆಯ ಮೇಲೆ ನೋಡಬೇಕು.

ಡಾ ಶಿವರಾಜಕುಮಾರ್ ಅವರ ಭಾವನೆ ತುಂಬಿದ ಅಭಿನಯ ಅಭಿನಯ ಕಲಿಯುತ್ತ ಇರುವವರಿಗೆ ಒಂದು ಮಾದರಿ ಆಗಿ ಇದೆ. ಒಂದು ಸಂದರ್ಭದಲ್ಲಿ – ರಚಿತ ರಾಮ್ ಸಲಹುವಾಗ ಅವರಂತೂ ಥೇಟ್ ಅಣ್ಣಾವ್ರ ಹಾಗೆ ಕಂಗೊಳಿಸಿ ಭಾವನೆಗಳನ್ನೂ ಹೊರ ಹಾಕುತ್ತಾರೆ. ಸಾಮಾನ್ಯ ವ್ಯಕ್ತಿ ಹಾಗೆ, ವೈಧ್ಯನಾಗಿ, ಆಗರ್ಭ ಶ್ರೀಮಂತ ಆಗಿ ಶಿವಣ್ಣ ಅಭಿನಯ ಗರಿಷ್ಠ ಮಟ್ಟದಲ್ಲಿದೆ.

ಅನಂತ್ ನಾಗ್ ಅವರ ಅಭಿನಯದಲ್ಲಿ ಹೆಚ್ಚು ಮೆಚ್ಚುಗೆ ಗಳಿಸುತ್ತಾರೆ. ಆಮೇಲೆ ಅಂಕ ಅಂದರೆ ರಚಿತ ರಾಮ್ ಅವರಿಗೆ. ಹುಚ್ಚಿಯಾಗಿ, ಹೆದರು ಪುಕ್ಕಲಿ ಆಗಿ, ಆಮೇಲೆ ದಿಟ್ಟ ನಿರ್ಧಾರ ತೋರ್ಪಡಿಸಿರುವ ರೀತಿ ಸೊಗಸಾಗಿ ಅಭಿನಯ ನೀಡಿದ್ದಾರೆ. ರಮೇಶ್ ಭಟ್ ಕೇವಲ ಕಥಾ ನಾಯಕ ಹಿಂದಿನ ಪರಿಚಯ ಮಾಡಿಸುವಲ್ಲಿ ಅವರ ಅಭಿನಯ ಚಾತುರ್ಯ ವ್ಯಕ್ತ ಮಾಡಿದ್ದಾರೆ.

ಅನಂತ ವೇಲು, ಬಾಬು ಹಿರಣ್ಣಯ್ಯ, ಸುಂದರ್ ವೀಣ, ವೀಣ ಸುಂದರ್,ಅವಿನಾಶ್, ಯಶಸ್ ಶೆಟ್ಟಿ ಅಭಿನಯದಲ್ಲೂ ಸಹ ಪಕ್ವತೆ ಇದೆ.

ಗುರುಕಿರಣ್ ಅವರ 100 ಸಂಗೀತದ ಚಿತ್ರ. ತಕಿಟ ತಕಿಟ... ಎಂಬ ಹಾಡಿನೊಂದಿಗೆ ಇನ್ನೆರಡು ಹಾಡುಗಳನ್ನು ಉತ್ತಮವಾಗಿ ರಾಗ ಸಂಯೋಜನೆ ಮಾಡಿದ್ದಾರೆ. ಶಿವರಾಜಕುಮಾರ್ ಹಾಗೂ ರಚಿತ ರಾಮ್ ಅರಣ್ಯ ಪ್ರದೇಶಕ್ಕೆ ಬಂದಾಗ ವಿಜಯ ಪ್ರಕಾಷ್ ಹಾಡಿರುವ ಹಾಡು ಸಹ ಮೇಲ್ಮಟ್ಟದಲ್ಲಿದೆ.

ಇಡೀ ಚಿತ್ರವನ್ನೂ ಕಣ್ಣಿಗೆ ಹಬ್ಬದಂತೆ ಮಾಡಿರುವುದು ಪಿ ಕೆ ಎಚ್ ದಾಸ್ ಛಾಯಾಗ್ರಹಣ. ಒಳಾಂಗಣದಲ್ಲೇ ಆಗಲಿ, ದುಮ್ಮಿಕ್ಕುವ ಜಲಪಾತದ ಸುತ್ತ ಮುತ್ತಲೇ ಆಗಲೇ ದಾಸ್ ಈಸ್ ಬಾಸ್ ಇನ್ ಕ್ಯಾಮರಾ.

ಮಗಳ ಮೇಲಿನ ಮೋಹ ಒಂದು ಕಡೆ, ಮತ್ತೊಂದು ಕಡೆ ಪಾಪದ ಪ್ರಾಯಶ್ಚಿತ್ತಕ್ಕೆ ತಾರ್ಕಿಕ ಅಂತ್ಯ ಹಾಡಲು ಪೊರೆಯುವ ಹೃದಯ. ಮನೆ ಮಂದಿಯೆಲ್ಲಾ ನೋಡಲು ಇಷ್ಟು ವಿಚಾರಗಳು ಸಾಕು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.